ಬೀರೂರು ಪುರಸಭೆಗೆ ಶೇ.77 ಮತದಾನ
ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ ಮತದಾರರು
Team Udayavani, Nov 13, 2019, 3:54 PM IST
ಕಡೂರು: ಬೀರೂರು ಪುರಸಭೆಯ 22 ವಾರ್ಡ್‌ಗಳಿಗೆ ಮಂಗಳವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.77.84ರಷ್ಟು ಮತ ಚಲಾವಣೆಯಾಗಿದೆ.
ಪಟ್ಟಣದ 23 ವಾರ್ಡ್‌ಗಳ ಪೈಕಿ 16ನೇ ವಾರ್ಡ್‌ನಲ್ಲಿ ಏಕೈಕ ಅಭ್ಯರ್ಥಿ ಕಣದಲ್ಲಿ ಇದ್ದುದರಿಂದ ನಡೆಯಲಿಲ್ಲ. ಅದನ್ನು ಹೊರತುಪಡಿಸಿ ಒಟ್ಟಾರೆ 17,866 ಮತದಾರರ ಪೈಕಿ 13,908 ಮಂದಿ ಮತ ಚಲಾಯಿಸಿದ್ದಾರೆ. 22 ವಾರ್ಡ್‌ಗಳಿಗೆ ಒಟ್ಟು 22 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅಂಗವಿಕಲರಿ ಗಾಗಿ ವ್ಹೀಲ್‌ಚೇರ್, ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಪುರಸಭೆ ವತಿಯಿಂದ ಮತದಾರರ ಅನುಕೂಲ ಕ್ಕಾಗಿ ಗುರುತಿನ ಪತ್ರಗಳನ್ನು ಮನೆ ಮನೆಗೆ ವಿತರಿಸಿದ ಕಾರಣ ಮತ ಚಲಾಯಿಸುವವರು ಹೆಚ್ಚು ಪರದಾಡಬೇಕಾದ ಸಂದರ್ಭ ಒದಗಿ ಬರಲಿಲ್ಲ.
ಮತದಾರರ ಓಲೈಕೆ ಯತ್ನ: ವೃದ್ಧರನ್ನು ಮತ್ತು ಅಶಕ್ತರನ್ನು ವಾಹನಗಳ ಮೂಲಕ ಮತಗಟ್ಟೆಗಳ ಬಳಿ ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲೆಡೆ ಅಭ್ಯರ್ಥಿಗಳು ಎದುರು ಬದುರು ನಿಂತು ಮತ ಚಲಾಯಿಸಲು ಬರುವವರನ್ನು ಓಲೈಸುತ್ತಿದ್ದ ದೃಶ್ಯ ಕಂಡು ಬಂತು. 2 ಅತೀ ಹೆಚ್ಚು ಶೇ.87.01 ಮತಗಳು ದಾಖಲಾಗಿದ್ದರೆ, ವಾರ್ಡ್ 11 ಅತೀ ಕಡಿಮೆ ಶೇ.61.95ರಷ್ಟು ಮತದಾನವಾಗಿದೆ.
ಬಿಗಿ ಭದ್ರತೆ: ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳದಿಂದ ಒಂದು ಭಾರತೀಯ ಮೀಸಲು ಪಡೆ ತುಕಡಿ, ಚಿಕ್ಕಮಗಳೂರು ಸಶಸ್ತ್ರ ಮೀಸಲು ಪಡೆಯ 2 ತುಕಡಿಗಳು ಕರ್ತವ್ಯ ನಿರ್ವಹಿಸಿದವು. ಬೀರೂರು ಸರ್ಕಲ್ ಇನ್‌ಸ್ಪೆಕ್ಟರ್ ಸತ್ಯನಾರಾಯಣಸ್ವಾಮಿ, ಪಿಎಸ್‌ಐ ಕೆ.ವಿ.ರಾಜಶೇಖರ್ ಮತ್ತು ಸಿಬ್ಬಂದಿ ಎಲ್ಲ ವಾರ್ಡ್‌ಗಳಿಗೂ ತೆರಳಿ ಭದ್ರತೆ ಮತ್ತು ಸುರಕ್ಷತೆಯ ನಿರ್ವಹಣೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.