ಧಾರಾಕಾರ ಮಳೆಗೆ 19 ಮನೆ ನೆಲಸಮ: ಹಸು ಸಾವು
ಯಾವುದೇ ಸಾವು-ನೋವು ಸಂಭವಿಸಿಲ್ಲ: ತಹಶೀಲ್ದಾರ್ ಉಮೇಶ್
Team Udayavani, Aug 11, 2019, 3:59 PM IST
ಕಡೂರು: ಎಮ್ಮೆದೊಡ್ಡಿ ಲಕ್ಕೇನಹಳ್ಳಿಯಲ್ಲಿ ಮಳೆಯಿಂದ ಬಿದ್ದ ಬಾಲ ನಾಯ್ಕ ಅವರ ಮನೆಯನ್ನು ಕಂದಾಯ ನಿರೀಕ್ಷಕ ಪ್ರಸನ್ನ ಪರಿಶೀಲಿಸಿದರು.
ಕಡೂರು: ತಾಲೂಕಿನಾದ್ಯಂತ ಕಳೆದ ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ಬೀರೂರು, ಕಸಬಾ ಮತ್ತು ಯಗಟಿ ಹೋಬಳಿಗಳಲ್ಲಿ 19ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. ಆದರೆ, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಹಶೀಲ್ದಾರ್ ಉಮೇಶ್ ತಿಳಿಸಿದರು.
ಶನಿವಾರ ತಾಲೂಕು ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಳೆಯಿಂದ ಕಡೂರು ಕಂದಾಯ ಇಲಾಖೆ ತಾಲೂಕಿ ನಾದ್ಯಂತ ಎಚ್ಚರಿಕೆ ವಹಿಸಿದೆ. ಮಳೆಯಿಂದಾಗಿ ಯಾವುದೇ ಸಾವು- ನೋವುಗಳು ನಡೆದಿಲ್ಲ. ಆದರೆ, 19ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ವಿದ್ಯುತ್ ಅವಘಡದಿಂದ ಒಂದು ಹಸು ಸಾವನ್ನಪ್ಪಿದೆ ಎಂದು ಹೇಳಿದರು.
ಬೀರೂರು ಹೋಬಳಿಯಲ್ಲಿ ಅತೀ ಹೆಚ್ಚು ಅಂದರೆ 14 ಮನೆಗಳು ನೆಲಸಮವಾಗಿದ್ದು, ಎಮ್ಮೆ ದೊಡ್ಡಿ, ಲಕ್ಕೇನಹಳ್ಳಿಯ ಬಾಲ ನಾಯ್ಕ, ನಿಂಗ ನಾಯ್ಕ, ಮೈಲಾರಿ ನಾಯ್ಕ, ದೇವಿ ಬಾಯಿ, ನೀಲಾ ನಾಯ್ಕ ಎಂಬುವರ ಹೆಂಚಿನ ಮನೆಗಳ ಗೋಡೆಗಳು ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಬಿದ್ದಿವೆ. ಹೊಗರೆಹಳ್ಳಿಯ ಮಹಲಿಂಗಪ್ಪ, ಸಿದ್ಧಪ್ಪ, ನಟರಾಜ್ ಮತ್ತು ಕೆ.ಟಿ.ಚಂದ್ರಶೇಖರಪ್ಪ ಅವರ ಮನೆಗಳು ಗಾಳಿ ಮತ್ತು ಮಳೆಯ ಹೊಡೆತಕ್ಕೆ ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ. ದೊಡ್ಡಘಟ್ಟದ ಬಸಪ್ಪ ಮತ್ತು ದೊಡ್ಡಯ್ಯನವರ ಮನೆ ಕುಸಿದು ಬಿದ್ದವೆ. ಗಾಳಿಹಳ್ಳಿಯ ಹನುಮಂತಪ್ಪ ಮತ್ತು ಬಾಪಣ್ಣ ಅವರ ಮನೆ ಕುಸಿದಿದೆ. ದೋಗೀಹಳ್ಳಿಯ ಸಿದ್ಧಮ್ಮ ಅವರ ಮನೆ ಗೋಡೆ ಬಿದ್ದಿದೆ ಎಂದು ಮಾಹಿತಿ ನೀಡಿದರು.
ಯಗಟಿ ಹೋಬಳಿಯ ಸಣ್ಣೇನಹಳ್ಳಿಯ ರಂಗನಾಥ ಅವರ ವಾಸದ ಮನೆ, ಮರವಂಜಿಯ ತಮ್ಮಯ್ಯ ಅವರ ಮನೆ ಕೊತ್ತಿಗೆರೆ ಗ್ರಾಮದ ಸಿದ್ಧಪ್ಪ ಅವರ ಮನೆ, ಕುಪ್ಪಾಳು ಗ್ರಾಮದ ಮೂರ್ತಪ್ಪ ಅವರ ವಾಸದ ಮನೆ, ಬೀರನಹಳ್ಳಿ ಗ್ರಾಮದ ರಾಮ್ಲಾ ನಾಯ್ಕ ಅವರ ಮನೆಗಳು ನೆಲಕುರುಳಿವೆ. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಸಮಸ್ಯೆಗಳಿದ್ದರೆ ಸಂಬಂಧಿಸಿದ ಇಲಾಖೆಗೆ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಮನವಿ ಮಾಡಿದರು.
ಬೀರೂರು ವಲಯ ಕಂದಾಯ ನಿರೀಕ್ಷಕ ಪ್ರಸನ್ನ, ಗ್ರಾಮ ಲೆಕ್ಕಿಗರಾದ ಚಂದ್ರಶೇಖರ್, ಸಿದ್ಧಪ್ಪ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
MUST WATCH
ಹೊಸ ಸೇರ್ಪಡೆ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.