ವಕೀಲಿ ವೃತ್ತಿ ಪಾವಿತ್ರ್ಯತೆ ಕಾಪಾಡಿ: ಸುಧೀಂದ್ರ ರಾವ್
ಕಂಪ್ಯೂಟರ್ ಬಳಕೆಯಿಂದ ವಕೀಲರು ಸೋಮಾರಿಗಳಾಗುವ ಆತಂಕ
Team Udayavani, Jul 28, 2019, 1:03 PM IST
ಕಡೂರು: ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯ ಕಟ್ಟಡದ ಮೊದಲನೇ ಮಹಡಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಉದ್ಘಾಟಿಸಿದರು.
ಕಡೂರು: ವಕೀಲ ವೃತ್ತಿ ಇಂಜಿನಿಯರ್ ಹಾಗೂ ವೈದ್ಯ ವೃತ್ತಿಯನ್ನು ಹಿಂದಿಕ್ಕಿದ್ದು, ಅದರ ಪಾವಿತ್ರ್ಯತೆ ಕಾಪಾಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಸಲಹೆ ನೀಡಿದರು.
ಜಿಲ್ಲಾ ನ್ಯಾಯಾಲಯ, ಚಿಕ್ಕಮಗಳೂರು ಲೋಕೋಪಯೋಗಿ ಇಲಾಖೆ, ಕಡೂರು ವಕೀಲರ ಸಂಘ ಶನಿವಾರ ಕಡೂರು ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಲಯ ಕಟ್ಟಡದ ಮೊದಲನೇ ಮಹಡಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂಜಿನಿಯರ್ ಮತ್ತು ವೈದ್ಯ ವೃತ್ತಿಗೆ ಮಾತ್ರ ಹೆಚ್ಚಿನ ಆದ‌್ಯತೆ ನೀಡುತ್ತಿದ್ದ ಸಮಾಜ, ಇಂದು ವಕೀಲ ವೃತ್ತಿಗೆ ಆದ್ಯತೆ ನೀಡುತ್ತಿದೆ. ಹಾಗಾಗಿ, ವಕೀಲ ವೃತ್ತಿಗೆ ಇವೆಲ್ಲವುಗಳನ್ನು ಹಿಂದಿಕ್ಕಿದೆ ಎಂದರು.
ವೃತ್ತಿಗೆ ಬಂದಾಕ್ಷಣ 5-6 ವರ್ಷಗಳ ಸತತ ಕಲಿಕೆಗೆ ಒತ್ತು ನೀಡಬೇಕು. ಪುಸ್ತಕಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕಾಗುತ್ತದೆ. ವಕೀಲ ವೃತ್ತಿ ಅತ್ಯಂತ ಪಾವಿತ್ರ್ಯತೆಯಿಂದ ಕೂಡಿದೆ. ತಮ್ಮ ಸ್ವಂತಿಕೆಯನ್ನು ಬೆಳೆಸಿಕೊಳ್ಳುವುದರ ಮೂಲಕ ನ್ಯಾಯ ನೀಡಬೇಕು. ಇತ್ತೀಚೆಗೆ ಕಂಪ್ಯೂಟರ್ ಬಳಕೆಯಿಂದ ವಕೀಲರು ಸೋಮಾರಿಗಳಾಗುತ್ತಿದ್ದಾರೆ ಎಂದು ವಿಷಾಸಿದರು.
ಟಿ.ವಿ., ಮೊಬೈಲ್, ಇಂಟರ್‌ನೆಟ್ ಬಳಕೆಯಿಂದ ಫಾರಂ ಮತ್ತು ಅರ್ಜಿಗಳನ್ನು ತುಂಬುವ ಪ್ರಕ್ರಿಯೆಯೇ ನಿಂತು ಹೋಗುತ್ತಿದೆ. ಇದನ್ನು ಬಳಕೆ ಮಾಡಿಕೊಳ್ಳಬೇಡಿ. ಸ್ವತಃ ತಾವೇ ಅರ್ಜಿಗಳನ್ನು ಪೂರ್ಣಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡಬೇಕು. ಯಾವುದೇ ಹುದ್ದೆ ಶಾಶ್ವತವಲ್ಲ. ನಮ್ಮ ಕೈಲಾದ ಕರ್ತವ್ಯವನ್ನು ಮಾಡಬೇಕು. ದೀನ, ದಲಿತ ಮತ್ತು ಬಡವರಿಗೆ ನಾವು ಮಾಡಿದ ಸೇವೆಯೇ ನಮ್ಮನ್ನು ಗುರುತಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಕಡೂರು ವಕೀಲರ ಸಂಘ ಇಲ್ಲಿನ ನ್ಯಾಯಾಲಯವನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನಾಗಿ ಮಾಡಲು ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಿರಿಯ ಮತ್ತು ಕಿರಿಯ ವಕೀಲರಿಗೆ ಮಹಾಭಾರತ, ರಾಮಾಯಣದ ಕಥೆಗಳನ್ನು ಹೇಳುವುದರ ಮೂಲಕ ವಕೀಲರನ್ನು ನಗುವಿನಲ್ಲಿ ತೇಲಿಸಿದ ನ್ಯಾಯಮೂರ್ತಿಗಳು, ಕರ್ತವ್ಯದ ಬಗ್ಗೆ ಚಾಟಿ ಬೀಸಿದರು. ವಕೀಲರಿಗೆ ಕಾರ್ಯಾಗಾರ, ಸೆಮಿನಾರ್‌ಗಳನ್ನು ಏರ್ಪಡಿಸಲು ಸಲಹೆ ನೀಡಿದರು. ಕಡೂರು ನ್ಯಾಯಾಲಯವನ್ನು ರಾಜ್ಯದಲ್ಲಿಯೇ ಮಾದರಿ ನ್ಯಾಯಾಲಯವನ್ನಾಗಿ ಮಾಡಲು ಮುಂದಾಗಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧಿಧೀಶ ಉಮೇಶ್ ಎಂ. ಅಡಿಗ ಅವರು ಮಾತನಾಡಿ, ತ್ವರಿತ ನ್ಯಾಯ ನೀಡಲು ನ್ಯಾಯಾಲಯಗಳು ಸಿದ್ಧವಾಗಿದ್ದು, ಲೋಕ ಅದಾಲತ್, ರಾಜೀ ಸಂಧಾನಗಳ ಮೂಲಕ ನ್ಯಾಯ ನೀಡಲಾಗುತ್ತಿದೆ. ಕಡೂರು ನ್ಯಾಯಾಲಯವನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಾಡಲು ತಾವು ಇಟ್ಟಿರುವ ಬೇಡಿಕೆ ನೈಜವಾಗಿದ್ದು, ಸಾಕಾರವಾಗಲಿ ಎಂದು ಆಶಿಸಿದರು.
ಕಡೂರು ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಾಜು, ಚಂದನ್, ರಘುರಾಮ್, ದೀಪು, ಸರ್ಕಾರಿ ವಕೀಲರಾದ ಹರೀಶ್, ಚಿಕ್ಕಮಗಳೂರಿನ ನ್ಯಾಯಾಧಿಧೀಶರಾದ ಎಚ್.ಆರ್.ಹೆಗ್ಗಡೆ, ಕಾನೂನು ಸೇವಾ ಪ್ರಧಾನ ಕಾರ್ಯದರ್ಶಿ ಬಸವರಾಜ್, ಕಡೂರು ವಕೀಲರ ಸಂಘದ ಅಧ್ಯಕ್ಷ ಡಿ.ಎನ್.ಪ್ರಕಾಶ, ಹಿರಿಯ ವಕೀಲರಾದ ಶಿವಕುಮಾರ್, ಎಂ.ಎಸ್.ಯಳವಾರ್, ತರೀಕೆರೆ ಉಪವಿಭಾಗಾಧಿಕಾರಿ ಬಿ.ಆರ್.ರೂಪಾ, ಕಡೂರು ತಹಶೀಲ್ದಾರ್ ಉಮೇಶ್, ಕಡೂರು ವಕೀಲರ ಸಂಘದ ಕಾರ್ಯದರ್ಶಿ ದಾದಾ ಖಲಂದರ್, ಹಿರಿಯ ಮತ್ತು ಕಿರಿಯ ವಕೀಲರು ಮಹಿಳಾ ವಕೀಲರು, ಲೋಕೋಪಯೋಗಿ ಇಲಾಖೆ ಅಭಿಯಂತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.