1.45 ಟಿಎಂಸಿ ನೀರು ಸದ್ಬಳಕೆಯಾಗಲಿ
ಸಮಾನ ಮನಸ್ಕರ ಸಭೆವಾಸ್ತವ ಅವಲೋಕಿಸಿ ವಿಮರ್ಶಿಸಿ: ದತ್ತ
Team Udayavani, Dec 9, 2019, 5:09 PM IST
ಕಡೂರು: ತಾಲೂಕಿಗೆ ಕೃಷ್ಣಾ ಕೊಳ್ಳದಿಂದ ಮಂಜೂರಾಗಿರುವ 1.45 ಟಿಎಂಸಿ ನೀರಿನ ಸದುಪಯೋಗ ಸಂಪೂರ್ಣವಾಗಿ ತಾಲೂಕಿಗೆ ಲಭಿಸಲಿ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಮ್ಮ ಭಾಗದ ನ್ಯಾಯಯುತ ಹಕ್ಕಿನಲ್ಲಿ ಸರಕಾರದಿಂದ ಕೊಡಲ್ಪಟ್ಟಿರುವ ನೀರಿನ ಸದ್ಬಳಕೆ ಮಾಡಿಕೊಳ್ಳುವಂತೆ ಈ ಹಿಂದೆಯೇ ಯಗಟಿ ಗ್ರಾಮದಲ್ಲಿ ಸೇರಿದ್ದ ಸಮಾನ ಮನಸ್ಕರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಆದರೆ ಇತ್ತೀಚಿನ ಮಾಧ್ಯಮಗಳ ವರದಿ ನೋಡಿದಾಗ ತಾಲೂಕಿನ ಹಕ್ಕಾದ ನೀರಿನ ಬಳಕೆ ಕಡಿತಗೊಳಿಸುವ ಆತಂಕ ಎದುರಾಗಿದೆ. ಕೆಲವರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಈ ಆತಂಕ ಇನ್ನೂ ಹೆಚ್ಚಾಗಿದೆ. ವಾಸ್ತವ ಅವಲೋಕಿಸಿ ವಿಚಾರ ವಿಮರ್ಶೆ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ತಾಲೂಕಿನ ನೀರಾವರಿ ಕನಸಿಗೆ ಹಲವು ವರ್ಷಗಳ ಇತಿಹಾಸವಿದೆ. ತಾವು ಶಾಸಕರಾಗಿದ್ದಾಗ ಗರಿಗೆದರಿದ ಹೆಬ್ಬೆ ನೀರಾವರಿ ಯೋಜನೆ ನಂತರದ ದಿನದಲ್ಲಿ ಕಾರ್ಯಸಾಧುವಲ್ಲ ಎಂದು ಸರಕಾರವೇ ಉತ್ತರ ನೀಡಿದ್ದರಿಂದ ಪರ್ಯಾಯವಾಗಿ ಗೊಂದಿ ಆಣೆಕಟ್ಟು ಯೋಜನೆಯನ್ನು ಸರಕಾರದ ಮುಂದೆ ತಾವು ಪ್ರಸ್ತಾಪಿಸಿದ್ದಲ್ಲದೇ ಯೋಜನೆಗೆ ಸಂಬಂಧಪಟ್ಟಂತೆ ಸರ್ವೇ ಕಾರ್ಯದಿಂದ ಆರಂಭಗೊಂಡು ವಿಸ್ತೃತವಾದ ಡಿಪಿಆರ್ ಯೋಜನೆಯನ್ನು ಕರ್ನಾಟಕ ನೀರಾವರಿ ಮಂಡಳಿ ಸಭೆಯವರೆಗೆ ಯೋಜನೆ ಕೊಂಡೊಯ್ದಿದ್ದೆ ಎಂದು ವಿವರಿಸಿದರು.
ಇದೀಗ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಕಚೇರಿಯು ಭದ್ರಾ ಆಣೆಕಟ್ಟಿನ ಕೆಳಭಾಗದಿಂದ ನೀರನ್ನು ಚಿಕ್ಕಮಗಳೂರು ಜಿಲ್ಲೆಯ ಮದಗದಕೆರೆ, ಅಯ್ಯನಕೆರೆ, ಬೆಳವಾಡಿಕೆರೆ ಸೇರಿದಂತೆ ಚಿಕ್ಕಮಗಳೂರು, ತರೀಕೆರೆ ಕಡೂರು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಸೇರಿದಂತೆ ಒಟ್ಟು 167 ಕೆರೆಯನ್ನು ತುಂಬಿಸುವ ಸರ್ವೇ ಮತ್ತಿತರ ಕೆಲಸಕ್ಕೆ 19-10-2019 ರಂದು ಟೆಂಡರ್ ಕರೆದಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ಈ ಮೊದಲು ಸರಕಾರದ ಮುಂದಿದ್ದ ಗೊಂದಿ ಆಣೆಕಟ್ಟು ಯೋಜನೆಯಲ್ಲಿ ಕಡೂರು ತಾಲೂಕಿನ ಮದಗದಕೆರೆ, ದೇವನಕೆರೆ ಹಾಗೂ ವಿಷ್ಣುಸಮುದ್ರ ಕೆರೆಗೆ ನೀರನ್ನು ಹರಿಸಿ ನಂತರ ಅದರ ಸರಣಿ ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಸಿದ್ಧಪಡಿಸಲಾಗಿತ್ತು. ಇದರಿಂದ ತಾಲೂಕಿನ ಹಕ್ಕಾದ 1.45 ಟಿಎಂಸಿ ನೀರು ಸಂಪೂರ್ಣವಾಗಿ ತಾಲೂಕಿಗೆ ಲಭಿಸುತ್ತಿತ್ತು. ಆದರೆ ಇದೀಗ ಕರೆದಿರುವ ಟೆಂಡರ್ ಆಧಾರದ ಯೋಜನೆಯಲ್ಲಿ ತಾಲೂಕಿನ ಹಕ್ಕಿನ ನೀರು ಮೊಟಕಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೊಸ ಯೋಜನೆಯಲ್ಲಿ ಕಡೂರು ತಾಲೂಕಿನ 87 ಕೆರೆಗಳು, ತರೀಕೆರೆಯ 39, ಚಿಕ್ಕಮಗಳೂರಿನ 37 ಹಾಗೂ ಅರಸೀಕೆರೆ ತಾಲೂಕಿನ 4 ಕೆರೆಗಳು ನೀರನ್ನು ಕಾಣುತ್ತವೆ ಎಂದು ನೀರಾವರಿ ನಿಗಮದ ದಾಖಲೆಗಳು ಹೇಳುತ್ತವೆ. ವಾಸ್ತವವಾಗಿ ಈ ಹಿಂದೆ ಗೊಂದಿ ಆಣೆಕಟ್ಟು ಯೋಜನೆಯಲ್ಲಿ ವಿಷ್ಣುಸಮುದ್ರ ಕೆರೆಗೆ 0.86 ಟಿಎಂಸಿ ನೀರನ್ನು ಮೀಸಲಿಡಲಾಗಿತ್ತು. ಹೊಸ ಯೋಜನೆಯಲ್ಲಿ ಅದು 0.2 ಕ್ಕೆ ಇಳಿದಿದ್ದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಆಗಿದೆ ಎಂದು ತಿಳಿಸಿದರು.
ಒಟ್ಟಾರೆ ಒಂದು ತಾರ್ಕಿಕ ಅಂತ್ಯ ಕಂಡಿದ್ದ ಗೊಂದಿ ಆಣೆಕಟ್ಟು ಯೋಜನೆಯನ್ನು ಸಂಪೂರ್ಣವಾಗಿ ತಿರುವು-ಮುರುವು ಮಾಡಿ ಭದ್ರಾ ಉಪಕಣಿವೆ ಯೋಜನೆ ಎಂದು ನಾಮಾಂಕಿತಗೊಳಿಸಿ ಜಾರಿ ಮಾಡಲು ಹೊರಟಿರುವ ಸರಕಾರದ ನಿರ್ಧಾರ ಸರಿಯಲ್ಲ ಎಂದರು.
ವಿಷ್ಣುಸಮುದ್ರ ಕೆರೆ ನೀರಿನ ಬಳಕೆದಾರರ ಹೋರಾಟ ಸಮಿತಿಯ ಶರತ್, ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್, ವೈ.ಎಸ್. ರವಿಪ್ರಕಾಶ್, ಗೋವಿಂದಪ್ಪ, ಎ.ಪಿ. ಚಂದನ್, ಶ್ರೀರಾಂಪುರ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.