ದೇವಾಲಯಗಳಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ಸಾಧ್ಯ
Team Udayavani, Nov 9, 2019, 12:47 PM IST
ಕಡೂರು: ಆಧುನಿಕತೆ ಹೆಚ್ಚಾದಂತೆ ಗ್ರಾಮಗಳಲ್ಲಿ ಸೌಹಾರ್ದತೆ ಕಡಿಮೆಯಾಗುತ್ತಿದೆ. ಇದನ್ನು ಮತ್ತೆ ಬೆಸೆಯುವಲ್ಲಿ ದೇವಾಲಯಗಳ ಪಾತ್ರ ಹಿರಿದಾಗಿದೆ. ದೇಗುಲಗಳಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಮೇಲ್ಮನೆ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಹೇಳಿದರು.
ತಾಲೂಕಿನ ವಡೇರಳ್ಳಿ ತಾಂಡಾದಲ್ಲಿ ಗ್ರಾಮಸ್ಥರು ನಿರ್ಮಿಸಿದ ನೂತನ ಶ್ರೀ ರಾಮ, ಶ್ರೀ ಸೇವಾಲಾಲ್ ಮರಿಯಮ್ಮ ಹಾಗೂ ಪ್ಲೇಗಿನಮ್ಮ ದೇವಿಯವರ ಶಿಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ಶಿಖರ ಕಳಶಾರೋಣದ ಧಾರ್ಮಿಕ ಸಮ್ಮೇಳನಲ್ಲಿ ಮಾತನಾಡಿದರು.
ಮನಸ್ಸು ಮನಸ್ಸುಗಳನ್ನು ಬೆಸೆಯುವ, ನಂಬಿಕೆ, ಔದಾರ್ಯತೆ ಮತ್ತು ಹೃದಯ ಶ್ರೀಮಂತಿಕೆಯನ್ನು ಗ್ರಾಮಗಳಲ್ಲಿ ಕಾಣಬೇಕಾದರೆ ಇಂತಹ ದೇವಾಲಯಗಳೇ ಕಾರಣವಾಗಿವೆ. ವಡೇರಳ್ಳಿಯ ಲಂಬಾಣಿ ಜನಾಂಗದ ಹೃದಯ ಶ್ರೀಮಂತಿಕೆ ನಿಜಕ್ಕೂ ಶ್ರೀಮಂತವಾದದ್ದು. ಇಲ್ಲಿನ ಜನ ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರಾಗಿದ್ದಾರೆ. ತಾಲೂಕಿನಲ್ಲಿಯೇ ದೇವಾಲಯದ ಮುಂಭಾಗ ಬಾವಿ ಮತ್ತು ಉದ್ಯಾನ ನಿರ್ಮಿಸಿ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಹಿರಿಯರ ನೋವು-ನಲಿವುಗಳನ್ನು ಯುವ ಜನಾಂಗ ಅರಿಯಬೇಕು. ಲಂಬಾಣಿ ಜನಾಂಗದವರು ಜಲಿಯನವಾಲಬಾಗ್ ಹತ್ಯಾಕಾಂಡದಲ್ಲಿಯೂ ಜೊತೆಗಿದ್ದರು ಎಂದು ಇತಿಹಾಸವಿದೆ. ಸಮಾಜ ಸೇವೆ ಮಾಡಬೇಕು. ಯುವಜನಾಂಗ ಇದನ್ನು ಅರಿತು ಹಿರಿಯರ ಬದುಕಿಗೆ ಆಸರೆಯಾಗಬೇಕು. ಗಿಡಮರಗಳನ್ನು ನಮ್ಮ ಮಕ್ಕಳಂತೆ ಪ್ರೀತಿಸಬೇಕು. ಅಂದಾಗ ಮಾತ್ರ ನಮ್ಮ ಮನುಕುಲ ಉಳಿಯುತ್ತದೆ. ದೇವಾಲಯಗಳನ್ನು ನಿರ್ಮಿಸಿದಂತೆ ತಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳಬೇಕು.
ಗುರುಹಿರಿಯರಲ್ಲಿ ಭಕ್ತಿ ಇಡಬೇಕು. ಒಳ್ಳೆಯ ನಡೆನುಡಿಯಿಂದ ತಮ್ಮ ಜೀವನವನ್ನು ನಡೆಸಿ ಬೇರೆಯವರಿಗೆ ಮಾದರಿಯಾಗಬೇಕು. ದೇವಾಲಯ ನಿರ್ಮಾಣ ಮಾಡುವುದು ದೊಡ್ಡದಲ್ಲ. ಅದರ ಶುಚಿತ್ವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಾಲಯ ಸಮಿತಿಯ ಸಂಪತ್ತು, ಸುಮಾರು 150 ಕುಟುಂಬಗಳು ಗ್ರಾಮದಲ್ಲಿದ್ದು, ಪ್ರತೀ ಕುಟುಂಬ 40 ಸಾವಿರದಂತೆ ವಂತಿಗೆ ಹಾಕಿ ಜನಪ್ರತಿನಿ ಧಿಗಳು ಮತ್ತು ದಾನಿಗಳಿಂದ ಸುಮಾರು ಒಂದೂವರೆ ಕೋಟಿ ರೂ.ಪಡೆದು ಗ್ರಾಮಸ್ಥರ ಶ್ರಮದಿಂದ ದೇವಾಲಯ ನಿರ್ಮಿಸಲಾಗಿದೆ.
2013ರಲ್ಲಿ ಪ್ರಾರಂಭವಾದ ದೇವಾಲಯ ಕಾಮಗಾರಿ 2019ಕ್ಕೆ ಮುಗಿದು ಉದ್ಘಾಟನೆಯಾಗಿದೆ ಎಂದರು. ಜಿಪಂ ಉಪಾಧ್ಯಕ್ಷ ವಿಜಯಕುಮಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಸರದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಬಂಜಾರ ಜನಾಂಗದವರು ಶ್ರಮಜೀವಿಗಳು.ಯಾರಿಗೂ ದೌರ್ಜನ್ಯ,ದಬ್ಟಾಳಿಕೆ ಹಾಗೂ ಕೇಡನ್ನು ಬಯಸದೆ ಎಲ್ಲರಿಗೂ ಒಳಿತನ್ನು ಬಯಸುವ ಏಕೈಕ ಸಮಾಜ ಲಂಬಾಣಿ ಸಮಾಜ. ಕಾಯಕವೇ ಕೈಲಾಸ ಎಂದು ಪ್ರಾಮಾಣಿಕವಾಗಿ ಬದುಕಿ ಇತರರಿಗೆ ಮಾದರಿಯಾಗಿದ್ದಾರೆ.
ಇಂತಹ ಭವ್ಯ ದೇವಾಲಯವನ್ನು ವಡೇರಳ್ಳಿ ತಾಂಡಾದವರು ನಿರ್ಮಿಸಿದ್ದಾರೆ ಎಂದರು. ಸಾಹಿತಿ ಚೆಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿದರು. ತಾಪಂ ಸದಸ್ಯ ಆನಂದನಾಯ್ಕ ಬಂಜಾರ ಜನಾಂಗ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವಿಗ್ರಹ ದಾನಿಗಳಾದ ಜಾವಗಲ್ ತಿಮ್ಮಣ್ಣ, ನಿವೃತ್ತ ಉಪನಿರ್ದೇಶಕ ರಾಮಾನಾಯ್ಕ, ನಿವೃತ್ತ ಯುವಜನ ಕ್ರೀಡಾ ಇಲಾಖೆಯ ಲಲಿತಾಬಾಯಿ, ಎಂಐಎಸ್ ಎಲ್‌ನ ಶಂಕರ ಚೌಹ್ವಾಣ್, ಜಿಪಂ ಮಾಜಿ ಸದಸ್ಯೆ ಹೇಮಾವತಿ, ಗ್ರಾಮದ ತೀರ್ಥಾನಾಯ್ಕ, ಜಯಣ್ಣ, ದೇವರಾಜ ನಾಯ್ಕ, ವಸಂತ ನಾಯ್ಕ, ಗಿರೀಶ ನಾಯ್ಕ, ಆನಂದ ನಾಯ್ಕ, ರಮೇಶ ನಾಯ್ಕ ಹಾಗೂ ಸೇವಾಲಾಲ್ ಯುವಕ ಸಂಘದ ಸದಸ್ಯರು, ಗ್ರಾಮದ ನಾಯಕ್, ಡಾವ್, ಕಾರ್ಬಾರಿ ಹಾಗೂ ವಡೇರಳ್ಳಿ ತಾಂಡ್ಯದ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.