ಕಡೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಟ್ಯಾಂಕರ್ ಮೂಲಕ 39 ಹಳ್ಳಿಗಳಿಗೆ ನೀರು ಪೂರೈಕೆ ಪ್ರತಿನಿತ್ಯ ನೀರಿಗಾಗಿ 1.35 ಲಕ್ಷ ರೂ. ವೆಚ್ಚ
Team Udayavani, Apr 13, 2019, 11:56 AM IST
ಕಡೂರು: ಎಸ್. ಬಿದರೆ ಗ್ರಾಮದಲ್ಲಿ ಜಾನುವಾರು ತೊಟ್ಟಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿರುವುದು.
ಕಡೂರು: ತಾಲೂಕಿನಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದ್ದು, ಸಮಸ್ಯೆ
ಹೋಗಲಾಡಿಸಲು ದಿನವೊಂದಕ್ಕೆ ಸುಮಾರು 113 ಟ್ಯಾಂಕರ್ ನೀರನ್ನು
ಪೂರೈಸಲಾಗುತ್ತಿದೆ.
ತಾಲೂಕಿನಾದ್ಯಂತ ಈ ಬಾರಿ 16 ಗ್ರಾಮ ಪಂಚಾಯತ್ ವ್ಯಾಪ್ತಿಯ
ಸುಮಾರು 39 ಹಳ್ಳಿಗಳಿಗೆ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರನ್ನು
ಪೂರೈಸುತ್ತಿದ್ದು, ಪ್ರತಿ ದಿನ 113 ಟ್ಯಾಂಕರ್ ನೀರು ನೀಡಲಾಗುತ್ತದೆ.
ಮತಿಘಟ್ಟ, ಹುಲಿಕೆರೆ, ವಿ. ಯರದಕೆರೆ, ಚೀಲನಹಳ್ಳಿ, ಬಾಣೂರು, ನಾಗೇನಹಳ್ಳಿ, ದೇವನೂರು, ಚಿಕ್ಕದೇವನೂರು, ಸಿಂಗಟಗೆರೆ, ಆಣೇಗೆರೆ, ನಾಗರಾಳು, ಕುಂಕಾನಾಡು, ಎಸ್.ಬಿದರೆ, ನಿಡಘಟ್ಟ, ಜೋಡಿಹೋಚಿಹಳ್ಳಿ ಮತ್ತು ಅಣ್ಣಿಗೆರೆ ಗ್ರಾಮ ಪಂಚಾಯತ್‌ನ 39 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ
ಸಮಸ್ಯೆ ಎದುರಾಗಿದೆ. ತಾಲೂಕಿನ ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ
ಹೆಚ್ಚಿದ್ದು, 5,695 ಕುಟುಂಬಗಳಿಗೆ ತೀವ್ರವಾದ ಸಮಸ್ಯೆಯಾಗಿದೆ.
ಟಾಸ್ಕ್ಪೋರ್ಸ್ ಸಮಿತಿ ಅನುಮೋದನೆ ಪಡೆದು ಟ್ಯಾಂಕರ್ ಮೂಲಕ ನೀರನ್ನು ನೀಡಲಾಗುತ್ತಿದ್ದು. ಒಂದು ಟ್ಯಾಂಕರ್‌ಗೆ (4,000 ಸಾವಿರ ಲೀಟರ್) 1000 ರೂ, (5000 ಸಾವಿರ ಲೀಟರ್ ಟ್ಯಾಂಕರ್) 1200 ರೂ. ನೀಡಲಾಗುತ್ತಿದೆ. ಪ್ರತಿದಿನ 113ಕ್ಕೂ ಹೆಚ್ಚಿನ ಟ್ಯಾಂಕರ್ ಮೂಲಕ ನೀರನ್ನು ಸುಮಾರು 1.35 ಲಕ್ಷ ರೂ. ವೆಚ್ಚದಲ್ಲಿ ನೀಡಲಾಗುತ್ತಿದೆ.
ಗರ್ಜೆ ಗ್ರಾಮ ಪಂಚಾಯತ್‌ನ ಜಿ. ಮಾದಾಪುರ, ಸಿಂಗಟಗೆರೆ ಗ್ರಾಪಂ
ಹನುಮಂತಪುರ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಯಿಂದ
ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಕೊಳವೆ ಬಾವಿ
ಮಾಲೀಕರಿಗೆ ತಿಂಗಳಿಗೆ 15 ಸಾವಿರ ಗೌರವ ಧನ ನೀಡಲಾಗುತ್ತಿದೆ. ಜಾನುವಾರು ತೊಟ್ಟಿಗಳಿಗೆ ನೀರನ್ನು ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ.
ಪ್ರತಿದಿನ 10 ಟ್ಯಾಂಕರ್ ನೀರನ್ನು ಎಸ್. ಬಿದರೆ, ಗುಂಡುಸಾಗರ,
ಚಂದ್ರಶೇಖರಪುರ, ಹಳ್ಳದಹಳ್ಳಿ, ಶೆಣಬಿನಗೊಂದಿ, ಹ್ಯಾರಳಘಟ್ಟ
ಗ್ರಾಮಗಳಲ್ಲಿನ ಜಾನುವಾರು ತೊಟ್ಟಿಗಳನ್ನು ತುಂಬಿಸಲಾಗುತ್ತಿದೆ.
ಹುಲಿಕೆರೆ ಶುದ್ಧಗಂಗಾ ಘಟಕಗಳಲ್ಲಿ ಕೊಳವೆಬಾಯಿಯಿಂದ ನೀರು
ಬಾರದೆ ಇದ್ದು, ಟ್ಯಾಂಕರ್ ಮೂಲಕ 3 ಶುದ್ಧಗಂಗಾ ಘಟಕಗಳಿಗೆ ನೀರನ್ನು
ನೀಡಲಾಗುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ 20 ಗ್ರಾಮಗಳಿಗೆ ಟ್ಯಾಂಕರ್
ಮೂಲಕ ನೀರನ್ನು ನೀಡಲಾಗುತ್ತಿದ್ದು, ಇದೀಗ ಸಂಖ್ಯೆ ಏರುತ್ತಿದ್ದು 39
ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಬೇಸಿಗೆ ಮುಂದುವರಿದಿರುವುದರಿಂದ
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ಕೂಡಲೆ
ಸಂಬಂಧಿ ಸಿದ ಪಿಡಿಒ ಮತ್ತು ಕಾರ್ಯದರ್ಶಿಗಳ ಗಮನಕ್ಕೆ ತರಬೇಕು.
.ಡಾ| ದೇವರಾಜ ನಾಯ್ಕ, ಇಒ
ಎ.ಜೆ. ಪ್ರಕಾಶಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.