ಹುಟ್ಟೂನಲ್ಲೇ ಜೀವನ ಪಯಣ ಮುಗಿಸಿದ ಸಂತ


Team Udayavani, Oct 19, 2019, 11:10 AM IST

19-October-2

ಕಾಗವಾಡ/ಬೆಳಗಾವಿ: ಜನನ ಮರಣಗಳ ಹುಟ್ಟಡಗಿಸಿ ಮೋಹವೆಂಬ ಗಾಡಾಂಧಕಾರವನ್ನು ಮೆಟ್ಟಿ ನಿಂತ ಮಹಾತಪಸ್ವಿ. ಕರುಣೆಯ ಸಹಾನುಮೂರ್ತಿ ರಾಷ್ಟ್ರಸಂತ ಚಿನ್ಮಯಸಾಗರಜೀ (ಜಂಗಲ್‌ವಾಲೆ ಬಾಬಾ) ಶುಕ್ರವಾರ ಸಂಜೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಹುಟ್ಟೂರು ಜುಗೂಳ ಗ್ರಾಮದಲ್ಲೇ ಸಮಾಧಿ ಮರಣ ಹೊಂದಿದರು.

ಜನರ ಮಧ್ಯೆ ಜನಿಸಿದರೂ ಸದಾ ಕಾಡಿನ ವಾತಾವರಣವನ್ನೇ ಬಯಸುತ್ತಿದ್ದ, ಅಲ್ಲಿಂದಲೇ ಹೊಸ ಕ್ರಾಂತಿ ಮಾಡಬೇಕು ಎಂಬ ಮಹದುದ್ದೇಶ ಹೊಂದಿ ಎಲ್ಲರಿಗೂ ಮಾದರಿಯಾಗಿದ್ದ ಅವರು, ಆದಿವಾಸಿ ಜನರ ಧ್ವನಿಯಾದವರು. ಜನರನ್ನು ದುಶ್ಚಟಗಳಿಂದ ವಿಮುಕ್ತಗೊಳಿಸುತ್ತ ಅಹಿಂಸಾ ಪರಮೋದ್ಧಾರಕ ಎನಿಸಿಕೊಂಡವರು. ಆಧ್ಯಾತ್ಮ ಚಿಂತನೆ, ವ್ಯಸನಮುಕ್ತ ಸಮಾಜ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನಿರ್ಮಾಣದ ಚಿಂತನೆಯಲ್ಲೇ ಮುಳುಗಿ ಅದೇ ಸಂದೇಶ ಸಾರುತ್ತಿದ್ದ ಚಿನ್ಮಯಸಾಗರಜೀ ತಮ್ಮ ಪೂರ್ವಾಶ್ರಮದ ಹೆಸರಿಗಿಂತ ‘ಜಂಗಲ್‌ವಾಲೆ ಬಾಬಾ’ ಎಂದೇ ಗುರುತಿಸಿಕೊಂಡವರು. ಅದರಿಂದಲೇ ಜಗದ್ವಿಖ್ಯಾತಿ ಪಡೆದವರು. ಮುನಿ ಮಹಾರಾಜರು ಆಧ್ಯಾತ್ಮಿಕ ಚಿಂತನದೊಂದಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ ಮಹಾರಾಜರು.

ವ್ಯಸನಮುಕ್ತ ಸಮಾಜ ಮತ್ತು ಭ್ರಷ್ಟಾಚಾರಮುಕ್ತ ಆಡಳಿತ ನಿರ್ಮಾಣ ವಾಗಬೇಕು ಎಂಬುದು ಈ ಶಾಂತಿ ಧೂತನ ನಿರಂತರ ತುಡಿತವಾಗಿತ್ತು. ದೇಶದ ಭದ್ರ ಬುನಾದಿಯಾಗಿರುವ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ದಕ್ಷತೆಯಿಂದ ಕಾರ್ಯನಿರ್ವಹಿಸಿದರೆ ಅರಾಜಕತೆಯೇ ಎದುರಾಗದು ಎಂಬುದು ಅವರ ಆಶಯ ಹಾಗೂ ದೃಢವಾದ ಅಭಿಪ್ರಾಯವಾಗಿತ್ತು. ಸದಾ ಅರಣ್ಯದಲ್ಲಿ ಚಾತುರ್ಮಾಸ ಕೈಗೊಂಡ ಏಕೈಕ ಸಂತ. ಮೋಕ್ಷದಾರಿ ಹುಡುಕುತ್ತಲೆ ಹುಟ್ಟಿದ ಊರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಗೂಳದಲ್ಲೇ ಮೋಕ್ಷಕಂಡ ಪುಣ್ಯಾತ್ಮ. ಮೋಕ್ಷದ ದಾರಿ ಹುಡುಕುತ್ತಲೇ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಲಕ್ಷಾಂತರ ಗಿಡಗಳನ್ನು ಬೆಳೆಸಿ ಅರಣ್ಯ ಪ್ರದೇಶದಲ್ಲಿ ಚಾತುರ್ಮಾಸ ಮಾಡಿ 45 ಸಾವಿರ ಕಿಮೀಗಿಂತ ಹೆಚ್ಚು ದೂರ ಸಂಚಾರ ಮಾಡಿ ಜೈನಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದರು.

ದಿಗ್ವಿಜಯ್‌ ಸಿಂಗ್‌ ಬಂದಿದ್ದರು: ಖಾನಾಪುರ ತಾಲೂಕಿನ ಸಡಾ ಎಂಬ ಗ್ರಾಮದ ಬಳಿಯ ದುರ್ಗಮ ಕಾಡಿನಲ್ಲಿ ಯಾವುದೇ ಭಯವಿಲ್ಲದೆ ಕಾಡು ಪ್ರಾಣಿಗಳ ಮಧ್ಯೆ ಚಾತುರ್ಮಾಸ ಕೈಗೊಂಡಿದ್ದ ಮುನಿಶ್ರೀಗಳ ದರ್ಶನಕ್ಕೆ ಆಗಿನ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ದೇಶದ ಅನೇಕ ರಾಜಕೀಯ ನಾಯಕರು ಬಂದಿದ್ದರು. ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಮಹಾರಾಷ್ಟ್ರದ ಹೈಕೋರ್ಟ್‌ ನ್ಯಾಯಮೂರ್ತಿಗಳು ಮುನಿಶ್ರೀ ಬರೆದ “ಜಸ್ಟಿಸ್‌ ಆ್ಯಂಡ್‌ ಮೊರ್ಯಾಲಿಟಿ’ (ನ್ಯಾಯ ಮತ್ತು ನೈತಿಕತೆ) ಸಾಹಿತ್ಯವನ್ನು ಓದಿ ಆಶ್ಚರ್ಯರಾಗಿದ್ದರು.

ಪೂರ್ವಾಶ್ರಮ
ಮುನಿಶ್ರೀ ಚಿನ್ಮಯಸಾಗರರ ಪೂರ್ವಾಶ್ರಮದ ಹೆಸರು ಧರಣೇಂದ್ರಕುಮಾರ ಜೈನ್‌. ತಂದೆ ಅಣ್ಣಪ್ಪಾ ಮೋಳೆ ಜೈನ್‌. ತಾಯಿ ಹೀರಾದೇವಿ ಮೋಳೆ ಜೈನ್‌. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಗೂಳ ಗ್ರಾಮದಲ್ಲಿ 1961ರ ಆಗಸ್ಟ್‌ 6ರಂದು ಜನನ. ಹೈಯರ್‌ ಸೆಕೆಂಡರಿ ಶಿಕ್ಷಣದ ಬಳಿಕ ಮಧ್ಯಪ್ರದೇಶದ ಮುರೈನಾದ ಶ್ರೀ ಗೋಪಾಳದಾಸ ಬರೈ ಜೈನ್‌ ಸಂಸ್ಕೃತಿ ಸಿದ್ಧಾಂತ ಮಹಾವಿದ್ಯಾಲಯದಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದರು. 1982ರಲ್ಲಿ ಬ್ರಹ್ಮಚರ್ಯ ವ್ರತ ಸ್ವೀಕರಿಸಿದ್ದರು. 1987ರ ಏಪ್ರಿಲ್‌ 9ರಂದು ಮಧ್ಯಪ್ರದೇಶದ ಅತಿಶಯಕ್ಷೇತ್ರ ಥುಬಾನಜೀಯಲ್ಲಿ ಸಂಘ ಪ್ರವೇಶವಾಯಿತು. ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಇವರ ದೀಕ್ಷಾ ಗುರು.

ಅರಣ್ಯ ತಪಸ್ಸಿನ ಅನುಭವ ಯಾವ ಭಯವಿಲ್ಲದೇ ಕ್ರೂರ ಪ್ರಾಣಿಗಳ ಮಧ್ಯದಲ್ಲಿಯೇ ತಪಸ್ಸು ಮಾಡಿದ ಸಂತ. ಕಾಂಕ್ರಿಟ್‌ ಕಾಡಿನಲ್ಲಿರುವ ಈ ಮಾನವ ಪ್ರಾಣಿಗಳಿಂದ ಭಯವಿದೆ ಎಂದು ಅವರು ಹೇಳುತ್ತಿದ್ದರು. ಪ್ರಾಣಿಗಳು ಕ್ರೂರಿಯಾದರೂ ಒಮ್ಮೆ ವಿಶ್ವಾಸ ಬಂದ ನಂತರ ಎಂದೂ ಯಾರಿಗೂ ತೊಂದರೆ ಮಾಡುವುದಿಲ್ಲ. ಆದರೆ ಮನುಷ್ಯ ಮಾತ್ರ ವಿಶ್ವಾಸ ಘಾತಿ ಎನ್ನುತ್ತಿದ್ದರು. ಮನುಷ್ಯ ತುಂಬಾ ಸ್ವಾರ್ಥಿ, ತನ್ನ ರಕ್ಷಣೆಯನ್ನು ಮಾತ್ರ ಬಯಸುತ್ತಾನೆ. ಎಲ್ಲಿಯವರೆಗೆ ಯುವಕರು ದುರ್ವ್ಯಸನಗಳನ್ನು ಸಂಪೂರ್ಣವಾಗಿ ತ್ಯಜಿಸುವುದಿಲ್ಲವೋ ಅಲ್ಲಿಯವರೆಗೆ ಅದರ ನಿರ್ಮೂಲನೆ ಅಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸಬೇಕು. ಇಂದಿನ ಯುವ ಪೀಳಿಗೆ ಮೇಲೆ ದೇಶ ರಕ್ಷಣೆಯ ದೊಡ್ಡ ಜವಾಬ್ದಾರಿ ಇದೆ. ಅದನ್ನು ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಸಮಾಜದ ಜವಾಬ್ದಾರಿಯೂ ಇದೆ ಎನ್ನುತ್ತಿದ್ದರು ಮುನಿಶ್ರೀಗಳು.

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.