ಸಮರ್ಪಕವಾಗಿಲ್ಲ ನೆರೆ ಪರಿಹಾರ
ಸುರಪುರ-ಹುಣಸಗಿ ತಾಲೂಕಿನಲ್ಲಿ 3223 ರೈತರಿಗೆ ನಷ್ಟ ಜನಪ್ರತಿನಿಧಿಗಳು ಮುತುವರ್ಜಿ ವಹಿಸಲಿ
Team Udayavani, Dec 9, 2019, 2:53 PM IST
ಬಾಲಪ್ಪ ಎಂ.ಕುಪ್ಪಿ
ಕಕ್ಕೇರಾ: ಕೃಷ್ಣಾನದಿ ನೆರೆ ಹಾವಳಿಯಿಂದ ಹಾನಿಗೀಡಾದ ಕೆಲವು ರೈತರಿಗೆ ಇನ್ನು ಪರಿಹಾರ ಹಣ ಸಿಗದೆ ಕಷ್ಟ ಅನುಭವಿಸುವಂತಾಗಿದೆ. ಐದು ತಿಂಗಳು ಗತಿಸಿದರೂ ರೈತರಿಗೆ ಸಿಗಬೇಕಾದ ನೆರವು ಇವರೆಗೂ ದೊರಕಿಲ್ಲ. ಹೀಗಾಗಿ ರೈತರು ತೊಂದರೆ ಪಡುವಂತಾಗಿದೆ. ಕೃಷ್ಣಾ ನದಿ ನೆರೆಹಾವಳಿಯಿಂದ ಅನೇಕ ರೈತರು ನಷ್ಟ ಹೊಂದಿದ್ದಾರೆ. ನದಿ ತೀರದ ಭತ್ತ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಜಲಾವೃತ್ತವಾಗಿ ರೈತರು ಭಾರಿ ನಷ್ಟ ಹೊಂದಬೇಕಾಯಿತು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ ಹಾಗೂ ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ಕೃಷ್ಣಾ ನದಿ ನೀರು ನುಗ್ಗಿ ಬೆಳೆ ಹಾನೀಗಿಡಾಗುವಂತೆ ಮಾಡಿತು. ಹೀಗಾಗಿ ಹಾನಿಗೊಳಗಾದ ಕೆಲ ರೈತರಿಗೆ ಬೆಳೆ ಹಾನಿ ಪರಿಹಾರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಿದ್ದರೆ.
ಇನ್ನೂ ಕೆಲ ರೈತರಿಗೆ ಹಾನಿ ಪರಿಹಾರ ದೊರೆಯದೆ ವಿಳಂಬವಾಗಿದೆ. ಸಮೀಕ್ಷೆ ಮಾಡಿ ಐದು ತಿಂಗಳು ಗತಿಸಿದರೂ ಪರಿಹಾರ ಬಂದಿಲ್ಲ ಎಂದು ಕೃಷ್ಣಾನದಿ ತೀರದ ರೈತರು ನೋವು ತೋಡಿಕೊಂಡಿದ್ದಾರೆ.
ನೆರೆ ಹಾವಳಿಯಿಂದಾಗಿ ಶಹಾಪುರ ತಾಲೂಕು 4680 ಹೆಕ್ಟೇರ್, ಸುರಪುರ-4495 ಹೆಕ್ಟೇರ್ ಮತ್ತು ಯಾದಗಿರಿ ತಾಲೂಕಿನಲ್ಲಿ 331 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 9506 ಸಾವಿರ ಹೆಕ್ಟೇರ್ ಪ್ರದೇಶದ ರೈತರ ಬೆಳೆ ಹಾನಿಯಾದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ.
ಜಿಲ್ಲೆಯಲ್ಲಿ 7461 ರೈತರು ನೆರೆ ಹಾವಳಿ ಪರಿಹಾರ ಪಡೆಯಲು ಅರ್ಹರಿದ್ದಾರೆ. ಹೀಗಾಗಿ ಅವರಲ್ಲಿ ಇನ್ನೂ ಅನೇಕ ರೈತರಿಗೆ ಪರಿಹಾರವೇ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸುರಪುರ ತಾಲೂಕಿನಲ್ಲಿ ಸುರಪುರ ಹಾಗೂ ಹುಣಸಗಿ ತಾಲೂಕು ಒಳಗೊಂಡು 3223 ರೈತರು ನೆರೆ ಹಾವಳಿಗೆ ತುತ್ತಾಗಿದ್ದಾರೆ.
ಸತತವಾಗಿ ಕೃಷ್ಣಾ ನದಿಗೆ ಪ್ರವಾಹ ಆವರಿಸಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೃಷ್ಣಾ ನದಿ ತೀರದ ಬೆಂಚಿಗಡ್ಡಿ, ತಿಂಥಣಿ, ಬಂದೊಡ್ಡಿ, ಅರಳ್ಳಳ್ಳಿ, ಬಂಡೊಳ್ಳಿ, ಮುಷ್ಠಳಿ, ದೇವಾಪುರ, ಲಿಂಗದಳ್ಳಿ, ನಾರಾಯಣಪುರ ಹತ್ತಿರದ ಮೇಲಿನಗಡ್ಡಿ, ಜಂಜಿಗಡ್ಡಿ, ಹುಣಸಿಹೊಳೆ ಸೇರಿದಂತೆ ಅನೇಕ ಗ್ರಾಮಗಳ ರೈತರ ಬೆಳೆ ಹಾನಿಯಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸಮೀಕ್ಷೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾಗಿದೆ.
ಆದರೆ ತಾಂತ್ರಿಕ ಕಾರಣದಿಂದಾಗಿ ಕೆಲವು ರೈತರಿಗೆ ಪರಿಹಾರ ಹಣ ಸಿಕ್ಕಿಲ್ಲ ಎಂದು ಮಾತು ಕೇಳಿ ಬರುತ್ತಿದೆ. ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಕಡ್ಡಾಯವಾಗಿದೆ. ಆದ್ದರಿಂದ ಖಾತೆಗೆ ಆಧಾರ ಜೋಡಣೆ ಮಾಡಿದ್ದರೆ ಮಾತ್ರ ರೈತರ ಖಾತೆಗೆ ಸರಕಾರದಿಂದ ನೆರವು ಸಿಗುತ್ತದೆ. ಹೀಗಾಗಿ ಆಧಾರ ಜೋಡಣೆ ಹೊಂದಿರದ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗುವುದಿಲ್ಲ. ಈ ಕುರಿತು ರೈತರು ಕೂಡ ಒಮ್ಮೆ ಬ್ಯಾಂಕ್ ಖಾತೆ ಪರಿಶೀಲಿಸಿ ಆಧಾರ್ ನೋಂದಾಯಿಸಬೇಕು.
ಇಷ್ಟೇ ರೈತರಿಗೆ ಪರಿಹಾರ ಸಿಕ್ಕಿದೆ ಎಂದು ಹೇಳಲು ಯಾವುದೇ ವಿವರ ಲಭ್ಯವಿಲ್ಲ. ಆದರೆ ಆಧಾರ ಲಿಂಕ್ ಹೊಂದಿದ ರೈತರಿಗೆ ಮಾತ್ರ ಪರಿಹಾರ ದೊರೆಯಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆ ಹಾವಳಿಯಿಂದ ಬೆಳೆ ಹಾನಿಯಾದ ಬಗ್ಗೆ ಜನಪ್ರತಿನಿಧಿಗಳು ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಆದರೆ ಇವರೆಗೂ ಪರಿಹಾರ ಬರದೇ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡುವಂತಾಗಿದೆ.
ಹೀಗಾಗಿ ಕ್ಷೇತ್ರದ ಶಾಸಕರು ಹಾಗೂ ಸಂಸದರು ಸರಕಾರಕ್ಕೆ ಪ್ರಸ್ತಾಪಿಸಿ ಪರಿಹಾರ ದೊರಕಿಸಿಕೊಡುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ ಎಂಬುದು ರೈತರ ಒತ್ತಾಯವಾಗಿದೆ.
ಈಗಾಗಲೇ ಸರಕಾರದಿಂದ ನೇರವಾಗಿ ಕೆಲ ರೈತರ ಖಾತೆಗೆ ಪರಿಹಾರ ಹಣ ಬಂದಿದೆ. ರೈತರು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಬೇಕು. ತಾಲೂಕಿನಲ್ಲಿ ಪರಿಹಾರ ದೊರಕದೆ ಇದ್ದ ರೈತರ ಮಾಹಿತಿ ಪಡೆದು ಪರಿಹಾರಕ್ಕಾಗಿ ಮತ್ತೂಮೆ ಸರಕಾರಕ್ಕೆ ಪ್ರಸ್ತಾಪಿಸಲಾಗುವುದು. ಬಹುತೇಕ ರೈತರಿಗೆ ಪರಿಹಾರ ದೊರಕಿದೆ.
.ನಿಂಗಣ್ಣ ಬಿರಾದಾರ,
ತಹಶೀಲ್ದಾರ್ ಸುರಪುರ
ಪ್ರವಾಹದಿಂದ 3 ಎಕರೆ ಭತ್ತ ನಾಶವಾಗಿದೆ. ಅಧಿಕಾರಿಗಳು ಅಗತ್ಯ ದಾಖಲಾತಿ ಪಡೆದಿದ್ದಾರೆ. ಇನ್ನು ಖಾತೆಗೆ ಪರಿಹಾರ ಹಣ ಜಮಾ ಆಗಿಲ್ಲ. ಜೀವನ ದುಸ್ಥಿತಿಯಾಗಿದೆ. ನಮಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು.
.ದೇವಿಂದ್ರಪ್ಪ ಬಿ. ಅಂಬಿಗೇರ,
ಹಾನಿಗೀಡಾದ ರೈತ ತಿಂಥಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.