ಮನೆ ಮನೆಗೆ ಅಂಚೆ ಬ್ಯಾಂಕ್ ಸೇವೆ
ರಾಜ್ಯದ 31 ವಿಭಾಗದ ಒಂಭತ್ತು ಸಾವಿರ ಅಂಚೆ ಕಚೇರಿಗಳಲ್ಲಿ ಸೌಲಭ್ಯಪೋಸ್ಟ್‌ಮ್ಯಾನ್‌ನಿಂದಲೇ ಹಣ ಪಡೆಯುವ ಅವಕಾಶ
Team Udayavani, Dec 28, 2019, 12:43 PM IST
ಕಕ್ಕೇರಾ: ಗ್ರಾಮೀಣ ಭಾಗದ ಜನರಿಗಾಗಿ ಭಾರತೀಯ ಅಂಚೆ ಇಲಾಖೆ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಯೋಜನೆ ಜಾರಿಗೆ ತಂದು ಮನೆ-ಮನೆಗೂ ಖಾತೆ ತೆರೆಯುವ ಪ್ರಯತ್ನ ನಡೆಸಿದೆ.
ಏನಿದು ಐಪಿಪಿಬಿ: ಐಪಿಪಿಬಿ ಎಂದರೆ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್. ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಇಂಡಿಯಾ) ಅಡಿಯಲ್ಲಿ 9 ಸೆಪ್ಟೆಂಬರ್ 2018ರಂದು ಈ ಯೋಜನೆ ಜಾರಿಗೊಳಿಸಲಾಗಿದೆ. ಆಧಾರ ಕಾರ್ಡ್ ಹೊಂದಿದ ಪ್ರತಿಯೊಬ್ಬರು ಪೋಸ್ಟ್ ಮಾಸ್ಟರ್ ಅಥವಾ ಅಂಚೆ ಕಚೇರಿಗೆ ಭೇಟಿಯಾಗಿ ಉಳಿತಾಯ ಖಾತೆ ತೆರೆಯಬಹುದು. ಕಾಗದ ರಹಿತ ಬ್ಯಾಂಕಿಂಗ್ ವ್ಯವಸ್ಥೆ ಇದಾಗಿದೆ.
ಉಳಿತಾಯ ಖಾತೆಗೆ ನಿಮ್ಮ ಬೆರಳಚ್ಚು, ಆಧಾರ ಮಾಹಿತಿ ಪಡೆದು ಎಟಿಎಂ ವಿತರಿಸಲಾಗುತ್ತಿದೆ. ಹೀಗಾಗಿ ದೇಶದ ಯಾವುದೇ ಮೂಲೆಯ ಅಂಚೆ ಕಚೇರಿಯಲ್ಲಿ ಆಧಾರ, ಮೊಬೈಲ್ ಸಂಖ್ಯೆ ಇಲ್ಲವೇ ಬೆರಳಚ್ಚು ನೀಡಿ ಹಣದ ವ್ಯವಹಾರ ನಡೆಸಬಹುದಾಗಿದೆ. ರಾಜ್ಯದ 31 ವಿಭಾಗದಲ್ಲಿನ ಒಂಭತ್ತು ಸಾವಿರ ಅಧಿಕ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯುವ ಸೌಲತ್ತು ಗ್ರಾಮೀಣ, ನಗರ, ಪಟ್ಟಣದ ಜನರಿಗೆ ಸಿಗಲಿದೆ.
ಕಲಬುರಗಿ ವಿಭಾಗದ 70 ಉಪ ಕಚೇರಿ ಹಾಗೂ 553 ಶಾಖಾ ಕಚೇರಿಗಳಲ್ಲಿ ಈ ಸೌಲಭ್ಯ ತಲುಪಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಅಂಚೆ ಕಚೇರಿ ಅಧಿಕಾರಿಗಳು.
ನಗರ ಪ್ರದೇಶದಲ್ಲಿ ಎಟಿಎಂ, ಡಿಜಿಟಲ್ ಆ್ಯಪ್ ಮೂಲಕ ಹಣ ಪಡೆಯಬಹುದು. ಆದರೆ ಗ್ರಾಮೀಣ ಪ್ರದೇಶದ ಕೆಲವು ಕಡೆಗಳಲ್ಲಿ ಇಂತಹ ಸೌಲಭ್ಯಗಳಿಲ್ಲ. ಹೀಗಾಗಿ ಮನೆಗೆ ಪೋಸ್ಟ್‌ಮ್ಯಾನ್ ಬಂದಾಗ ಬೆರಳಚ್ಚು ನೀಡಿ, ಹಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ದಿನನಿತ್ಯ ಇದಕ್ಕಾಗಿ ಪೋಸ್ಟ್‌ಮ್ಯಾನ್ ಹತ್ತಿರ 15000
ಸಾವಿರ ರೂ. ಇಟ್ಟುಕೊಳ್ಳುವ ಅವಕಾಶ ನೀಡಲಾಗಿದೆ. ಇತರೆ ಬ್ಯಾಂಕ್‌ಗಳಲ್ಲಿ ಆಧಾರ ಜೋಡಣೆ ಮಾಡಿದ್ದರೆ ಹಣ ಪಡೆಯುವ ಸೌಲತ್ತು ಇದೆ. ಹಾಗೆ ಶುಲ್ಕವನ್ನು ಕಟ್ಟಾಗುತ್ತದೆ. ಆದರೆ “ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’ನಲ್ಲಿ ಯಾವುದೇ ಶುಲ್ಕವಿಲ್ಲದೆ 10 ಸಾವಿರ ರೂ.ಗಳನ್ನು ಒಂದು ಬಾರಿ ಪಡೆಯಬಹುದು. ಅಂಚೆ ಕಚೇರಿಗೆ ಹೋದರೆ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ನೀಡಿ ಹಣ ತೆಗೆದುಕೊಳ್ಳಬಹುದು.
ಆನ್‌ಲೈನ್ ವ್ಯವಸ್ಥೆ: ಐಪಿಪಿಬಿ ಖಾತೆ ತೆರೆದ ಗ್ರಾಹಕರಿಗಾಗಿ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಐಪಿಪಿಬಿ ಆ್ಯಪ್ ರಚಿಸಲಾಗಿದ್ದು, ಖಾತೆ ಹೊಂದಿ ಮೊಬೈಲ್ ಇರುವ ಗ್ರಾಹಕರು ಆ್ಯಪ್ ಮೂಲಕ ನಗದು ಜಮೆ, ಹಣ ವರ್ಗಾವಣೆ, ವ್ಯಾಪಾರದ ಪಾವತಿ, ನೇರ ನಗದು ವರ್ಗಾವಣೆ, ಬಿಲ್ಲುಗಳ ಪಾವತಿ ಸೇರಿದಂತೆ ಯಾವುದೇ ದಾಖಲೆ ನೀಡದೇ ತನ್ನ ಖಾತೆಯಲ್ಲಿ ಎಷ್ಟು ಹಣ ಇದೆ. ಎಷ್ಟು ವರ್ಗಾವಣೆ ಮಾಡಲಾಗಿದೆ ಎನ್ನುವ ಕುರಿತು ಖಾತೆಯ ಸಂಪೂರ್ಣ ವಿವರ ತಿಳಿಯಬಹುದಾಗಿದೆ.
ಐಪಿಪಿಬಿ ಉತ್ತಮ ಯೋಜನೆ. ಕಲಬುರಗಿ, ಯಾದಗಿರಿ ಜಿಲ್ಲೆಯ ಪ್ರತಿಯೊಂದು ಅಂಚೆ ಕಚೇರಿಗಳಲ್ಲಿ ಡಿ. 28ರಂದು ಮನೆ ಮನೆಗೂ ತೆರಳಿ “ತಮ್ಮ ಬ್ಯಾಂಕ್ ಸೇವೆ’ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತದೆ. ಈ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಅರಿವು ಮೂಡಿಸುವಂತೆ ಅಂಚೆ ಅ ಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚಿನ ರೀತಿಯಲ್ಲಿ ಖಾತೆ ತೆರೆಯುವ ಪ್ರಯತ್ನ ಮಾಡಲಾಗುತ್ತಿದೆ.
ಬಿ.ಆರ್. ನನಜಗಿ,
ಅಂಚೆ ವರಿಷ್ಠಾಧಿಕಾರಿ, ಕಲಬುರಗಿ ವಿಭಾಗ
ಬಾಲಪ್ಪ ಎಂ. ಕುಪ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.