ಮನೆ ಮನೆಗೆ ಅಂಚೆ ಬ್ಯಾಂಕ್ ಸೇವೆ ಕಾರ್ಯಕ್ರಮಕ್ಕೆ ಸ್ಪಂದನೆ
Team Udayavani, Dec 29, 2019, 6:35 PM IST
ಕಕ್ಕೇರಾ: ಭಾರತಿಯ ಅಂಚೆ ಇಲಾಖೆ ಹೊರತಂದ ವಿನೂತನ ಯೋಜನೆ ಐಪಿಪಿಬಿಯಲ್ಲಿ ಕಲಬುರಗಿ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಶನಿವಾರ ನಡೆಸಿದ ಮನೆ ಮನೆಗೂ ತಮ್ಮ ಬ್ಯಾಂಕ್ ಕಾರ್ಯಕ್ರಮದಲ್ಲಿ 10 ಸಾವಿರ ಖಾತೆಗಳು ರಚನೆ ಮಾಡಲಾಗಿದೆ.
ಅಂಚೆ ಬ್ಯಾಂಕ್‌ನಲ್ಲಿ ಹತ್ತು ಸಾವಿರ ಜನರು ತಮ್ಮ ಆಧಾರ ಕಾರ್ಡ್ ನೀಡಿ ಖಾತೆ ತೆರೆದುಕೊಂಡಿದ್ದು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ಜನರು ಈ ಲಾಭ ಪಡೆದುಕೊಂಡಿದ್ದಾರೆ. ಕಲಬುರಗಿ ವಿಭಾಗದಲ್ಲಿ 7 ಉಪ ಅಂಚೆ ಕಚೇರಿಗಳಿವೆ. ಅವುಗಳಲ್ಲಿ ಯಾದಗಿರಿ 1, ಲಬುರಗಿ 2, ಸೇಡಂ 1, ಸುರಪುರ 1, ಶಹಾಬಾದ 1, ಶಹಾಪುರ 1 ಸೇರಿದಂತೆ 553 ಅಂಚೆ ಶಾಖೆಗಳಲ್ಲಿ ಉಳಿತಾಯ ಖಾತೆ ತೆರೆಯಲು ಅಧಿಕಾರಿಗಳು ಶನಿವಾರ ಶತ ಪ್ರಯತ್ನ ನಡೆಸಿದ್ದ ಫಲವಾಗಿ ಯಾದಗಿರಿ ಜಿಲ್ಲೆಯಲ್ಲಿ 5 ಸಾವಿರ, ಕಲಬುರಗಿ ಜಿಲ್ಲೆಯಲ್ಲಿ 5 ಸಾವಿರ ಜನರು ಉಳಿತಾಯ ಖಾತೆ ತೆರೆದಿದ್ದಾರೆ.
ಅಲ್ಲದೇ ಮನೆ ಮನೆಗೆ ಬಂದ ಅಧಿಕಾರಿಗಳಿಗೂ ಜನರಿಂದ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ. ಐಪಿಪಿಬಿ ಜಾರಿನಿಂದಲೂ ಇವರೆಗೂ ಕಲಬುರಗಿ ವಿಭಾಗದಲ್ಲಿ ಈ ಹಿಂದೇ 1 ಲಕ್ಷ 40 ಸಾವಿರ ಖಾತೆ ತೆರೆದಿತ್ತು. ಆದರೆ ಶನಿವಾರ 10 ಸಾವಿರ ಖಾತೆ ತೆರೆದು 1 ಲಕ್ಷ 50 ಖಾತೆ ಹೆಚ್ಚಿಸಲಾಗಿದೆ. ಖಾತೆ ತೆರೆದ ಫಲಾನುಭವಿಗಳು ತಮ್ಮ ಖಾತೆಯಲ್ಲಿ ಕೇವಲ 100 ರೂ. ಇದ್ದರೆ ಸಾಕು. ಖಾತೆಯಲ್ಲಿ ಹಣ ಇಲ್ಲದಿದ್ದರೂ ಖಾತೆ ತೆರೆದ ಗ್ರಾಹಕರಿಗೆ ಯಾವುದೇ ವೆಚ್ಚ ಹಾಕುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ವಿಭಾಗದಲ್ಲಿ ಒಟ್ಟು 25 ಸಾವಿರ ಖಾತೆ ತೆರೆಯುವ ಗುರಿ ಹೊಂದಲಾಗಿದೆ. ಹೀಗಾಗಿ ಗುರಿ ತಲುಪಲು ರಾತ್ರಿ 9:30 ಗಂಟೆವರೆಗೂ ವಿಭಾಗದ ಎಲ್ಲಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ವ್ಯವಸ್ಥೆ ಮಾಡಲಾಗಿದೆ. ನಂತರ ಸಾಮಾನ್ಯ ದಿನದಲ್ಲಿಯು ಖಾತೆ ತೆರೆದು ಗುರಿ ಸಾಧಿ ಸಲಾಗುತ್ತದೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
MUST WATCH
ಹೊಸ ಸೇರ್ಪಡೆ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.