ಶರಣರ ನಾಡಲ್ಲಿ ಕೃಷ್ಣ ಆರಾಧಕ
Team Udayavani, Dec 30, 2019, 1:52 PM IST
ಕಲಬುರಗಿ: 1972ರ ಭೀಕರ ಬರಗಾಲ ಸಂದರ್ಭದಲ್ಲಿ 10 ದಿನಗಳ ಕಾಲ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿದ್ದ ಪೇಜಾವರ ಶ್ರೀಗಳು ಜನ-ಜಾನುವಾರು ಅಗತ್ಯ ಸಹಾಯ ಕಲ್ಪಿಸಿದ್ದರು.
ಪ್ರತಿದಿನ ನಾಲ್ಕೈದು ಹಳ್ಳಿಗಳಿಗೆ ಸಂಚರಿಸಿ ಜನರಿಗೆ ಧೈರ್ಯ ತುಂಬುವುದರೊಂದಿಗೆ ಜನರಿಗೆ ಅಗತ್ಯವಾದ ಬಟ್ಟೆಬರೆ-ಧವಸಧಾನ್ಯ ನೀಡಿದ್ದರು ಎಂಬುದನ್ನು ಜಿಲ್ಲೆಯ ಹಿರಿಯ ಜೀವಿಗಳು ಈಗಲೂ ಸ್ಮರಿಸುತ್ತಾರೆ. ನಗರದ ಮೋಹನ್ ಲಾಡ್ಜ್ ಹಿಂದುಗಡೆ ಇದ್ದ ಪಾದೂರು ರಾಮಕೃಷ್ಣ ತಂತ್ರಿ ಅವರ ಮನೆಯಲ್ಲಿ ತಂಗಿದ್ದ ಶ್ರೀಗಳು ಪ್ರತಿನಿತ್ಯ ಬೆಳಗ್ಗೆ ಪೂಜಾ ಕಾರ್ಯ ಮುಗಿಸಿ ಹಳ್ಳಿ-ಹಳ್ಳಿಗೆ ಹೋಗುತ್ತಿದ್ದರು. ಸಂಜೆ ಕಲಬುರಗಿ ನಗರಕ್ಕೆ ಬಂದು ಸಭೆಗಳನ್ನು ನಡೆಸುತ್ತಿದ್ದರು. ಇವರ ಜತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಪಾದೂರು ರಾಮಕೃಷ್ಣ ತಂತ್ರಿ ಹಾಗೂ ಇತರರು ಜತೆಗೆ ತೆರಳುತ್ತಿದ್ದರು.
2005ರಲ್ಲಿ ಕಲಬುರಗಿ ನಗರದಲ್ಲಿ ಪೇಜಾವರ ಶ್ರೀಗಳು ಚಾತುರ್ಮಾಸ ಕೈಗೊಂಡಾಗ 50 ದಿನಗಳ ನಗರದಲ್ಲಿಯೇ ತಂಗಿದ್ದರು. ಈ ಸಂದರ್ಭದಲ್ಲಿ ಶ್ರೀಗಳು ಎಲ್ಲರನ್ನುದ್ದೇಶಿಸಿ ನೀಡಿದ ಸಂದೇಶ ಹಲವರ ಮನದಲ್ಲಿ ಈಗಲೂ ಬೇರೂರಿದೆ.
ಜಯತೀರ್ಥ ವಿದ್ಯಾರ್ಥಿ ನಿಲಯ ಸ್ಥಾಪನೆ: ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಇಲ್ಲಿನ ವಿದ್ಯಾನಗರದಲ್ಲಿ ಅಖೀಲ ಭಾರತ ಮಾಧ್ವ ಮಹಾಮಂಡಳ ವತಿಯಿಂದ ಜಯತೀರ್ಥ ವಿದ್ಯಾರ್ಥಿ ನಿಲಯ ಆರಂಭಿಸಿದ್ದರು.
ಉತ್ತಮ ನಂಟು: ಕಲಬುರಗಿ ನಗರದಲ್ಲಿ ರಾಮಮಂದಿರ ಉದ್ಘಾಟನೆ, ಹಿಂದೂ ಸಮಾವೇಶ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪೇಜಾವರ ಶ್ರೀಗಳು ಪಾಲ್ಗೊಳ್ಳುವುದರೊಂದಿಗೆ ಕಲಬುರಗಿಯೊಂದಿಗೆ ಉತ್ತಮ ನಂಟು ಹೊಂದಿದ್ದರು.
ಪೇಜಾವರ ಸೈನ್ಯ ಸ್ಥಾಪನೆ: ಕಲಬುರಗಿ ನಗರದೊಂದಿಗೆ ಪೂಜ್ಯರಿಗಿರುವ ಗುರು-ಶಿಷ್ಯ ಸಂಬಂಧ ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಕಲಬುರಗಿ ನಗರದಲ್ಲಿ ಪೇಜಾವರ ಶ್ರೀಗಳ ಹೆಸರಿನಲ್ಲಿ ಪೇಜಾವರ ಸೈನ್ಯ ಸ್ಥಾಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.