ಭೋಸಗಾ ಕೆರೆ ಭರ್ತಿ: ಮಣ್ಣುಗಳ ಕಣ್ಣು¡
ನೀರು ಪೋಲು ತಡೆಗೆ ಆಗ್ರಹನೀರು ಕೊಳ್ಳೆ ಹೊಡೆಯಲು ಕುತಂತ್ರ
Team Udayavani, Oct 3, 2019, 11:05 AM IST
ಕಲಬುರಗಿ: ಮಹಾನಗರಕ್ಕೆ ಒಂಭತ್ತು ದಶಕಗಳ ಕಾಲ ನೀರು ಪೂರೈಕೆ ಮಾಡಿದ್ದ ನಗರದಿಂದ 8 ಕಿ.ಮೀ ದೂರವಿರುವ ಭೋಸಗಾಕೆರೆ ಭರ್ತಿಯತ್ತ ಸಾಗುತ್ತಿದೆ.
ಈ ಕೆರೆಗೆ ಮೂರು ವರ್ಷಗಳ ನಂತರ ನೀರು ಬಂದಿದೆ. ಕೆರೆಗೆ ನೀರು ಬಂದಿರುವುದರಿಂದ ದನಕರುಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಅಲ್ಲದೇ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ಎಲ್ಲೆಲ್ಲೂ ಹಸಿರು ಕಾಣುವಂತಾಗಿದೆ.
ಭೋಸಗಾ ಕೆರೆಗೆ ನೀರು ಬಂದಿರುವುದರಿಂದ ಭೋಸಗಾ ಸೇರಿದಂತೆ ಸುತ್ತಮುತ್ತಲಿನ ಏಳು ಹಳ್ಳಿಗಳಿಗೆ ನೀರಿನ ಅನುಕೂಲವಾಗುತ್ತದೆ. ಭೋಸಗಾ ಕೆರೆ ತುಂಬಿದರೆ ಒಂದು ನಿಟ್ಟಿನಲ್ಲಿ ಅನುಕೂಲ ಎನ್ನುವಂತಿದ್ದರೆ, ನೀರಿಲ್ಲದಿದ್ದರೆ ಮತ್ತೂಂದು ನಿಟ್ಟಿನಲ್ಲಿ ಕೆಲವರಿಗೆ ಮಾತ್ರ ಅನುಕೂಲ ಎನ್ನುವಂತಿದೆ. ನೀರಿಲ್ಲದಿದ್ದರೆ ಅದ್ಹೇಗೆ ಅನುಕೂಲ ಎಂದು ಕೇಳಬಹುದು. ಕೆರೆ ಖಾಲಿಯಾದರೆ ಕೆರೆಯೊಳಗಿನ ಮಣ್ಣು ಹೊಡೆಯಲು ದೊಡ್ಡ ಪಡೆಯೇ ಸಿದ್ಧವಾಗುತ್ತದೆ. ಕಳದೆರಡು ವರ್ಷಗಳ ಕಾಲ ಭೂಗಳ್ಳರ ಕಾಟದಿಂದ ಕೆರೆ ನಲುಗಿ ಹೋಗಿತ್ತು. ಈ ವರ್ಷ ನೀರು ಬಂದಿರುವುದರಿಂದ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕೆರೆಯೊಳಗೆ ನಡೆಯುತ್ತಿರುವ ಅಕ್ರಮ ಮಣ್ಣುಗಾರಿಕೆ ತಡೆಯುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಇದು ಮಣ್ಣುಗಳ್ಳರು ಎಷ್ಟು ಪ್ರಭಾವಶಾಲಿ ಎಂಬುದನ್ನು ನಿರೂಪಿಸುತ್ತದೆ.
ಯಾರ ಕೈ ಜೋರು: ಈಗ ಕೆರೆಗೆ ನೀರು ಬಂದಿದೆ. ಮುಂದಿನ ದಿನಗಳಲ್ಲಿ ನೀರು ಕಡಿಮೆಯಾದಂತೆ ಒಣಗಿದ ಭೂಮಿ ಪಡೆಯಲು ಗ್ರಾಮದ ಕೆಲವರು ತಾ ಮುಂದು, ನಾ ಮುಂದು ಎನ್ನುವಂತೆ ಭೂಮಿ ಪಡೆದು ಅಲ್ಪಾವಧಿ ಬೆಳೆ ಬೆಳೆಯುತ್ತಾರೆ. ಮುಂದೆ ಬೇಸಿಗೆಯಲ್ಲಿ ಪಡೆಯಲಾದ ಭೂಮಿಯ ಮಣ್ಣೇ ಸಾಗಾಟ ನಡೆಯುತ್ತಿರುತ್ತದೆ. ಹೀಗೆ ಚಕ್ರದಂತೆ ನಡೆಯುತ್ತಿರುವ ದಂಧೆ ತಡೆಗಟ್ಟಬೇಕೆನ್ನುತ್ತಾರೆ ಭೋಸಗಾ ಗ್ರಾಮಸ್ಥರು.
ಈಗ ನಡೆಯುತ್ತಿರುವುದೇನು?: ಕೆರೆಯಲ್ಲಿ ನೀರು ಬಂದಿದೆ. ಹೀಗಾಗಿ ಹಲವರ ಕಣ್ಣು ಬಿದ್ದಿದೆ. ಅದೇಗೆಂದರೆ ಕೆರೆ ಕೆಳಗೆ ಸ್ವಲ್ಪ ದೂರದಲ್ಲಿ ಇಟ್ಟಂಗಿ ತಯಾರಿಕೆ ಭಟ್ಟಿಗಳಿವೆ. ಈ ಭಟ್ಟಿಗಳಿಗೆ ನೀರು ದೊರಕಲೆಂದು ಕೆರೆಯೊಳಗಿನ ಜಾಕವೆಲ್ ಎತ್ತಿ ನೀರು ಬಿಡಲಾಗುತ್ತಿದೆ. ಕೆರೆ ಒಣಗಿದಾಗ ಮಣ್ಣು ಕೊಳ್ಳೆ ಹೊಡೆದವರು ಈಗ ನೀರು ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಕೆರೆ ಪಂಪ್‌ಆಪರೇಟರ್‌ನನ್ನು ಕೇಳಿದರೆ ಒಮ್ಮೊಮ್ಮೆ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಕಲಬುರಗಿ ನಗರಕ್ಕೆ ಕುಡಿಯಲು ನೀರು ಬಿಟ್ಟಿದ್ದೇನೆ, ಮಗದೊಮ್ಮೆ ಜಾಕವೆಲ್ ಸ್ವಲ್ಪ ತೊಂದರೆಯಾಗಿತ್ತು. ಸರಿಪಡಿಸುವಾಗ ನೀರು ಹೋಗಿದೆ ಎನ್ನುತ್ತಾರೆ.
ಪ್ರತಿಭಟನೆ: ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಓಂಕಾರ ಹಾಗೂ ಗ್ರಾಮದ ಯುವಕರು, ಮಹಿಳೆಯರು ಬುಧವಾರ ಕೆರೆ ಬಳಿ ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ಒಂದು ಹನಿ ನೀರು ಕೆರೆಯಿಂದ ಹರಿದು ಹೋಗಬಾರದು. ಒಂದು ವೇಳೆ ತಮ್ಮ ಮನವಿ ಧಿಕ್ಕರಿಸಿ ನೀರು ಬಿಟ್ಟಿದ್ದೇ ಆದರೆ ಮುಂದಾಗುವ ಅನಾಹುತಗಳಿಗೆ ಸಂಬಂಧಪಟ್ಟವರೆ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.