ಮೌಲ್ಯ ಅಧಃಪತನದಿಂದ ಶೋಷಣೆ ಹೆಚ್ಚಳ
ಸಹಾಯ-ಅನುಕಂಪ ಮೇಲ್ನೋಟಕ್ಕೆ ಸೀಮಿತ•ಬಸವಣ್ಣ-ಅಂಬೇಡ್ಕರ್ ತತ್ವ ಪಾಲನೆ ಆಗುತ್ತಿಲ್ಲ
Team Udayavani, Aug 5, 2019, 12:47 PM IST
ಕಲಬುರಗಿ: ನೀತಿ ಇಲ್ಲದ ರಾಜಕೀಯ, ಸಾಮಾಜಿಕ ಬದ್ಧತೆ ಇಲ್ಲದ ಹೋರಾಟ-ಸಂಘಟನೆ, ಜನಪರ ಕಾಳಜಿಯಿಲ್ಲದ ಆಡಳಿತ ವರ್ಗ ಹಾಗೂ ಜನರಲ್ಲಿ ಹೆಚ್ಚಿದ ಸ್ವಾರ್ಥತೆಯಿಂದ ಎಲ್ಲವೂ ಬದಲಾಗಿ ಪ್ರೀತಿ, ಪ್ರೇಮ, ಸಹಾಯ ಹಾಗೂ ಅನುಕಂಪ ಎನ್ನುವುದು ಮೇಲ್ನೋಟಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದೆ.
ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಗಳ ಅಧಃಪತನದಿಂದ ಶೋಷಣೆ ಹೆಚ್ಚಾಗಿದೆ. ಅಲ್ಲದೇ ಜಾತಿಯತೆ ಬಲಾಡ್ಯವಾಗಿದೆ. ಎಲ್ಲದರ ನಡುವೆ ಅಂತರ ಕಡಿಮೆಯಾಗುವ ಬದಲು ಮತ್ತಷ್ಟು ಜಾಸ್ತಿಯಾಗುತ್ತಿದೆ. ಮೇಲ್ನೋಟಕ್ಕೆ ಬಸವಣ್ಣ ಹಾಗೂ ಅಂಬೇಡ್ಕರ್ ತತ್ವಗಳನ್ನು ಹೇಳುತ್ತಿದ್ದೆವೆಯೇ ಹೊರತು ಅವರ ತತ್ವಗಳ ಆಚರಣೆ ಮಾಡುತ್ತಿಲ್ಲ.
-ಹೀಗೆ ವಾಸ್ತವ ಅಂಶಗಳನ್ನು ಬಿಚ್ಚಿಟ್ಟರು ಮಾಜಿ ಸಚಿವ, ಹೋರಾಟಗಾರ, ದಣಿವರಿಯದ ನಾಯಕ ಎಸ್.ಕೆ. ಕಾಂತಾ.
ಸಂದರ್ಭ: ಜಿಲ್ಲಾ ಕನ್ನಡ ಪರಿಷತ್ ವತಿಯಿಂದ ಕನ್ನಡ ಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನ ಸಂಘರ್ಷ, ನಡೆದು ಬಂದ ದಾರಿಯನ್ನು ತಿಳಿಸಿದರು.
ಹುಟ್ಟೂರು ಹಾಗರಗುಂಡಗಿ ಆದರೂ ಸ್ವಗ್ರಾಮದಲ್ಲಿ ಶಾಲೆ ಕಲಿಯಲಿಲ್ಲ. ಕಲಬುರಗಿಯಲ್ಲಿ ಸೋದರಮಾವನ ಮನೆಯಲ್ಲಿದ್ದು, ಮಕ್ತಂಪುರ ಮಠದಲ್ಲಿ ಏಳನೇ ತರಗತಿವರೆಗೂ ಮಾತ್ರ ಓದಿದೆ. ಕಷ್ಟದ ಹಿನ್ನೆಲೆಯಲ್ಲಿ 16ನೇ ವಯಸ್ಸಿಗೆ ಎಂಎಸ್‌ಕೆ ಮಿಲ್ಗೆ ಸೇರಿದೆ. 18 ವರ್ಷಕ್ಕೆ ಕಾಯಂ ಕಾರ್ಮಿಕನಾದೆ. ಕಾರ್ಖಾನೆಯಲ್ಲಿ ಇಂಗ್ಲಿಷ್‌ಗೆ ಪ್ರಾಧ್ಯಾನ್ಯತೆ ಇದ್ದಿದ್ದರಿಂದ ಬಿರಾದಾರ ಎನ್ನುವರ ಬಳಿ ಎರಡು ವರ್ಷ ಇಂಗ್ಲಿಷ ಕಲಿತೆ. ಕಾರ್ಮಿಕರಿಗೆ ನ್ಯಾಯಕ್ಕಾಗಿ ಹೋರಾಟ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಂಘಟನೆಯೊಂದಿಗೆ ಸೇರಿಕೊಂಡರು. ಎಂಎಸ್‌ಕೆ ಮಿಲ್ ಬಂದಾಗಿದ್ದ ಹಾಗೂ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರಬಲ ಹೋರಾಟ ನಡೆಸಲಾಯಿತು. ಲಾಠಿ ಚಾರ್ಜ್ ಆಯಿತು. 144 ಕಲಂ ಜಾರಿಯಾಯಿತು. ಆಯಿಲ್ ಮಿಲ್ ವಿರುದ್ಧ ಹೋರಾಟ ನಡೆದಾಗ ತಮ್ಮನ್ನು ಬಂಧಿಸಿ ಜೈಲಿಗಟ್ಟಿದಾಗ ತಮ್ಮ ತಾಯಿ ಸತ್ಯಾಗ್ರಹ ಮುಂದುವರಿಸಿದ್ದರು ಎಂದು ಹೋರಾಟದ ಸಂದರ್ಭಗಳನ್ನು ವಿವರಿಸಿದರು.
ವಿ.ಪಿ. ದೇವುಳಗಾಂವಕರ, ಮಲ್ಲೇಶಯ್ಯ ಕಲ್ಮಠ ಮುಂತಾದವರ ಸಹಕಾರದಿಂದ ಹಾಗೂ ಬಾಬುರಾವ್ ಎನ್ನುವರು ನಡೆಸುತ್ತಿದ್ದ ನೂರಾರು ಸಂಘಟನೆಗಳ ನೇತೃತ್ವ ವಹಿಸಿಕೊಂಡು ಲಾರಿ, ಆಟೋ ಹೀಗೆ ಎಲ್ಲ ವರ್ಗದ ಸಂಘಟನೆಗಳ ಕಾರ್ಮಿಕರ ಸಲುವಾಗಿ ಹೋರಾಟದ ಮಾರ್ಗಕ್ಕೆ ಇಳಿದು, ಅದನ್ನೇ ಇಂದಿನ ದಿನದವರೆಗೂ ಮುಂದುವರಿಸಲಾಗಿದೆ. ಇದರ ನಡುವೆ ರಾಜಕೀಯಕ್ಕೆ ಬಂದು ಶಾಸಕನಾಗಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಕಾರ್ಮಿಕ ಸಚಿವನಾಗಿ ಅಮೂಲಾಗ್ರ ಬದಲಾವಣೆ ತರಲು ಯತ್ನಿಸಲಾಗಿತ್ತು. ಇದಕ್ಕೆಲ್ಲ ಜನರಿಟ್ಟಿರುವ ಪ್ರೀತಿಯೇ ಕಾರಣವಾಗಿದೆ ಎಂದರು.
ಎಂಎಸ್‌ಕೆ ಮಿಲ್ ಕಾರ್ಖಾನೆ ಹಾಗೂ ಕಾರ್ಮಿಕರ ಸಲುವಾಗಿ, ಆಳಂದ ಸಕ್ಕರೆ ಕಾರ್ಖಾನೆ ಕಾರ್ಮಿಕರ ಕಾಯಂಗೆ, ಭೂಮಿ ಕಳೆದುಕೊಂಡ ಹೊನ್ನಕಿರಣಗಿ ರೈತರಿಗೆ ಸೂಕ್ತ ಪರಿಹಾರ, ಪಾಲಿಕೆಯಲ್ಲಿನ ಕಾರ್ಮಿಕರು ಸೇರಿದಂತೆ ಹತ್ತಾರು ಬಗೆಯ ಕಾರ್ಮಿಕರ ಹೋರಾಟವಲ್ಲದೇ, ಈಗ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ನಡೆಸುತ್ತಿರುವ ಹೋರಾಟ ತಮ್ಮ ಜೀವನದಲ್ಲಿ ಮರೆಯಲಾರದ್ದು ಎಂದು ಹೇಳಿದರು.
ನಾಲ್ಕು ವರ್ಷದಿಂದ ಹೋರಾಟ: ಸೇಡಂ ತಾಲೂಕಿನಲ್ಲಿ ಶ್ರೀ ಸಿಮೆಂಟ್ ಕಾರ್ಖಾನೆ ಪ್ರಾರಂಭಕ್ಕೆ ಭೂಮಿ ಎನ್‌ಎ ಆಗದೇ ಇದ್ದರೂ 2012ರಲ್ಲಿ ಅನುಮತಿ ನೀಡಲಾಗುತ್ತದೆ. ಆದರೆ ಭೂಮಿ 2008ರಲ್ಲಿಯೇ ಖರೀದಿ ಮಾಡಲಾಗಿತ್ತು. ಆದರೂ ಸರ್ಕಾರದ ಭೂಮಿಗೆ ಒಂದು ದರ, ರೈತರ ಭೂಮಿಗೆ ಒಂದು ದರ ನೀಡಲಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ನಾಲ್ಕು ವರ್ಷಗಳಿಂದ ಸೇಡಂದಲ್ಲಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಹೋರಾಟದಲ್ಲಿ ಪಾಲ್ಗೊಂಡ 16 ಮಂದಿ ರೈತರು ಮೃತಪಟ್ಟಿದ್ದರೂ ಬೇಡಿಕೆಗೆ ಸ್ಪಂದಿಸದಿದ್ದರೇ ಏನು ಮಾಡಬೇಕು? ಯಾವ ರೀತಿ ಹೋರಾಟ ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದರು. ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು, ಗೌರವ ಕಾರ್ಯದರ್ಶಿ ಡಾ| ವಿಜಯಕುಮಾರ ಪರೂತೆ ಸ್ವಾಗತಿಸಿದರು, ಸೂರ್ಯಕಾಂತ ಪಾಟೀಲ ವಂದಿಸಿದರು.
ಪ್ರಮುಖರಾದ ಬಸವರಾಜ ಇಂಗಿನ್, ಉಮಾಕಾಂತ ನಿಗ್ಗುಡಗಿ, ಶಿವಕಾಂತ ಮಹಾಜನ್, ಬಸವರಾಜ ತಡಕಲ್, ಡಿ.ಜಿ. ಸಾಗರ, ದೇವೇಗೌಡ ತೆಲ್ಲೂರ, ಮಹ್ಮದ ಸುಲ್ತಾನ ತಿಮ್ಮಾಪುರಿ, ಅಂಬಾರಾವ್ ಬೆಳಕೋಟಾ, ಅಗಸ್ತತೀರ್ಥ, ಬಾಬುರಾವ್ ಶೇರಿಕಾರ, ಎಂ.ಬಿ. ಅಂಬಲಗಿ, ಸುರೇಶ ಬಡಿಗೇರ ಹಾಗೂ ಕಸಾಪ ಪದಾಧಿಕಾರಿಗಳು ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.