ಕಲಬುರಗಿ ಆಕಾಶವಾಣಿಗೆ 54ರ ಸಂಭ್ರಮ
ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನರಾಜ್ ಬಹದ್ದೂರ್‌ರಿಂದ ಆರಂಭವಾಗಿತ್ತು ಕೇಂದ್ರ
Team Udayavani, Nov 8, 2019, 4:14 PM IST
ಕಲಬುರಗಿ: ಆಕಾಶವಾಣಿ ಕೇಂದ್ರದ 54ನೇ ಸಂಸ್ಥಾಪನಾ ದಿನವನ್ನು ನ. 11ರಂದು ಬೆಳಗ್ಗೆ 10:30 ರಿಂದ 11:30ರ ವರೆಗೆ ವಿಶೇಷ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ನಡೆಸಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.
ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿ ಸುವ ಗಣ್ಯರು ಹಾಗೂ ಕೇಳುಗರ ಮಧ್ಯೆ ಸೇತುಬಂಧವಾಗಿ ಕಾರ್ಯಕ್ರಮ ಮೂಡಿಬರಲಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ, ರಂಗಭೂಮಿ ಕಲಾವಿದೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಸವಕಲ್ಯಾಣದ ಪ್ರಾಧ್ಯಾಪಕ ಡಾ| ಸುಜಾತಾ ಜಂಗಮಶೆಟ್ಟಿ, ಬೀದರ ರೈತ ಹಾಗೂ ಸಂಘಟಕ ರವಿ ಶಂಭು, ಕೇಳುಗ ಹಳ್ಳಿಖೇಡ (ಬಿ)ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕುಪೇಂದ್ರ ಶಾಸ್ತ್ರೀ ಕೃಷ್ಣಮೂರ್ತಿ ಪಾಲ್ಗೊಳಲಿದ್ದಾರೆ. ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್. ಕುಲಕರ್ಣಿ, ನಿರ್ವಾಹಕ ಸೋಮಶೇಖರ ಎಸ್. ರುಳಿ ನಡೆಸಿಕೊಡಲಿದ್ದಾರೆ.
1966 ನ. 11ರಂದು ಕೇಂದ್ರ ಸರ್ಕಾರದ ಆಗಿನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ರಾಜ್ ಬಹಾದ್ದೂರ್ ಆಕಾಶವಾಣಿ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದರು.
ಈ ಸಮಾರಂಭದಲ್ಲಿ ಮೈಸೂರು ಸರ್ಕಾರದ ಲೋಕೋಪಯೋಗಿ ಸಚಿವರಾಗಿದ್ದ ವೀರೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿದ್ದ ಡಿ.ಎನ್. ದಿಕ್ಷೀತ್ ಹಾಗೂ ಮುಖ್ಯ ಅಭಿಯಂತರರಾದ ಮೌಲುಂಗೆ ಪಾಲ್ಗೊಂಡಿದ್ದರು. ಬಳಿಕ ಹಿಂದೂಸ್ತಾನಿ ಕಲಾವಿದರಾದ ಮಲ್ಲಿಕಾರ್ಜುನ ಮನ್ಸೂರ ಸಂಗೀತ ಕಾರ್ಯಕ್ರಮ ನೀಡಿದ್ದರು.
53 ವರ್ಷಗಳಿಂದ ವಿವಿಧ ಸಾಧನೆಗಳ ಮಜಲುಗಳನ್ನು ದಾಟಿ ದಾಖಲೆ ಮಾಡಿದ ಕಲಬುರಗಿ ಆಕಾಶವಾಣಿ ಕೇಂದ್ರ ನಿತ್ಯ ನಿರಂತರ ಹೊಸತನದೊಂದಿಗೆ ಶೋತೃ ವರ್ಗದ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ.
ನವೆಂಬರ್ ತಿಂಗಳಿನಲ್ಲಿ ರಾಜ್ಯ ಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ನಾಟಕಕ್ಕೆ ಪ್ರಥಮ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಪೋಷಣ್ ಅಭಿಯಾನ ವಿಭಾಗದಲ್ಲಿ ದ್ವಿತೀಯ ಬಹುಮಾನ ಲಭಿಸಿರುವುದನ್ನು ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.