ಶರಣಬಸವೇಶ್ವರ ಪ್ರಸಾದ ನಿಲಯಕ್ಕೆ ಚಾಲನೆ
ಕಲಬುರಗಿ: ಶರಣ ಬಸವ ವಿಶ್ವವಿದ್ಯಾಲಯದ ಆವರಣದ ಯುಗಾದಿ ಹಬ್ಬದ ದಿನದಂದು ಶರಣಬಸವೇಶ್ವರ ಪ್ರಸಾದ ನಿಲಯಕ್ಕೆ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಚಾಲನೆ ನೀಡಿದರು.
Team Udayavani, Apr 10, 2019, 4:33 PM IST
ಕಲಬುರಗಿ: ಶರಣ ಬಸವ ವಿಶ್ವವಿದ್ಯಾಲಯದ ಆವರಣದಲ್ಲಿ
ಯುಗಾದಿ ಹಬ್ಬದ ದಿನದಂದು ಶರಣಬಸವೇಶ್ವರ ಪ್ರಸಾದ ನಿಲಯಕ್ಕೆ ಶರಣಬಸವೇಶ್ವರ ಮಹದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಚಾಲನೆ ನೀಡಿದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಮಧ್ಯಾಹ್ನದ 12:30ರಿಂದ 2ಗಂಟೆ ವರೆಗೆ ಈ ಪ್ರಸಾದ ವಿತರಿಸಲಾಗುತ್ತದೆ. 5 ರೂ.ಗಳಲ್ಲಿ ಅನ್ನ, ಸಾರು ಹೊಟ್ಟೆ
ತುಂಬುವಷ್ಟು ಊಟ ಮಾಡಬಹುದು. ವಿಶೇಷ ದಿನದಂದು ವಿಶೇಷ
ಆಹಾರ ತಯಾರಿಸಲಾಗುವುದು. ಈ ಪ್ರಸಾದ ನಿಲಯವನ್ನು ಸಿಬ್ಬಂದಿಗಳು ನೆರವೇರಿಸುತ್ತಿದ್ದು, ದೂರದಿಂದ ಬರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಊಟದ ಸಮಸ್ಯೆಯನ್ನು ಅನುಭವಿಸಬಾರದೆಂಬ ಸದುದ್ದೇಶದಿಂದ ಇದನ್ನು ಆರಂಭಿಸಲಾಗಿದೆ ಎಂದು ಡಾ| ಅಪ್ಪ ತಿಳಿಸಿದರು.
ಪ್ರಸಾದ ನಿಲಯದ ಆರಂಭೋತ್ಸವ ದಿನದಂದು
ವಿಶ್ವವಿದ್ಯಾಲಯದ ಸಮಕುಲಪತಿ ಡಾ| ವಿ.ಡಿ. ಮೈತ್ರಿ, ಡೀನ್ ಲಕ್ಷ್ಮೀ ಮಾಕಾ ದವಸ ಧಾನ್ಯ ವಿತರಿಸಿದರು. ಪೂಜ್ಯ
ದಾಕ್ಷಾಯಣಿ ಶರಣಬಸವಪ್ಪ ಅಪ್ಪ ಪ್ರಸಾದ ನಿಲಯಕ್ಕೆ ಅವಶ್ಯವಾಗಿದ್ದ ವಸ್ತುಗಳನ್ನು ವಿತರಿಸುವ ಮೂಲಕ ಸಿಬ್ಬಂದಿಗಳ ಕೈಂಕರ್ಯಕ್ಕೆ ಪ್ರೋತ್ಸಾಹಿಸಿದರು.
ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ
ಬಸವರಾಜ ದೇಶಮುಖ, ಡಾ| ಅಲ್ಲಂಪ್ರಭು ದೇಶಮುಖ,
ಕೋಮಲ ಶರಣಬಸವಪ್ಪ ಅಪ್ಪಾ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ್ ನಿಷ್ಠಿ,
ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಡೀನ್ ಡಾ| ಲಿಂಗರಾಜ
ಶಾಸ್ತ್ರಿ, ಡೀನ್ ಟಿ.ವಿ.ಶಿವಾನಂದನ್, ಮೌಲ್ಯ ಮಾಪನ ಕುಲಸಚಿವ
ಡಾ| ಶಿವದತ್ತ ಹೊನ್ನಳ್ಳಿ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.