ಧಾರ್ಮಿಕ ಸಂಸತ್ ಕಲ್ಪನೆ ನೀಡಿದ್ದೇ ಬಸವಣ್ಣ: ದೇಶಮುಖ
Team Udayavani, May 8, 2019, 10:33 AM IST
ಕಲಬುರಗಿ: ಶರಣಬಸವ ವಿವಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಬಸವರಾಜ ದೇಶಮುಖ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕಲಬುರಗಿ: ಪ್ರಸ್ತುತ ಸಮಾಜ ಈಗಲೂ ಸಾಧಿಸಲು ಆಗದೇ ಇರುವ ಸಮ ಸಮಾಜದ ಕನಸನ್ನು, 12ನೇ ಶತಮಾನದಲ್ಲಿ ಬಸವಣ್ಣನವರು ನನಸಾಗಿಸಲು ಶ್ರಮಿಸಿದ್ದರು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವಣ್ಣನವರ 886ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಧಾರ್ಮಿಕ ಸಂಸತ್ತಿನ ಕಲ್ಪನೆ ನೀಡಿ ಅದಕ್ಕೆ ಅನುಭವ ಮಂಟಪ ಎನ್ನುವ ಹೆಸರು ಕೊಟ್ಟು ಅಲ್ಲಿ ಎಲ್ಲ ವರ್ಗದ ಶರಣ ಶರಣೆಯರಿಗೆ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಿದರು. ಇದು ಶೋಷಣೆಗೆ ಒಳಗಾಗಿದ್ದ ವರ್ಗಗಳಿಗೆ ಮೇಲೆ ಬರಲು ಸಹಾಯಕವಾಯಿತು ಎಂದರು.
ಹಲವು ವರ್ಗದ ವಚನಕಾರರು ಅನುಭವ ಮಂಟಪದಿಂದ ಮುನ್ನೆಲೆಗೆ ಬಂದರು. ಇದರಿಂದ ಬಹುದೊಡ್ಡ ವಚನ ಕ್ರಾಂತಿಯೇ ನಡೆಯಿತು. ಮಹಿಳೆಯರು ಕೂಡ ಪುರುಷರ ಸಮಾನರಾಗಿ ವಚನಗಳನ್ನು ಬರೆದು ಸಮಾಜ ಸುಧಾರಣೆಗೆ ತಮ್ಮ ವಿಚಾರಗಳನ್ನು ಮಂಡಿಸಿದರು ಎಂದರು.
ಬಸವೇಶ್ವರರ ಮತ್ತು ಶರಣಬಸವೇಶ್ವರರ ವಚನಗಳ ಆಧಾರದ ಮೇಲೆಯೇ ಶರಣ ಸಂಸ್ಥಾನವು ಕಾರ್ಯನಿರತವಾಗಿದೆ. ಬಸವಣ್ಣನವರು ಪ್ರಸ್ತುತ ಪಡಿಸಿದ ಕಾಯಕ ಮತ್ತು ದಾಸೋಹ ತತ್ವವನ್ನು ಶರಣಬಸವೇಶ್ವರ ಸಂಸ್ಥಾನವು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದೆ. ಬಸವಣ್ಣ ಮತ್ತು ಶರಣಬಸವೇಶ್ವರರ ತತ್ವ ಮತ್ತು ಸಿದ್ಧಾಂತಗಳ ನಡುವೆ ಸಮೀಪದ ಸಂಬಂಧವಿದೆ. ಬಸವಣ್ಣನವರು ಬಸವಕ ಲ್ಯಾಣವನ್ನು ಕರ್ಮಭೂಮಿಯಾಗಿ ಸ್ವೀಕರಿಸಿದರೆ, ಶರಣಬಸವೇಶ್ವರರು ಮತ್ತು ದೊಡ್ಡಪ್ಪ ಶರಣರು ಕಲಬುರಗಿ ವಿಭಾಗದಲ್ಲಿ ಹಸಿದ ಹೊಟ್ಟೆಗಳಿಗೆ ದಾಸೋಹ ನೀಡುವುದರ ಮೂಲಕ ಸೇವಾ ಕಾರ್ಯ ಆರಂಭಿಸಿದರು ಎಂದರು.
8ನೇ ದಾಸೋಹ ಪೀಠಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪ ಅವರು ಬಸವೇಶ್ವರರ ಆಶಯದಂತೆ ದಾಸೋಹವನ್ನು ಅನ್ನ ದಾಸೋಹ ಮತ್ತು ಜ್ಞಾನ ದಾಸೋಹದ ರೂಪದಲ್ಲಿ ಈ ಭಾಗದಲ್ಲಿ ಉಣ ಬಡಿಸುತ್ತಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪಿಸಲು ಅಂದಿನ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಡಾ| ಶರಣಬಸವಪ್ಪ ಅಪ್ಪ ಚರ್ಚಿಸಿ ಮೂರ್ತಿ ಸ್ಥಾಪಿಸಲು ಕಾರಣರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಟಿ ಮಾತನಾಡಿ, ಕರ್ನಾಟಕವು ಬಸವಣ್ಣನವರಂತಹ ಮೇಧಾವಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ಬಸವಣ್ಣನವರ ಸುಧಾರಣಾ ತತ್ವ, ಜಾತಿ ರಹಿತ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ. ಕಾಯಕ ತತ್ವವು ಕಾರ್ಮಿಕರ ಘನತೆ ಎತ್ತಿ ಹಿಡಿದು, ಕಾಯಕವೇ ಕೈಲಾಸ ಎಂದು ತಿಳಿಸಿದೆ ಎಂದು ಹೇಳಿದರು. ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಡೀನ್ ಡಾ| ಲಕ್ಷ್ಮೀ ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಂ.ಎಸ್. ಪಾಟೀಲ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಹಾಗೂ ಇತರರು ಇದ್ದರು.
ಡಾ| ಸುಮಿತ್ರಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಮಾದಗೊಂಡ ಸ್ವಾಗತಿಸಿದರೆ, ನಿಖೀತಾ ಬಳಬಟ್ಟಿ ನಿರೂಪಿಸಿದರು. ನಾಗಮ್ಮ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.