ನಾಳೆಯಿಂದ 886ನೇ ಬಸವ ಜಯಂತ್ಯುತ್ಸವ
ಉಪನ್ಯಾಸ ಮಾಲಿಕೆ-ಕಾಯಕ ಭೂಷಣ ಪ್ರಶಸ್ತಿ ಪ್ರದಾನ •ವಿಶ್ವಗುರು ಬಸವಣ್ಣ-ಶರಣರ ಭಾವಚಿತ್ರ ಮೆರವಣಿಗೆ
Team Udayavani, May 4, 2019, 1:34 PM IST
ಕಲಬುರಗಿ: 886ನೇ ಬಸವ ಜಯಂತ್ಯುತ್ಸವ ಕುರಿತಾಗಿ ಅರುಣಕುಮಾರ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಲಬುರಗಿ: ಜಗಜ್ಯೋತಿ ಬಸವಣ್ಣವರ 886ನೇ ಜಯಂತ್ಯುತ್ಸವ ಮೇ 5ರಿಂದ ಮೂರು ದಿನಗಳ ಕಾಲ ಜಗತ್ ವೃತ್ತದ ಬಸವೇಶ್ವರ ಮೂರ್ತಿ ಆವರಣದಲ್ಲಿ ನಡೆಯಲಿದೆ.
ಲಿಂ| ಡಾ| ಶಿವಕುಮಾರ ಮಹಾಸ್ವಾಮೀಜಿಗಳ ಸಿದ್ಧಗಂಗಾ ಮಠ ವೇದಿಕೆ, ಚಿತ್ತರಗಿ ಇಲಕಲ್ ಮಹಾಂತಸ್ವಾಮಿಗಳ ಹಾಗೂ ಗದಗ ತೊಂಟದಾರ್ಯ ಮಠದ ಸಿದ್ಧಲಿಂಗ ಮಹಾಸ್ವಾಮಿಗಳ ಮಹಾದ್ವಾರದಡಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ಆಶ್ರಯದಲ್ಲಿ ಬಸವ ಜಯಂತಿ ಉತ್ಸವ ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಬಸವ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಅಪ್ಪಣ್ಣ ಗುಡ್ಡಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ, ಕಾಯಕ ಭೂಷಣ ಪ್ರಶಸ್ತಿ ಪ್ರದಾನ, ವಚನ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಜರುಗಲಿದೆ. ವಿಶ್ವಗುರು ಬಸವಣ್ಣನವರ ಮತ್ತು ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ಜರುಗಲಿದೆ ಎಂದರು.
ಮೇ 5ರಂದು ಸಂಜೆ 6ಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಜಯಂತ್ಯುತ್ಸವ ಉದ್ಘಾಟಿಸುವರು. ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿ.ಜಿ. ಪಾಟೀಲ ಮುಖ್ಯ ಅತಿಥಿಗಳಾಗಿ, ಉಪನ್ಯಾಸಕರಾಗಿ ಸೊಲ್ಲಾಪುರದ ಕನ್ನಡ ಪ್ರಾಧ್ಯಾಪಕ ಪ್ರೊ| ಬಾಬುರಾವ ಪೂಜಾರ ಆಗಮಿಸುವರು.
ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಗಣ್ಯರು ಅತಿಥಿಗಳಾಗಿ ಆಗಮಿಸುವರು. ಗೌರವ ಡಾಕ್ಟರೇಟ್‌ಗೆ ಪುರಸ್ಕೃತರಾದ ಡಾ| ಅರುಣಕುಮಾರ ಎಸ್. ಪಾಟೀಲ, ಮಾಜಿ ಮಹಾಪೌರ ಡಾ| ಶರಣಕುಮಾರ ಮೋದಿ ಅವರಿಗೆ ವಿಶೇಷ ಸನ್ಮಾನ ನೆರವೇರಲಿದೆ. ವೈದ್ಯರಾದ ಡಾ| ಮುರುಗೇಶ ಪಸ್ತಾಪುರ, ಡಾ| ಶಿವಶರಣ ಝಳಕಿ, ಪ್ರಕಾಶ ದೇಗಲಮಡಿ, ಲಕ್ಷ್ಮೀಕಾಂತ ಜೋಳದ, ಮಾಲಾ ಎಸ್.ಐ. ಅವರಿಗೆ ಕಾಯಕ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದರು.
ಮೇ 6ರಂದು ಪ್ರಾಧ್ಯಾಪಕ ಪ್ರೊ| ಟಿ. ಗುರುಬಸಪ್ಪಾ ಉಪನ್ಯಾಸ ನೀಡುವರು. ಸುರೇಶ ಪಾಟೀಲ ಜೋಗೂರ, ಅಪ್ಪಾರಾವ ಅಕ್ಕೋಣೆ ಅವರಿಗೆ ವಿಶೇಷ ಸನ್ಮಾನ, ಡಾ| ರಾಜಶೇಖರ ಪಾಟೀಲ, ಡಾ| ಮಂಜುನಾಥ ದೋಶೆಟ್ಟಿ, ಡಾ| ಸಂತೋಷ ಪಾಟೀಲ ಹೆಬ್ಟಾಳ, ಮಹೇಶ ಆರ್., ಡಾ| ಶಿವಶರಣ ಝಳಕಿ ಅವರಿಗೆ ಕಾಯಕ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೇ 7ರಂದು ಸಂಜೆ 6ಕ್ಕೆ ಅಕ್ಕಲಕೋಟೆಯ ಡಾ| ಗುರುಲಿಂಗಪ್ಪ ದಬಾಲೆ ವಿಶೇಷ ಉಪನ್ಯಾಸ ನೀಡುವರು. ಬೆಳಗ್ಗೆ 10ಕ್ಕೆ ರಕ್ತದಾನ ಶಿಬಿರವನ್ನು ಡಾ| ಶರಣಬಸಪ್ಪಾ ಬಿ. ಶಿವಶೆಟ್ಟಿ ಉದ್ಘಾಟಿಸುವರು. ಅದೇ ದಿನ ಸಂಜೆ 4ಕ್ಕೆ ನಗರೇಶ್ವರ ಶಾಲೆಯಿಂದ ಬಸವೇಶ್ವರ ಪ್ರತಿಮೆ ವರೆಗೆ ವಿಶ್ವಗುರು ಬಸವಣ್ಣನವರ ಮತ್ತು ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ಜರುಗಲಿದೆ. ಎಲ್ಲ ಕಾರ್ಯಕ್ರಮಗಳಿಗೆ ಹರ, ಗುರು, ಚರಮೂರ್ತಿಗಳು, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು ಆಗಮಿಸುವರು ಎಂದು ವಿವರಿಸಿದರು.
ಬಸವ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕಲ್ಯಾಣರಾವ ಮೂಲಗೆ ಕುಮಸಿ, ಪ್ರಧಾನ ಕಾರ್ಯದರ್ಶಿ ಸಿದ್ಧರಾಜ ಬಿರಾದಾರ ಮಹಾಗಾಂವ, ಮಾಜಿ ಮಹಾಪೌರ ಡಾ| ಶರಣಕುಮಾರ ಮೋದಿ, ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಶರಣು ಪಪ್ಪಾ, ಡಾ| ಶ್ರೀಶೈಲ ಘೂಳಿ ಹಾಗೂ ಮುಂತಾದವರು ಇದ್ದರು.
ಪ್ರತ್ಯೇಕ ಬಸವ ಜಯಂತ್ಯುತ್ಸವ
ಇಬ್ಬರೂ ಒಗ್ಗೂಡಿ ಬಸವೇಶ್ವರ ಜಯಂತ್ಯುತ್ಸವ ಆಚರಿಸೋಣ ಎಂಬುದಾಗಿ ಜಾಗತಿಕ ಲಿಂಗಾಯತ ಮಹಾಸಭಾದವರನ್ನು ಪೂರ್ವಬಾವಿ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಸಭೆಗೆ ಬರಲಿಲ್ಲ. ಆದರೆ ಮೇ 8ರಿಂದ ಜಾಗತಿಕ ಮಹಾಸಭಾ ಹಾಗೂ ಬಸವ ಕಾಯಕ ಸಂಘಟನೆಗಳ ಆಶ್ರಯದಲ್ಲಿ ಏ. 8ರಿಂದ ಐದು ದಿನಗಳ ಕಾಲ ಬಸವೇಶ್ವರ ಮೂರ್ತಿ ಆವರಣದಲ್ಲಿ ಪ್ರತ್ಯೇಕವಾಗಿ ಬಸವ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.