ಸಾಹಿತ್ಯಕ್ಕೆ ಕಲ್ಯಾಣ ಕೊಡುಗೆ ಅಪಾರ
ತಂದೆ-ತಾಯಿ, ಸಮಾಜ ಖುಷಿ ಪಡುವಂತಾಗಲಿಬಸವರಾಜಪ್ಪ ಜೀವನ ಆದರ್ಶಮಯ
Team Udayavani, Sep 23, 2019, 11:03 AM IST
ಕಲಬುರಗಿ: ಹುಟ್ಟಿದಾಗ ತಾಯಿ ಖುಷಿಪಟ್ಟರೆ, ಉತ್ತಮ ವ್ಯಕ್ತಿತ್ವದೊಂದಿಗೆ ಬೆಳೆದು ಮುನ್ನಡೆದಾಗ ತಂದೆ ಖುಷಿಪಟ್ಟರೆ, ನಾವು ಮಾಡುವ ಕಾರ್ಯ ನೋಡಿ ಸಮಾಜ ಖುಷಿ ಪಟ್ಟರೆ, ಸತ್ತ ನಂತರ ಸ್ಮಶಾನ ಭೂಮಿ ದುಃಖೀಸಿದರೆ ಅದುವೇ ಆದರ್ಶ ಬದುಕು ಎಂದು ಮುಗುಳನಾಗಾಂವ ಕಟ್ಟಿಮನಿ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನುಡಿದರು.
ಕರ್ನಾಟಕ ಅರ್ಥೋಪೆಡಿಕ್ಸ್ ಅಸೋಷಿಯೆಷನ್ ಅಧ್ಯಕ್ಷರು ಹಾಗೂ ಅರ್ಥೋಪೆಡಿಕ್ ತಜ್ಞರಾದ ಡಾ| ಎಸ್.ಬಿ. ಕಾಮರಡ್ಡಿ ಅವರ ತಂದೆಯವರಾದ ಬಸವರಾಜಪ್ಪ ಕಾಮರಡ್ಡಿ ಅವರ ನನ್ನ ನಿಲುವು ಭಾಗ-1 ಮತ್ತು ಭಾಗ-2ರ ಪುಸ್ತಕಗಳ ಬಿಡುಗಡೆ, ನನ್ನ ನಿಲುವು ವಚನಗಳ ಧ್ವನಿಮುದ್ರಿಕೆ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆಧುನಿಕ ಜೀವನದಲ್ಲಿ ಒತ್ತಡಕ್ಕೆ ಒಳಗಾಗಿ ನಾವು ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಆದರೆ ಶಿಕ್ಷಕರಾಗಿ ಸತ್ಪ್ರಜೆಗಳನ್ನು ನಿರ್ಮಿಸಿ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಆಸರೆಯಾಗಿ ತಮ್ಮದೇ ಕೊಡುಗೆ ನೀಡಿರುವ ಬಸವರಾಜಪ್ಪ ಕಾಮರಡ್ಡಿ ಅವರ ಜೀವನ ಆದರ್ಶಮಯ ಆಗಿದೆ ಎಂದರು.
ಸಾಹಿತ್ಯ ಹಾಗೂ ವಚನ ಸಾಹಿತ್ಯ ಕ್ಷೇತ್ರಕ್ಕೆ ‘ಕಲ್ಯಾಣ ಕರ್ನಾಟಕ’ ಕೊಡುಗೆ ಅಪಾರವಾಗಿದೆ. ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗ ಈ ಭಾಗದಿಂದಲೇ ರಚನೆಯಾಗಿರುವುದು ಹಾಗೂ 12ನೇ ಶತಮಾನದ ಬಸವಾದಿ ಶರಣರ ವಚನಗಳೇ ಇದಕ್ಕೆ ಸಾಕ್ಷಿ. ಅದೇ ರೀತಿ ಅನುಭಾವಿಗಳು ಅದರಲ್ಲೂ 92 ಇಳಿ ವಯಸ್ಸಿನಲ್ಲಿ ತಮ್ಮ ಅನುಭಾವವನ್ನು ವಚನಗಳ ಮೂಲಕ ‘ನನ್ನ ನಿಲುವು ಪುಸ್ತಕ’ ನೀಡಿದ್ದರಿಂದ ಬಸವರಾಜಪ್ಪ ಅವರ ಕಾಣಿಕೆಯೂ ಇದರಲ್ಲಿ ಸೇರಿದೆ ಎಂದು ಹೇಳಿದರು.
ಹೆಡಗಿಮದ್ರಿ ಶಾಂತವೀರ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳು ಜೀವನ ಪರಿಪೂರ್ಣ ಮಾಡುವ ಕ್ಷೇತ್ರಗಳಾಗಿವೆ ಎಂದರು.
ಸಂಸದ ಡಾ| ಉಮೇಶ ಜಾಧವ ಮಾತನಾಡಿದರು. ಮಾಜಿ ಸಚಿವ ಡಾ| ಎ.ಬಿ. ಮಾಲಕರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಎಂ.ವೈ. ಪಾಟೀಲ, ಸುಭಾಷ ಆರ್. ಗುತ್ತೇದಾರ, ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಶೀಲ್ ನಮೋಶಿ, ಅಲ್ಲಮಪ್ರಭು ಪಾಟೀಲ ನೆಲೋಗಿ, ನಾಗರೆಡ್ಡಿ ಪಾಟೀಲ, ಎಚ್‌ಕೆಇ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಮುಖಂಡರಾದ ಭಾಗಣ್ಣಗೌಡ ಸಂಕನೂರ ಮುಂತಾದವರಿದ್ದರು.
ವೀರಮ್ಮ ಗಂಗಸಿರಿ ಮಹಿಳಾ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ| ಈಶ್ವರಯ್ಯ ಮಠ ಪುಸ್ತಕಗಳ ಕುರಿತು ಮಾತನಾಡಿದರು. ಡಾ| ಎಸ್.ಬಿ. ಕಾಮರಡ್ಡಿ ಸ್ವಾಗತಿಸಿದರು. ಇದೇ ವೇಳೆ ಬಸವರಾಜ ಇಷ್ಟಲಿಂಗಪ್ಪ ಬರೆದ ಪುಸ್ತಕ ಬಿಡುಗಡೆ ಮಾಡಲಾಯಿತು.
ಪ್ರೊ| ಶಶಿಶೇಖರರೆಡ್ಡಿ ನಿರೂಪಿಸಿದರು. ಬೀದರ್‌ನ ಶಿವಕುಮಾರ ಪಂಚಾರ ನಿರೂಪಿಸಿದ ವಚನ ಗಾಯನ ಹಾಗೂ ವಿನ್ಯಾಸ ಧರ್ಮಗಿರಿ ನೇತೃತ್ವದಲ್ಲಿ ನಡೆದ ನೃತ್ಯ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.