ಪ್ರತ್ಯೇಕ ಗುಂಪಿಗೆ ಸೇರಿದೆ ದ್ರಾವಿಡ ಭಾಷೆ
1600 ಭಾಷೆ ಅಳಿವಿನಂಚಿನಲ್ಲಿ•ಭಾಷೆಗಳ ಅಧ್ಯಯನ ಅಗತ್ಯ
Team Udayavani, Jun 23, 2019, 12:49 PM IST
ಕಲಬುರಗಿ: 47ನೇ ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರಜ್ಞರ ಸಮ್ಮೇಳನ ಹಾಗೂ ಅಳಿವಿನಂಚಿನ ಭಾಷೆ ಕುರಿತ ಅಂತಾರಾಷೀóಯ ಸಮ್ಮೇಳನಕ್ಕೆ ಕೇಂದ್ರೀಯ ವಿವಿ ಕುಲಪತಿ ಪ್ರೊ| ಎಚ್.ಮಹೇಶ್ವರಯ್ಯ ಚಾಲನೆ ನೀಡಿದರು.
ಕಲಬುರಗಿ: ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮುಂತಾದ ಪ್ರಮುಖ ಭಾಷೆಗಳು ತಮ್ಮದೆಯಾದ ಪ್ರತ್ಯೇಕ ಗುಂಪುಗಳಿಗೆ ಸೇರಿದ್ದಾಗಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಹೆಚ್.ಎಂ. ಮಹೇಶ್ವರಯ್ಯ ಹೇಳಿದರು.
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ತಿರುವನಂತಪುರಂ ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ’47ನೇ ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರಜ್ಞರ ಸಮ್ಮೇಳನ ಹಾಗೂ ಅಳಿವಿನಂಚಿನ ಭಾಷೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ’ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಬರ್ಟ ಕಾಲ್ಡ್ವೆಲ್ ಇವುಗಳನ್ನು ದ್ರಾವಿಡ ಭಾಷೆಗಳೆಂದು ಹೆಸರಿಸಿದ್ದಾರೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಅನೇಕ ದ್ರಾವಿಡ ಭಾಷೆಗಳಿವೆ. ಭಾರತದಲ್ಲಿ ಶೇ.20ರಷ್ಟು ಜನ ದ್ರಾವಿಡ ಭಾಷೆಗಳನ್ನು ಉಪಯೋಗಿಸುತ್ತಿದ್ದಾರೆ ಎಂದರು.
ದ್ರಾವಿಡ ಭಾಷೆಗಳ ಅಧ್ಯಯನಕ್ಕಾಗಿ 1971ರಲ್ಲಿ ದ್ರಾವಿಡ ಭಾಷಾಶಾಸ್ತ್ರಜ್ಞರ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆ ಪ್ರತಿ ವರ್ಷ ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರಜ್ಞರ ಸಮ್ಮೇಳನ ಆಯೋಜಿಸುತ್ತಿದ್ದು, ದ್ರಾವಿಡ ಭಾಷೆಗಳ ಅಧ್ಯಯನದಲ್ಲಿ ಅತೀ ಮಹತ್ವದ ಪಾತ್ರ ವಹಿಸುತ್ತಿದೆ. ತದನಂತರ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಾಶಾಸ್ತ್ರಗಳ ಅಧ್ಯಯನ ಸಂಸ್ಥೆಗಳ ಸ್ಥಾಪನೆಗೆ ಸಹಕಾರಿಯಾಯಿತು ಎಂದು ಹೇಳಿದರು.
1942ನೇ ಇಸವಿಯಲ್ಲಿ ದ್ರಾವಿಡ ಭಾಷೆಗಳ ಅಧ್ಯಯನಕ್ಕೆ ವಿಶಿಷ್ಟ ಕೊಡುಗೆ ನೀಡಿದ ಪ್ರಮುಖರೆಂದರೆ ಎ.ನರಸಿಂಹಯ್ಯ, ಆರ್.ನರಸಿಂಹಚಾರ್ಯ, ಪ್ರೊ| ಟಿ.ಎನ್. ಶ್ರೀಕಂಠಯ್ಯ, ಕೆ.ವಿ. ಸುಬ್ಬಯ್ಯ, ಸಿ.ಪಿ. ವೆಂಕಟರಾಮ ಅಯ್ಯರ್, ಕೆ. ರಾಮಕೃಷ್ಣಯ್ಯ ಇನ್ನು ಮುಂತಾದವರು ಎಂದು ತಿಳಿಸಿದರು.
ಜಗತ್ತಿನಾದ್ಯಂತ ಜಾಗತೀಕರಣದಿಂದಾಗಿ ಅನೇಕ ಭಾಷೆಗಳು ಅಳಿವಿನಂಚಿನಲ್ಲಿವೆ. ಭಾರತದಲ್ಲಿ ಸುಮಾರು 1600 ಭಾಷೆಗಳು ಅಳಿವಿನಂಚಿನಲ್ಲಿರುವುದು ಖೇದಕರದ ಸಂಗತಿ. ಇವುಗಳ ಅಧ್ಯಯನ ಮತ್ತು ಉಳಿವಿಗಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ ಎಂದರು. ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಅಧ್ಯಕ್ಷ ಪ್ರೊ| ಎ. ಮುರಿಗೆಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು.
ತಿರುವನಂತಪುರದ ಅಂತಾರಾಷ್ಟ್ರೀಯ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ನಿರ್ದೇಶಕ ಪ್ರೊ| ನಡುವಟ್ಟಂ ಗೋಪಾಲಕೃಷ್ಣನ್ ಮಾತನಾಡಿ, ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆ ಕುರಿತು ವಿವರಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ| ಜಿ.ಆರ್. ನಾಯಕ ಸ್ವಾಗತಿಸಿದರು. ಕುಲಸಚಿವ ಪ್ರೊ| ಮುಸ್ತಾಕ್ ಅಹ್ಮದ ಐ. ಪಟೇಲ್ ವಂದಿಸಿದರು. ಡಾ| ಸಫಿಯಾ ಪರ್ವಿನ್ ನಿರೂಪಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿಧ ನಿಕಾಯದ ಡೀನ್‌ಗಳು, ಮುಖ್ಯಸ್ಥರು, ಪ್ರಾಧ್ಯಾಪಕ ವೃಂದ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗವು ಈ ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾದರು. ಭಾರತ ಸೇರಿದಂತೆ ಸಿಂಗಾಪೂರ, ಶ್ರೀಲಂಕಾ, ರಷ್ಯಾ, ಯೆಮೆನ್ ದೇಶದ 80ಕ್ಕೂ ಹೆಚ್ಚು ಭಾಷಾಶಾಸ್ತ್ರತಜ್ಞರು ಭಾಗವಹಿಸಿ ತಮ್ಮ ಪ್ರಬಂಧ ಮಂಡಿಸಿದರು. ಇದೇ ಸಂದರ್ಭದಲ್ಲಿ ಅನೇಕ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.