ಬೆಳೆವಿಮೆ ಮಂಜೂರಾತಿಯಲ್ಲಿ ಲೋಪದೋಷ ಸಾಬೀತು

ಎರಡು ಗ್ರಾಮಗಳಿಗೆ 4 ಕೋಟಿ, ಜಿಲ್ಲೆಯಾದ್ಯಂತ 8 ಕೋಟಿ •ಹಾನಿ ನಿಖರ ವರದಿ ದಾಖಲಿಸದವರ ವಿರುದ್ಧ ಕ್ರಮಕ್ಕೆ ಆಗ್ರಹ

Team Udayavani, Aug 7, 2019, 9:59 AM IST

Udayavani Kannada Newspaper

ಹಣಮಂತರಾವ ಭೈರಾಮಡಗಿ
ಕಲಬುರಗಿ:
ಕಳೆದ 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಮಂಜೂರಾತಿಯಲ್ಲಿ ಲೋಪದೋಷ ಸಾಬೀತಾದಂತಾಗಿದ್ದು, ಇದರಿಂದ ರೈತರು ಶೋಷಣೆಗೆ ಒಳಗಾದಂತಾಗಿದೆ.

ಕಳೆದ ವರ್ಷ ಭೀಕರ ಬರಗಾಲ ಎದುರಾಗಿ ಯಾವುದೇ ಬೆಳೆಗಳು ಕೈಗೆ ಬಾರದೇ ನಷ್ಟವಾಗಿರುವುದು ಸತ್ಯವಾಗಿದೆ. ಕಳೆದ ವರ್ಷದ ಬೆಳೆ ಹಾನಿ ಅವಲೋಕಿಸಿದರೆ ಕಲಬುರಗಿ ಜಿಲ್ಲೆಯಲ್ಲಿರುವ 220 ಗ್ರಾಪಂಗಳಲ್ಲಿ ಪ್ರತಿ ಗ್ರಾಪಂಗೆ ಕನಿಷ್ಠ ಒಂದು ಕೋಟಿ ರೂ.ದಂತೆ ಕನಿಷ್ಠ 200 ಕೋಟಿ ರೂ. ಬೆಳೆವಿಮೆ ಮಂಜೂರಾಗಬೇಕಿತ್ತು. ಆದರೆ ಕೇವಲ 12 ಕೋಟಿ ರೂ. ಬೆಳೆವಿಮೆ ಮಂಜೂರಾಗಿದೆ.

ಜಿಲ್ಲೆಗೆ ಮೊದಲು 10.35 ಕೋಟಿ ರೂ. ಬೆಳೆವಿಮೆ ಮಂಜೂರು ಮಾಡಿ ತದನಂತರ ಒಂದೆರಡು ದೋಷ ಸರಿಪಡಿಸಿ ಈಗ 12.21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಎರಡು ಗ್ರಾಮಕ್ಕೆ 4 ಕೋಟಿ ರೂ. ಬೆಳೆ ವಿಮೆ ಮಂಜೂರಾದರೆ ಇಡೀ ಜಿಲ್ಲೆಗೆ ಉಳಿದ ಎಂಟು ಕೋಟಿ ರೂ. ಮಂಜೂರಾಗಿದೆ. ಇದು ಲೋಪದೋಷಕ್ಕೆ ಹಿಡಿದ ಕನ್ನಡಿಯಂತಿದೆ.

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಹಾಗೂ ಫಿರೋಜಾಬಾದ್‌ ಗ್ರಾಮಕ್ಕೆ 4 ಕೋಟಿ ರೂ. ಸಮೀಪ ಬೆಳೆ ವಿಮೆ ಮಂಜೂರಾಗಿದೆ. ಫಿರೋಜಾಬಾದ್‌ ಗ್ರಾಮದ 263 ರೈತರಿಗೆ ಒಟ್ಟಾರೆ 1.11 ಕೋಟಿ ರೂ., ಹೊನ್ನಕಿರಣಗಿ ಗ್ರಾಮದ 313 ರೈತರಿಗೆ 2.85 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿ ಅವರ ಖಾತೆಗಳಿಗೆ ಹಣ ಬಿಡುಗಡೆಯಾಗುತ್ತಿದೆ. ಕಳೆದ ವರ್ಷ ಭೀಕರ ಬರಗಾಲ ಎದುರಾಗಿ ಜಿಲ್ಲಾದ್ಯಂತ ಎಕರೆಗೆ ಎರಡು ಚೀಲ ಇಳುವರಿ ಬಂದಿಲ್ಲ. ಆಶ್ಚರ್ಯ ಎಂದರೆ ಹೊನ್ನಕಿರಣಗಿ, ಫಿರೋಜಾಬಾದ್‌ ಅಕ್ಕಪಕ್ಕದ ಗ್ರಾಮಗಳಿಗೆ ನಯಾ ಪೈಸೆ ಬೆಳೆ ವಿಮೆ ಮಂಜೂರಾಗಿಲ್ಲ. ಹೇರೂರ ಬಿ., ಹಾಗರಗುಂಡಗಿ, ನದಿಸಿನ್ನೂರ ಸೇರಿದಂತೆ ಇತರ ಗ್ರಾಮಗಳಿಗೆ ಅಷ್ಟೇ ಏಕೆ ಫ‌ರಹತಾಬಾದಕ್ಕೂ ಬೆಳೆ ವಿಮೆ ಮಂಜೂರಾಗಿಲ್ಲ. ಇದನ್ನು ಅವಲೋಕಿಸಿದರೆ ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್) ನಿಖರವಾಗಿ ದಾಖಲಿಸುವಲ್ಲಿ ಸಂಪೂರ್ಣ ಲೋಪವಾಗಿರುವುದು ಸಾಬೀತುಪಡಿಸುತ್ತದೆ.

ಕಳೆದ ವರ್ಷ ಅಫ‌ಜಲಪುರ, ಜೇವರ್ಗಿ ಸೇರಿದಂತೆ ಮಳೆ ಕೊರತೆಯಾಗಿ ತೊಗರಿ ಸೇರಿದಂತೆ ಇತರ ಬೆಳೆ ಅತ್ಯಂತ ಕಡಿಮೆಯಾಗಿ ಇಳುವರಿ ಬಂದಿದೆ. ಒಂದು ವೇಳೆ ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸಪಿರಮೆಂಟ್) ಅಳೆಯುವಲ್ಲಿ ಸರಿಯಾಗಿ ನಡೆದಿದ್ದರೆ ಎಲ್ಲ ಗ್ರಾಪಂಗಳಿಗೂ ಬೆಳೆ ವಿಮೆ ಮಂಜೂರಾಗುತ್ತಿತ್ತು. ಅದರೆ ವಾಸ್ತವ ವರದಿ ರೂಪಿಸುವಲ್ಲಿ ಜಿಲ್ಲಾಡಳಿತ ವಿಫ‌ಲವಾಗಿದ್ದರಿಂದ ರೈತರು ಬೆಳೆ ವಿಮೆಯಿಂದ ವಂಚಿರಾಗಿದ್ದಾರೆ.

ಲೋಪಕ್ಕೆ ಶಿಕ್ಷೆ ಏನು: ಕಳೆದ ವರ್ಷ ಬೆಳೆ ವಿಮೆ ಮಂಜೂರಾಗುವಲ್ಲಿ ಲೋಪದೋಷವಾಗಿದೆ. ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್) ಸರಿಯಾಗಿ ಮಾಡದಿರುವ ಹಿನ್ನೆಲೆಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಆದರೆ ಸರಿಯಾದ ವರದಿ ರೂಪಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ, ಜಿಲ್ಲಾದ್ಯಂತ ನಡೆಸಲಾದ ಒಂದು ಸಾವಿರ ಕ್ಷೇತ್ರಗಳಲ್ಲಿನ ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್) ನಿಗದಿಯಲ್ಲಿ ಸುಮಾರು 900 ಕ್ಷೇತ್ರಗಳ ವರದಿ ವಾಸ್ತವವಾಗಿ ಮಾಡದೇ ಬೇಕಾಬಿಟ್ಟಿ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಹೀಗಾಗಿ ಸಂಬಂಧಪಟ್ಟ 900 ಕ್ಷೇತ್ರಗಳಲ್ಲಿನ ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್) ನಿಖರವಾಗಿ ಅಳೆದು ಅದನ್ನು ವರದಿಯಲ್ಲಿ ಉಲ್ಲೇಖಸದ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ರೈತರಿಗೆ ನಷ್ಟವಾಗಿರುವ ಸುಮಾರು 200 ಕೋಟಿ ರೂ. ಇವರಿಂದ ವಸೂಲಾತಿ ಮಾಡಿದಾಗ ಮಾತ್ರ ಮುಂದೆ ಇಂತಹ ಶೋಷಣೆ -ಅನ್ಯಾಯ ತಪ್ಪಿಸಬಹುದಾಗಿದೆ.

ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್)ವನ್ನು ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿಗೊಳಿಸಲಾದ ಕ್ಷೇತ್ರಗಳಿಗೆ ಹೋಗಿ ಇಳುವರಿ ವರದಿ ರೂಪಿಸಬೇಕು. ಆದರೆ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಿಬ್ಬಂದಿ ಮಾಡಿದ್ದು ಅವಾಂತರ ಹಾಗೂ ಕರ್ತವ್ಯಲೋಪಕ್ಕೆ ಕಾರಣವಾಗಿದೆ. ಒಟ್ಟಾರೆ ಬೆಳೆ ವಿಮೆ ಕಂಪನಿಗಳು ಹಾಗೂ ಅಧಿಕಾರಿಗಳ ಒಳ ಒಪ್ಪಂದಿಂದ ರೈತರಿಗೆ ಬೆಳೆ ವಿಮೆ ಎಂಬುದನ್ನು ಕನ್ನಡಿಯೊಳಗಿನ ಗಂಟಾಗಿ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ.

ಬೆಳೆ ವಿಮೆ ಮಂಜೂರಾತಿ ಸಮರ್ಪಕವಾಗಿಲ್ಲ. ಸಂಪೂರ್ಣ ಲೋಪವಾಗಿದೆ. ತಮ್ಮ ಕ್ಷೇತ್ರದ ಎರಡು ಹಳ್ಳಿಗಳಿಗೆ ಬೆಳೆ ಹಾನಿಗೆ ತಕ್ಕ ನಾಲ್ಕು ಕೋಟಿ ರೂ. ಬೆಳೆ ವಿಮೆ ಮಂಜೂರಾಗಿರುವುದು ಸಂತಸವಾಗಿದೆ. ಆದರೆ ಅದೇ ಗ್ರಾಮದ ಪಕ್ಕದ ಹಳ್ಳಿಗಳಿಗೆ ನಯಾಪೈಸೆ ಬಿಡುಗಡೆ ಆಗದಿರುವುದು ಶೋಷಣೆಗೆ ಹಿಡಿದ ಕನ್ನಡಿಯಾಗಿದೆ. ಎಲ್ಲ ರೈತರಿಗೂ ನ್ಯಾಯ ಸಿಗಲು ಮಗದೊಮ್ಮೆ ಸಮೀಕ್ಷೆ ರೂಪಿಸಿ ಬೆಳೆ ಹಾನಿಗೆ ತಕ್ಕ ಪರಿಹಾರ ಸಿಗಬೇಕು.
ಎಂ.ವೈ. ಪಾಟೀಲ,
 ಶಾಸಕ, ಅಫ‌ಜಲಪುರ

ಮುಖ್ಯಮಂತ್ರಿ ಗಮನಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಹಂಗಾಮಿನ ಬೆಳೆ ವಿಮೆ ಮಂಜೂರಾತಿಯಲ್ಲಿ ಅನ್ಯಾಯ ಹಾಗೂ ಲೋಪದೋಷ ಆಗಿರುವುದನ್ನು ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗಮನಕ್ಕೆ ತರಲಾಗಿದೆ. ಅವರು ಮರು ಸಮೀಕ್ಷೆ ಬಗ್ಗೆ ಒಲವು ಹೊಂದಿದ್ದಾರೆ. ತಾವು ಮನವಿ ಸಲ್ಲಿಸುವ ಮುಂಚೆಯೇ ಕಲಬುರಗಿ ಜಿಲ್ಲೆಗೆ ಬೆಳೆ ವಿಮೆ ಮಂಜೂರಾತಿಯಲ್ಲಿ ಲೋಪವಾಗಿರುವುದು ಗಮನದಲ್ಲಿದೆ. ಹೀಗಾಗಿ ರೈತರಿಗೆ ನ್ಯಾಯ ದೊರಕುವ ವಿಶ್ವಾಸವಿದೆ.
ಸಿದ್ರಾಮಪ್ಪ ಪಾಟೀಲ ಧಂಗಾಪುರ,
 ಅಧ್ಯಕ್ಷರು ಜಿಲ್ಲಾ ಕೃಷಿಕ ಸಮಾಜ

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.