ಜಯಂತಿ ಇತಿಹಾಸ ಪ್ರಜ್ಞೆ ಬಡಿದೆಬ್ಬಿಸಲಿ

ಅಧಿಕಾರಿಗಳ ಸಭೆಯಂತೆ ಜಯಂತಿ ನಡೆಸಬೇಡಿ ಮಹಾತತ್ಮರ ಆದರ್ಶ ಮುಂದಿನ ಪೀಳಿಗೆಗೆ ತಿಳಿಸಿ

Team Udayavani, Oct 24, 2019, 10:51 AM IST

24-October-1

ಕಲಬುರಗಿ: ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ ಇತಿಹಾಸ ಪ್ರಜ್ಞೆ ಬಡಿದೆಬ್ಬಿಸುವಂತಿರಬೇಕು. ಅವರ ಹೋರಾಟ, ಧೈರ್ಯ ಮತ್ತು ಸಾಹಸ ಮಕ್ಕಳಿಗೆ ತಿಳಿಸುವ ಉತ್ಸವ ಮಾದರಿಯಲ್ಲಿ ಜಯಂತಿ ಆಚರಿಸಬೇಕು ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.

ನಗರದ ಡಾ| ಎಸ್‌.ಎಂ. ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹತ್ತಾರು ಮಹಿಳಾ ಸಂಘಗಳು ಇವೆ. ಆದರೆ, ಮಹಿಳೆಯರ ಆದರ್ಶಪ್ರಾಯವಾದ ಚನ್ನಮ್ಮಳ ಜಯಂತಿ ಆಚರಣೆಯಲ್ಲೂ ಮಹಿಳೆಯರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿ ಚನ್ನಮ್ಮ ವೀರರಾಣಿ ಎನ್ನಿಸಿಕೊಂಡಿದ್ದರು. ಚನ್ನಮ್ಮಳ ಜಯಂತಿಗೆ ಸರ್ಕಾರಿ ಆದೇಶ ಇದೆ ಎಂದು ಕಾಟಾಚಾರದ ಆಚರಣೆ ಅಥವಾ ಅಧಿಕಾರಿಗಳ ಸಭೆಯಂತೆ ನಡೆಸುವುದು ಸರಿಯಲ್ಲ ಎಂದರು.

ಈ ವೇಳೆ ಸಭಿಕರೊಬ್ಬರು ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಆದ್ದರಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತದೆ ಎಂದರು. ಇದಕ್ಕೆ ಉತ್ತರಿಸದೇ ಸಂಸದ ಜಾಧವ ತಮ್ಮ ಭಾಷಣ ಮುಂದುವರಿಸಿದರು. ಕಿತ್ತೂರ ರಾಣಿ ಚೆನ್ನಮ್ಮ ಬಾಲ್ಯದಲ್ಲೇ ಧೀರ ಮಹಿಳೆಯಾಗಿ ರೂಪುಗೊಂಡಿದ್ದರು. ಪುರುಷರಿಗೆ ಸರಿಸಮನಾದ ಕತ್ತಿ ವರಸೆ, ಕುದುರೆ ಸವಾರಿ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದರು.

ಬ್ರಿಟಿಷರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ ವೀರ ಮಹಿಳೆ ಚನ್ನಮ್ಮ. ಇಂತಹ ಚನ್ನಮ್ಮನ ಆದರ್ಶ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು. ಚನ್ನಮ್ಮಳ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಚಿ.ಸಿ.ಲಿಂಗಣ್ಣ ಮಾತನಾಡಿ, ಬ್ರಿಟಿಷರ ಆಡಳಿತದ ವಿರುದ್ಧ ಹೋರಾಟಕ್ಕೆ ಧುಮುಕಿದ ಮೊದಲ ವೀರ ರಾಣಿ ಚನ್ನಮ್ಮ, ತನ್ನ ಸಂಸ್ಥಾನ ಉಳಿಸಿಕೊಳ್ಳಲು ನಡೆಸಿದ ಹೋರಾಟ ದೇಶಕ್ಕೆ ಮಾದರಿಯಾಗಿದೆ. ಬ್ರಿಟಿಷರಿಂದ ಸಂಸ್ಥಾನ ಉಳಿಸಿಕೊಳ್ಳಲು ಸೈನಿಕರಿಗೆ ಧೈರ್ಯ, ಸ್ಥೈರ್ಯ ತುಂಬುವ ಕೆಲಸ ಮಾಡಿದರು.ಇದು ಸಂಗ್ರಾಮಕ್ಕೆ ನಾಂದಿ ಹಾಡಿತು ಎಂದು ಹೇಳಬಹುದಾಗಿದೆ ಎಂದರು.

ಬ್ರಿಟಿಷರ ಒಡೆದು ಆಳುವ ನೀತಿಯಿಂದ ದೇಶಿ ಸಂಸ್ಥಾನಗಳು ಚನ್ನಮ್ಮನ ನೆರವಿಗೆ ಬರುವುದಿಲ್ಲ. ಕಿತ್ತೂರು ಸಂಸ್ಥಾನದ ಮೇಲೆ ಮತ್ತೂಮ್ಮೆ ಬ್ರಿಟಿಷರು ಯುದ್ಧ ಸಾರಿ ಚನ್ನಮ್ಮಳನ್ನು ಬಂಧಿಸುತ್ತಾರೆ. ಇಂತಹ ಹೋರಾಟಗಾರರ ಜಯಂತಿಗಳು ಕೇವಲ ಜಾತಿಗೆ ಸಿಮೀತವಾಗವಾರದು ಎಂದರು. ಜಿ.ಪಂ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಉದ್ಘಾಟಿಸಿದರು.

ಅಪರ ಜಿಲ್ಲಾ ಧಿಕಾರಿ ಡಾ| ಶಂಕರಣ್ಣ ವಣಿಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಡಿಎಸ್‌ಪಿ ಜೇಮ್ಸ್‌ ಮಿನೇಜಸ್‌, ಕೊಟ್ರೇಶ ಮರಬನಳ್ಳಿ ಭಾಗವಹಿಸಿದ್ದರು. ಶಶೀಕಲಾ ಜಡೆ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

Waqf

Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು

Sedam-yathre

Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್‌ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.