9 ದಶಕ ನೀರು ಕುಡಿಸಿದ ಕೆರೆ ಈಗ ಬರಿದು
Team Udayavani, May 5, 2019, 10:00 AM IST
ಕಲಬುರಗಿ: ಎರಡು ವರ್ಷದ ಹಿಂದೆ ಭರ್ತಿಯಾಗಿದ್ದ ಕೆರೆ ಈಗ ಸಂಪೂರ್ಣ ಒಣಗಿ ಹೋಗಿದೆ
ಕಲಬುರಗಿ: ಒಂಭತ್ತು ದಶಕಗಳ ಕಾಲ ಮಹಾನಗರಕ್ಕೆ ನೀರು ಪೂರೈಕೆಯಾಗಿದ್ದ ನಗರದ ಹೊರ ವಲಯದಿಂದ 8 ಕಿ.ಮೀ ದೂರವಿರುವ ಭೋಸಗಾ ಕೆರೆಯೀಗ ಸಂಪೂರ್ಣ ಒಣಗಿ ಮರುಭೂಮಿಯಂತೆ ಆಗಿದೆ.
ಹೈದ್ರಾಬಾದ ನಿಜಾಮನ ಕಾಲದಲ್ಲಿ ಅಂದರೆ 1904ರಲ್ಲಿ ಕಲಬುರಗಿ ಪಟ್ಟಣಕ್ಕೆ ಅಗಿನ ಅಂದಾಜು 20ರಿಂದ 30 ಸಾವಿರ ಜನರಿಗೆ ಕುಡಿಯುವ ನೀರಿಗೆಂದು ನಿರ್ಮಿಸಲಾದ 100 ಹೆಕ್ಟೇರ್‌ಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿರುವ ಕೆರಿಭೋಸಗಾ ಕೆರೆ ಕಲಬುರಗಿ ಮಹಾನಗರಕ್ಕೆ ಒಂಭತ್ತು ದಶಕಗಳ ಕಾಲ ನೀರು ಕುಡಿಸಿದೆ. ಹೀಗೆ ಮಹಾನಗರಕ್ಕೆ ನೀರು ಕುಡಿಸಿದ ಕೆರೆ ಈಗ ಬತ್ತಿ ಹೋಗಿದೆ. ಐತಿಹಾಸಿಕ ಕೆರೆ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೆರೆಯಲ್ಲಿ ವರ್ಷದಿಂದ ವರ್ಷಕ್ಕೆ ನೀರು ಸಂಗ್ರಹವಾಗುವಿಕೆಯಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ಕಳೆದ ಹಲವಾರು ವರ್ಷಗಳಿಂದ ಒಣಗದ ಕೆರೆ ಈಗ ಒಣಗಿದೆ.
ಮಳೆಗಾಲದಲ್ಲಿ ಕೆರೆ ತುಂಬಿದರೆ ಈಗಲೂ ಕಲಬುರಗಿ ಮಹಾನಗರಕ್ಕೆ ಪೂರೈಕೆಯಾಗುವ ಫಿಲ್ಟರ್‌ಬೆಡ್‌ಗೆ ಈ ಕೆರೆಭೋಸಗಾ ಕೆರೆ ನೀರು ಬರುತ್ತದೆ. ಆದರೆ ನೀರು ಪೂರೈಕೆ ಮಾರ್ಗಕ್ಕೆ ಸುಧಾರಣೆ ಕ್ರಮ ಕೈಗೊಳ್ಳದೇ ಇರುವುದರಿಂದ ನೀರು ಬರಲು ಅಡಚಣೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಮಹಾನಗರದ ಜನಸಂಖ್ಯೆ ಅಪರಿಮಿತವಾಗಿ ಹೆಚ್ಚಳವಾಗಿದ್ದರಿಂದ ಭೀಮಾ ನದಿ ಜತೆಗೆ ಬೆಣ್ಣೆತೋರಾದಿಂದ ನೀರು ಸರಬರಾಜಿಗೆ ಕ್ರಮ ಕೈಗೊಂಡಿದ್ದರಿಂದ ಜತೆಗೆ ಕೆರಿಭೋಸಗಾ ಕೆರೆ ನೀರು ಸಾಕಾಗುವುದಿಲ್ಲ ಎಂದು ತಿಳಿದಿದ್ದರಿಂದ ಭೀಮಾ ನದಿ ಹಾಗೂ ಬೆಣ್ಣೆತೋರಾದಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ನೀರು ಪೂರೈಕೆಗೆ ವಿದ್ಯುತ್ ಬೇಕಿಲ್ಲ: ಕೆರಿಭೋಸಗಾ ಕೆರೆಯಿಂದ ಮಹಾನಗರಕ್ಕೆ ನೀರು ಪೂರೈಕೆಯಾಗಬೇಕೆಂದರೆ ವಿದ್ಯುತ್ ಸೌಕರ್ಯ ಬೇಕಾಗಿಲ್ಲ. ಯಾವುದೇ ವಿದ್ಯುತ್ ಇಲ್ಲದೇ ಕೆರೆ ವಾಲ್ನಿಂದ ನಗರದಲ್ಲಿರುವ ಫಿಲ್ಟರ್ ಬೆಡ್‌ಗೆ 8 ಕಿ.ಮೀ ದೂರದವರೆಗೂ ನೀರು ಸರಳವಾಗಿ ಹರಿಸಬಹುದಾಗಿದೆ. ಮೇಲಿಂದ ಕೆಳಭಾಗವಾಗಿ ಸರಳವಾಗಿ ನೀರು ಹರಿಯುವ ಹಾಗೆ ಶತಕದ ಹಿಂದೆಯೇ ತಾಂತ್ರಿಕವಾಗಿ ನಿರ್ಮಿಸಲಾಗಿದೆ. ಹೀಗಾಗಿ ಒಂಭತ್ತು ದಶಕಗಳ ಕಾಲದಿಂದಲೂ ಮಹಾನಗರಕ್ಕೆ ನೀರು ಪೂರೈಕೆಯಾಗಿದೆ. 115 ವರ್ಷ ಇತಿಹಾಸ ಹೊಂದಿರುವ ಕೆರಿಭೋಸಗಾ ಕೆರೆ ಹಲವು ವರ್ಷಗಳ ಬಳಿಕ ಸಂಪೂರ್ಣ ಬತ್ತಿ ಹೋಗಿದೆ.
ಮಳೆ ಕೊರತೆಯಿಂದ ಐತಿಹಾಸಿಕ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಅಲ್ಲದೇ ಸ್ಥಳದಲ್ಲಿ ನೋಡಿದರೆ ಇದೇ ಸ್ಥಳದಲ್ಲಿ ಕೆರೆ ಇತ್ತೇ ಎನ್ನುವ ಮಟ್ಟಿಗೆ ಕೆರೆ ಬತ್ತಿ ಹೋಗಿದೆ. ಕೆರೆ ಬತ್ತಿ ಹೋಗಿದ್ದರಿಂದ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಿಗೆ ಪೂರೈಕೆಯಾಗುತ್ತಿದ್ದ ನೀರಿಗೂ ಹೊಡೆತ ಬಿದ್ದಿದೆ. ಬಾವಿ ಹಾಗೂ ಬೋರವೆಲ್ಗಳಲ್ಲಿಯೂ ನೀರು ಬತ್ತಿ ಹೋಗಿದ್ದರಿಂದ ತೋಟಗಾರಿಕಾ ಕೃಷಿಗೆ ಪೆಟ್ಟು ಬಿದ್ದಿದೆ. ಮುಖ್ಯವಾಗಿ ಜನ ಜಾನುವಾರುಗಳಿಗೆ ಈ ಕೆರೆಯೇ ಆಶ್ರಯವಾಗಿತ್ತು. ಆದರೆ ಕೆರೆ ಬತ್ತಿ ಹೋಗಿದ್ದರಿಂದ ಕೊಡ ನೀರಿಗೂ ಬಡಿದಾಡುವಂತಾಗಿದೆ. ಅಳಿವಿನಂಚಿಗೆ ತಲುಪಿರುವ ಈ ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಎನ್ನುತ್ತಾರೆ ಗ್ರಾಮಸ್ಥರು. ಈ ಮೊದಲು ಸಣ್ಣ ನೀರಾವರಿ ಇಲಾಖೆಯಡಿದ್ದ ಕೆರೆ ಕೆಲವು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಅಡಿ ಬಂದಿದೆ. ಆದರೀಗ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಡಿ ಹೋಗಿದೆ. ಮಂಡಳಿಯವರಂತೂ ನೀರು ಪೂರೈಕೆ ಮಾಡುವುದೇ ದೊಡ್ಡ ಕೆಲಸವಾಗಿದೆ. ಹೀಗಾಗಿ ಈ ಕೆರೆ ಕಡೆ ಯಾವಾಗ ಲಕ್ಷ್ಯ ವಹಿಸಬೇಕೆನ್ನುತ್ತಾರೆ. ಹೀಗೆ ಒಬ್ಬರ ಮೇಲೋಬ್ಬರು ಹಾಕುತ್ತಾ ಹೋದರೆ ಶತಮಾನದ ಕೆರೆ ಮುಂದಿನ ದಿನಗಳಲ್ಲಿ ಹುಡುಕಾಡುವಂತಹ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ಕೆರೆ ಒಣಗುವುದನ್ನೇ ಕೆಲವರು ಕಾಯುತ್ತಾರೆ
ಭೋಸಗಾ ಕೆರೆ ಒಣಗಿ ಹೋಗುವುದನ್ನು ಕೆಲವರು ಎದುರು ನೋಡುತ್ತಾರೆ ಎನ್ನಲಾಗುತ್ತಿದೆ. ಏಕೆಂದರೆ ಕೆರೆ ಹೇಗೆ ಒಣಗಿ ಹೋಗುತ್ತದೆಯೋ ಹಾಗೆ ಭೂಮಿಯನ್ನು ಕೆಲವರು ಕಬ್ಜಾ ಮಾಡಿಕೊಂಡು ಆ ಭೂಮಿಯ ಮಣ್ಣನ್ನು ಮಾರುತ್ತಿರುವ ವ್ಯವಹಾರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈಗಂತೂ ಮಣ್ಣು ದಂಧೆ ಜೋರಾಗಿ ನಡೆದಿದೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಆದ್ದದರಿಂದ ಹನಿ ನೀರಿಗೂ ಬಡಿದಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೆರೆ ಉಳಿದು ಬೆಳೆಯುವಂತಾಗಲೂ ಈಗಲೇ ಸರ್ಕಾರ ದಿಟ್ಟ ಕ್ರಮ ಹಾಗೂ ಸುಧಾರಣೆಯ ಹೆಜ್ಜೆ ಇಡುವುದು ಬಹಳ ಅಗತ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.