ವೈಜನಾಥರ ಮೆಹನತ್ ಖರ್ಗೆ ಪಾಲು: ಜಾಧವ
ಕೇಂದ್ರೀಯ ವಿವಿ ಮಾಡಿದ್ದು ಶಂಕರಮೂರ್ತಿ
Team Udayavani, Apr 11, 2019, 12:30 PM IST
ಸೇಡಂ: ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಮಾತನಾಡಿದರು.
ಸೇಡಂ: ಮಾಜಿ ಸಚಿವ ವೈಜನಾಥ ಪಾಟೀಲರು ಮಾಡಿಟ್ಟ 371ನೇ (ಜೆ) ಕಲಂ ಹೆಸರಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ನಡೆಸುತ್ತಿದ್ದಾರೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಟೀಕಿಸಿದರು.
ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು
ಉದ್ದೇಶಿಸಿ ಮಾತನಾಡಿದ ಅವರು, ಮೆಹನತ್ ಕರೆ ಮುರ್ಗಿಸಾಬ್, ಅಂಡಾ ಖಾಯೆ ಫಕೀರಸಾಬ್ ಎನ್ನುವ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಶಾಯರಿಗೆ ಪ್ರತ್ಯುತ್ತರ ನೀಡಿದ ಜಾಧವ ‘ಮೆಹನತ್ ಕರೆ ವೈಜನಾಥ ಪಾಟೀಲ ಸಾಬ್, ಅಂಡಾ ಖಾಯೆ ಖರ್ಗೆ ಸಾಬ್’ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ಹೋರಾಟಗಾರನ ಹೊಟ್ಟೆಯಲ್ಲಿ ಹುಟ್ಟಿದ್ದೇನೆ. ಸಮಯ ಬಂದರೆ ಕಲಬುರಗಿ ಜನತೆಗಾಗಿ ಜೀವ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಈ ಬಾರಿ ಕಾಲಚಕ್ರ ಬದಲಿಸುವ ಪಣತೊಟ್ಟು ಅಖಾಡಕ್ಕೆ ಇಳಿದಿದ್ದೇನೆ. ಗುಲಾಮಗಿರಿ, ದುರಾಡಳಿತ, ರಾಜ ದರ್ಬಾರ್‌ನಿಂದ ಕಲಬುರಗಿ ಜನತೆಗೆ ಮುಕ್ತಿ ಕೊಡಿಸಲು
ಬಾಬುರಾವ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ ಮತ್ತು ನಾನು ಪಣ ತೊಟ್ಟಿದ್ದೇವೆ.
ಸಂವಿಧಾನ ರಕ್ಷಣೆ ಹೆಸರಲ್ಲಿ ಮಾತನಾಡುವ ಖರ್ಗೆಗಿಂತಲೂ, ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ ಎಂದರು.
ಕಲಬುರಗಿ ಮತ್ತು ಯಾದಗಿರಿ ಜಲ್ಲೆಯಲ್ಲೇ ಹೆಚ್ಚು ಗುಟ್ಕಾ, ತಂಬಾಕು, ಮದ್ಯ
ಮಾರಾಟವಾಗುತ್ತಿದೆ. ಇಲ್ಲಿನ ಜನರೇ ಮುಂಬೈ, ಪುಣೆ, ಹೈದ್ರಾಬಾದನತ್ತ ಕೂಲಿ ಅರಸಿ ಹೋಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಇವರ ರಕ್ಷಣೆ ಖರ್ಗೆಯಿಂದ ಆಗಿಲ್ಲ. ಸಿಮೆಂಟ್ ಕಾರ್ಪೋರೇಶನ್ ಇಂಡಿಯಾ (ಸಿಸಿಐ) ಕಾರ್ಖಾನೆ ಮುಚ್ಚಿ ವರ್ಷಗಳೇ ಕಳೆದಿವೆ. ಒಂದು ಬಾರಿಯೂ ಲೋಕಸಭೆಯಲ್ಲಿ
ಕಾರ್ಖಾನೆ ಬಗ್ಗೆ ಖರ್ಗೆ ಮಾತನಾಡಿಲ್ಲ ಎಂದು ಹರಿಹಾಯ್ದರು.
ಕೇಂದ್ರೀಯ ವಿಶ್ವವಿದ್ಯಾಲಯ ತಾವು ಮಾಡಿದ್ದು ಎಂದು ಬೊಬ್ಬೆ ಕೊಚ್ಚಿಕೊಳ್ಳುವ ಖರ್ಗೆ ಸತ್ಯ ಹೇಳಬೇಕು. ಆಗ ಉನ್ನತ ಶಿಕ್ಷಣ
ಸಚಿವರಾಗಿದ್ದ ಬಿ.ಎಚ್. ಶಂಕರಮೂರ್ತಿ ಕೇಂದ್ರೀಯ ವಿವಿ ಮಾಡಿದ್ದು. ಸ್ಥಳ ಬಸವರಾಜ ಬೊಮ್ಮಾಯಿ ಕೊಟ್ಟಿದ್ದು. ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಕೋಲಿ ಸಮಾಜವನ್ನು ಎಸ್ಟಿ ಮಾಡಿಯೇ ತೀರುತ್ತೇನೆ ಎಂದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಪರ್ವತರೆಡ್ಡಿ ಪಾಟೀಲ ನಾಮವಾರ, ಪುರಸಭೆ ಮಾಜಿ ಸದಸ್ಯ ಎಕ್ಬಾಲ್‌ಖಾನ್, ಭೀಮರಾವ ಕೋಡ್ಲಾ, ನಾಗರೆಡ್ಡಿ ಪಾಟೀಲ, ಶ್ರೀನಾಥ ಪಿಲ್ಲಿ,
ಜಿಪಂ ಸದಸ್ಯ ಶರಣು ಮೆಡಿಕಲ್, ಓಂಪ್ರಕಾಶ ಪಾಟೀಲ ಇನ್ನಿತರರು ವೇದಿಕೆಯಲ್ಲಿದ್ದರು.
ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ನಾನು
ಉತ್ತಮ ಸ್ನೇಹಿತರು. ಅವರ ಬಗ್ಗೆ ಅಸಭ್ಯವಾಗಿ ಮನಸ್ಸಿಗೆ ನೋವುಂಟು
ಮಾಡುವಂತೆ ನಾನು ಎಂದೂ ಮಾತನಾಡಿಲ್ಲ. ದಾವಣಗೆರೆಯಲ್ಲಿ
ರಾಜಕೀಯದ ಬಗ್ಗೆ ನಾನು ಮಾತನಾಡಿದ್ದೆ. ಆದರೆ ಈಗಿರುವವರು
(ಶಾಸಕ ಖನೀಜ ಫಾತಿಮಾ) ರಾಜಕೀಯ ದುರುದ್ದೇಶಕ್ಕಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಖಮರುಲ್ ಇಂದು ಜೀವಂತ ಇದ್ದಿದ್ರೆ, ನಮ್ಮ ಜೊತೆಯಲ್ಲೇ ಇರ್ತಿದ್ರು.
ಮಾಲೀಕಯ್ಯ ಗುತ್ತೇದಾರ,
ಮಾಜಿ ಶಾಸಕ, ಅಫಜಲಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.