ಖರ್ಗೆ ಸ್ವಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸುವರೋ?
ಮೇಲುಗೈ ಅಭಿಮಾನಧ್ದೋ, ಇಲ್ಲ ಅಸಮಾಧಾನಧ್ದೋ•ಜಿಲ್ಲಾದ್ಯಂತ ಹೆಚ್ಚಿದ ಕುತೂಹಲ
Team Udayavani, Apr 28, 2019, 9:58 AM IST
ಕಲಬುರಗಿ: ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ವಿಧಾನಸಭೆ ಪ್ರತಿನಿಧಿಸಿದ್ದ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಚಿತ್ತಾಪುರ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಲೀಡ್ ಆಗುತ್ತದೆಯೋ ಇಲ್ಲವೇ ಬಿಜೆಪಿಗೆ ಲೀಡ್ ಬರುತ್ತದೆಯೇ ಎನ್ನುವ ಕುತೂಹಲ ಚಿತ್ತಾಪುರ ವಿಧಾನಸಭೆ ಕ್ಷೇತ್ರವಲ್ಲದೇ ಲೋಕಸಭಾ ಕ್ಷೇತ್ರದಾದ್ಯಂತ ಚರ್ಚೆ ನಡೆದಿದೆ.
2009 ಹಾಗೂ 2014ರಂತೆ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ಬರುತ್ತದೆಯೋ- ಇಲ್ಲವೋ ಎನ್ನುವ ವಿಷಯದತ್ತ ಎಲ್ಲರ ಚಿತ್ತವಿದೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇದೆ ಎನ್ನಲಾದ ಅಸಮಾಧಾನ, ಇಲ್ಲವೇ ಅಭಿವೃದ್ಧಿಪರ ಕಾರ್ಯದ ಅಭಿಮಾನ ಈ ಚುನಾವಣೆಯಲ್ಲಿ ಮೇಲುಗೈ ಆಗುತ್ತದೆ ಎನ್ನುವುದರತ್ತ ಸ್ವಾರಸ್ಯಕರ ಚರ್ಚೆ ನಡೆದಿದೆ.
ಚಿತ್ತಾಪುರ ಕ್ಷೇತ್ರದಲ್ಲಿ ಒಟ್ಟು 230641 ಮತದಾರರ ಪೈಕಿ 141032 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 72024 ಪುರುಷರು, 69008 ಮಹಿಳೆಯರು ಸೇರಿದ್ದಾರೆ. 2009ರಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 6 ಸಾವಿರ ಹಾಗೂ 2014ರಲ್ಲಿ 16239 ಮತಗಳು ಬಿಜೆಪಿಗಿಂತ ಹೆಚ್ಚಿಗೆ ಲೀಡ್ ಬಂದಿದ್ದವು. ಈ ಲೀಡ್ ಹೆಚ್ಚಿಗೆ ಆಗುತ್ತವೆಯೋ ಇಲ್ಲ ಕಡಿಮೆಯಾಗುತ್ತವೆ ಎನ್ನುವುದು ಹಾಗೂ ಮೇ 23ರ ಫಲಿತಾಂಶದತ್ತ ಎಲ್ಲರ ನೋಟ ಬೀರಿದೆ. ಉಸ್ತುವಾರಿ ಸಚಿವರು ಜನರನ್ನು ಸರಿಯಾಗಿ ಹಚ್ಚಿಕೊಳ್ಳುವುದಿಲ್ಲ ಎನ್ನುವ ಅಸಮಾಧಾನ ಹಾಗೂ ಸಚಿವರು ಜನೋಪಯೋಗಿ ಕಾರ್ಯ ಕೈಗೊಳ್ಳುತ್ತಾರೆ ಎನ್ನುವ ಅಭಿಮಾನಕ್ಕೆ ಮಾರ್ಕ್ಸ್ ದೊರೆಯಲಿದೆ.
ನಾಲವಾರ ವಲಯದಲ್ಲಿ ಮಾತ್ರ ಸ್ವಲ್ಪ ಬಿಜೆಪಿಗೆ ಲೀಡ್ ಆಗಬಹುದು. ಆದರೆ ಉಳಿದೆಡೆ ಕಾಂಗ್ರೆಸ್ ಲೀಡ್ ಗಳಿಸುತ್ತದೆ. ಒಟ್ಟಾರೆ ಕಾಂಗ್ರೆಸ್ ಲೀಡ್ ಆಗುವುದು ನಿಶ್ಚಿತ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಈ ಸಲ ಲೀಡ್ ಬರೋದಿಲ್ಲ. ಸಮನಾಗಬಹುದು. ಇಲ್ಲವೇ ಕನಿಷ್ಠ ಎರಡು ಸಾವಿರಾದರೂ ಲೀಡ್ ಬರುತ್ತದೆ ಎನ್ನುವುದು ಬಿಜೆಪಿಗರ ವಿಶ್ವಾಸವಾಗಿದೆ. ದೇಶಕ್ಕೆ ಮೋದಿ ಕಲಬುರಗಿಗೆ ಖರ್ಗೆ ಎನ್ನುವ ಕೂಗು ಕ್ಷೇತ್ರದ ಜನರಲ್ಲಿ ಪ್ರತಿಧ್ವನಿಸುತ್ತಿರುವುದು ಕ್ಷೇತ್ರದಲ್ಲಿ ಸುತ್ತು ಹಾಕಿರುವಾಗ ಕಂಡು ಬಂದಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಾನುಷ್ಠಾನವಾಗುತ್ತದೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.
ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹಾಗೂ ಇತರರು ಖರ್ಗೆ ವಿರುದ್ಧ ತೊಡೆ ತಟ್ಟಿರುವುದಕ್ಕೆ ಚುನಾವಣಾ ಫಲಿತಾಂಶವೇ ಮತದಾರನ ಉತ್ತರವಾಗಿದೆ. ಇದು ಖರ್ಗೆ ಹಾಗೂ ಬಿಜೆಪಿ ನಡುವಿನ ಚುನಾವಣೆ ಎನ್ನುವುದಕ್ಕಿಂತ ಇವರೆಲ್ಲರ ನಡುವಿನ ಕದನ ಎನ್ನುವಂತೆ ವಾತಾವರಣ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೊನೆ ಮಾತು: ಚಿತ್ತಾಪುರದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ಬಾರದಿದ್ದರೆ ಜಿಲ್ಲೆಯ ಇತರ ಕ್ಷೇತ್ರದ ಕುರಿತಾಗಿ ಮಾತನಾಡುವ ಯಾವ ನೈತಿಕತೆ ಇರೋದಿಲ್ಲ ಎನ್ನುವ ಕುರಿತು ಕೆಲವೆಡೆ ಚರ್ಚೆ ನಡೆದಿದೆ. ಹೀಗಾಗಿ ಚಿತ್ತಾಪುರ ಕ್ಷೇತ್ರದ ಲೀಡ್ ವಿಷಯವೇ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಡಕವಾಗಿದೆ.
ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ತತ್ವ, ಸಿದ್ಧಾಂತಗಳ ಮೇಲೆ ಚುನಾವಣೆ ಎದುರಿಸಿದೆ. ಕಾಂಗ್ರೆಸ್‌ನವರ ಹಾಗೆ ಹಣಬಲ, ತೋಳ್ಬಲ ಹಾಗೂ ಅಧಿಕಾರ ಬಲ ಬಳಕೆ ಮಾಡಿಕೊಂಡಿಲ್ಲ. ಆದರೆ ಮತದಾರರು ಮಾತ್ರ ಆಂತರಿಕವಾಗಿ ಬಿಜೆಪಿಯನ್ನೇ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದಾರೆ. ಪಕ್ಷದ ಪರವಾಗಿ ಉತ್ತಮ ವಾತಾವರಣ ಕಂಡಿದೆ. ಒಟ್ಟಾರೆ ಮೂರ್‍ನಾಲ್ಕು ಸಾವಿರ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಆಗಬಹುದು. ಇಲ್ಲವೇ ಬಿಜೆಪಿಗೆ ಮೂರ್‍ನಾಲ್ಕು ಸಾವಿರ ಲೀಡ್ ಬರಬಹುದು. ಪರಿಸ್ಥಿತಿ ಕಠಿಣವಾಗಿದೆ.
•ಮಲ್ಲಿಕಾರ್ಜುನ ಎಮ್ಮೆನೂರ,
ಬಿಜೆಪಿ ಚಿತ್ತಾಪುರ ತಾಲೂಕಾ ಅಧ್ಯಕ್ಷರು
ಚಿತ್ತಾಪುರದಲ್ಲಿ ಮೋದಿ ಹವಾ ನಡೆಯಲ್ಲ. ಬಿಜೆಪಿಯವರು ತಮ್ಮ ಪಾಡಿಗೆ ಕೆಲಸ ಮಾಡಿದ್ದಾರೆ. ಅದೇ ರೀತಿ ನಮ್ಮ ಪಾಡಿಗೆ ನಾವು ಕೆಲಸ ಮಾಡಿದ್ದೇವೆ. ಕೆಲವೊಂದು ಏರಿಯಾದಲ್ಲಿ ಬಿಜೆಪಿಗೆ ಮುನ್ನಡೆ ಕಂಡು ಬಂದರೆ, ಇನ್ನು ಕೆಲವೆಡೆ ಕಾಂಗ್ರೆಸ್‌ಗೆ ಮುನ್ನಡೆಯಿದೆ. ಒಟ್ಟಾರೆ ಕಾಂಗ್ರೆಸ್ ಪಕ್ಷವೇ ಲೀಡ್ ಗಳಿಸುವಲ್ಲಿ ಯಾವುದೇ ಅನುಮಾನಗಳಿಲ್ಲ. ಬಿಜೆಪಿಯಲ್ಲಿ ಹಳೆ ಕಾರ್ಯಕರ್ತರ ಬದಲು ಹೊಸಬರೇ ಓಡಾಡಿದ್ದಾರೆ. ಮತದಾರರು ತಮ್ಮ ಪರ ಇರುವುದು ಚುನಾವಣೆ ಸಂದರ್ಭದಲ್ಲಿ ಸ್ಪಷ್ಟವಾಗಿ ಅರಿವಿಗೆ ಬಂದಿದೆ.
•ಭೀಮಣ್ಣ ಸಾಲಿ, ಅಧ್ಯಕ್ಷರು,
ಬ್ಲಾಕ್ ಕಾಂಗ್ರೆಸ್, ಚಿತ್ತಾಪುರ
ಪಕ್ಷದ ಹೈಕಮಾಂಡ್ ಆದೇಶದಂತೆ ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಲಾಗಿದೆ. ಇಬ್ಬರು ಕೂಡಿಕೊಂಡು ಉತ್ತಮ ಕೆಲಸ ಮಾಡಿದ್ದರಿಂದ ಮತದಾರ ಕೈ ಹಿಡಿಯುತ್ತಾನೆಂಬ ಸ್ಪಷ್ಟ ಭರವಸೆಯಿದೆ. ಕಾಂಗ್ರೆಸ್‌ಗೆ ಲೀಡ್ ಬರುತ್ತದೆ. ಆದರೆ ಎಷ್ಟು ಎನ್ನುವುದನ್ನು ಹೇಳಲಿಕ್ಕಾಗದು. ಪ್ರಮುಖವಾಗಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ಧಿ ಕೆಲಸಗಳು ಲೀಡ್‌ಗೆ ಪೂರಕವಾಗಲಿವೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮತದಾರರು ಅಭಿವೃದ್ಧಿ ಕಾರ್ಯಗಳನ್ನೇ ಪ್ರಸ್ತಾಪಿಸುತ್ತಿದ್ದರು, ಹೀಗಾಗಿ ಕಾಂಗ್ರೆಸ್ ಹೆಚ್ಚು ಅನುಕೂಲವಾಗಲಿದೆ.
•ನಾಗಣ್ಣ ವಾರದ,
ಜೆಡಿಎಸ್ ಚಿತ್ತಾಪುರ ತಾಲೂಕಾಧ್ಯಕ್ಷರು
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.