ಪ್ರಜೆಗಳ ಕೈಗೆ ಅಧಿಕಾರ ನೀಡುವುದೇ ಪ್ರಜಾಕೀಯ ಉದ್ದೇಶ : ಉಪೇಂದ್ರ
ರಾಜ್ಯದ 27 ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಸ್ಪರ್ಧೆ
Team Udayavani, Apr 14, 2019, 10:14 AM IST
ಕಲಬುರಗಿ: ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ, ನಟ ಉಪೇಂದ್ರ ಮಾತನಾಡಿದರು. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಹೇಶ ಲಂಬಾಣಿ ಇದ್ದರು.
ಕಲಬುರಗಿ: ರಾಜಕೀಯ ಎಂದರೆ ಬಂಡವಾಳ ಹೂಡಿ ಬಂಡವಾಳ ತೆಗೆಯುವ ಕೇÒತ್ರವಾಗಿದೆ. ರಾಜಕೀಯ ನಮಗಲ್ಲ ಎನ್ನುವ ಭಯದ ಮನೋಭಾವ ಯುವಕರಲ್ಲಿದೆ. ಜನರ ಕೈ ಅಧಿಕಾರ ನೀಡಿ, ರಾಜಕೀಯದಲ್ಲಿ ವೃತ್ತಿಪರತೆ ತರುವುದೇ ಉತ್ತಮ ಪ್ರಜಾಕೀಯ ಪಕ್ಷದ ಉದ್ದೇಶ ಎಂದು ಪಕ್ಷದ ಸಂಸ್ಥಾಪಕ
ಅಧ್ಯಕ್ಷ, ಖ್ಯಾತ ನಟ ಉಪೇಂದ್ರ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನೈಜತೆಗಾಗಿ ಪ್ರಜಾಕೀಯ ಪಕ್ಷ ಪ್ರಯತ್ನಿಸಲಿದೆ. ರಾಜಕೀಯದಲ್ಲಿ ವಿಚಾರವಂತರು, ಪ್ರಾಮಾಣಿಕರಿಗೆ ಅವಕಾಶ ಕೊಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಧಾರವೇ ಅಂತಿಮ ಎನ್ನುವ ವ್ಯವಸ್ಥೆ ನಿರ್ಮಿಸಬೇಕಿದೆ ಎಂದರು.
ರಾಜಕೀಯ ಎನ್ನುವುದು ಮತ ಮತ್ತು ಕಾರ್ಯಕರ್ತರನ್ನು ಖರೀದಿಸುವ ದಂಧೆಯಾಗಿದೆ. ರಾಜಕೀಯ ಸೇವೆ ಎನ್ನುತ್ತಾ ವ್ಯಾಪಾರ ಮಾಡಿಕೊಂಡು 72 ವರ್ಷಗಳಿಂದ ಜನತೆಯನ್ನು ವಂಚಿಸಿಕೊಂಡು ಬರಲಾಗುತ್ತಿದೆ. ರಾಜ, ಮಹಾರಾಜರ ಜಾಗದಲ್ಲಿ ರಾಜಕಾರಣಿಗಳು ಬಂದು ಕುಳಿತಿದ್ದಾರೆ. ಎಲ್ಲಿಯವರೆಗೆ ಹಣ, ತೋಳ್ಬಲಗಳ ಮಾತು ನಡೆಯವುದೋ ಅಲ್ಲಿಯ ವರೆಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ನಿಜವಾದ ಶಕ್ತಿ ಇರುವುದಿಲ್ಲ ಎಂದು ಹೇಳಿದರು.
ರಾಜಕೀಯದಲ್ಲಿ ಹಣದ ಹೊಳೆ ಹರಿದಾಗ ಅಲ್ಲಿ ಸೇವೆ ಅರ್ಥ ಕಳೆದುಕೊಳ್ಳುತ್ತದೆ. ಜನರು ಆಯ್ಕೆ ಮಾಡಿದವರನ್ನು ಜನಪ್ರತಿನಿಧಿ ಎನ್ನುತ್ತಾರೆ ಹೊರತು ಜನನಾಯಕ ಎನ್ನಲ್ಲ. ಜನತೆ ತಾವು ಆಯ್ಕೆ ಮಾಡಿದ ಶಾಸಕ, ಸಂಸದ ಸರಿಯಿಲ್ಲ. ಜನರಿಗೆ ಸ್ಪಂದಿಸುತ್ತಿಲ್ಲ ಎಂದರೇ ಆತನ ಅಧಿಕಾರ ವಾಪಸ್ ಪಡೆಯುವ ಹಕ್ಕು ಜನರಿಗೆ ನೀಡುವ ಚಿಂತನೆ ಪ್ರಜಾಕೀಯದ್ದು. ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಬಳ್ಳಾರಿ ಹೊರತು ಪಡಿಸಿ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಲ್ಲ ಅಭ್ಯರ್ಥಿಗಳ ಪೂರ್ವಾಪರ ತಿಳಿದು, ಲಿಖೀತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಸೂಕ್ತ
ಅಭ್ಯರ್ಥಿ ದೊರೆಯದ ಕಾರಣ ಪ್ರಜಾಕೀಯ ಪಕ್ಷ ಸ್ಪರ್ಧಿಸಿಲ್ಲ ಎಂದು ವಿವರಿಸಿದರು.
ಶಾಸಕ, ಸಂಸದರಾಗಿ ಆಯ್ಕೆಯಾದವರು ನಮ್ಮ ಸೇವಕರು ಎನ್ನುವ ತತ್ವವನ್ನು ಪ್ರಜಾಕೀಯ ಹೊಂದಿದೆ. ಸೇವೆ ಮಾಡಲೆಂದೇ ನಾವು ಅವರಿಗೆ ಸಂಬಳ ಕೊಡುತ್ತೇವೆ. ಅದಕ್ಕಾಗಿಯೇ ಪ್ರಜಾಕೀಯ ಪಕ್ಷ ಈಗಾಗಲೇ ಅಭ್ಯರ್ಥಿಗಳಿಗೆ ಸಮವಸ್ತ್ರ ನೀಡಿದೆ. ಪ್ರಜೆಗಳಿಗೆ ಕೀ ಕೊಡುವ ಕೆಲಸ ಪ್ರಜಾಕೀಯ ಮಾಡಲಿದೆ. ಪ್ರಜಾಕೀಯ ಪಕ್ಷದಲ್ಲಿ ಪ್ರಣಾಳಿಕೆ ಇಲ್ಲ. ಜನರು ನೀಡುವ ಹೇಳಿಕೆಗಳು,
ಸಮಸ್ಯೆಗಳೇ ಪ್ರಣಾಳಿಕೆ ಆಗಲಿದೆ. ಜನತೆ ನೀಡುವ ಸಲಹೆ, ಸೂಚನೆಗಳಂತೆ ಅಧಿಕಾರ ನಡೆಸಲಾಗುವುದು. ಜನತೆಯೇ ತಮ್ಮ ಸಮಸ್ಯೆ ತಿಳಿಸಲಿ ಎಂದು ಅವರ ಕೈಗೆ ಖಾಲಿ ಹಾಳೆ ಕೊಡುತ್ತಿದ್ದೇವೆ ಎಂದರು.
ಸೋಲು-ಗೆಲುವಿನ ಲೆಕ್ಕಾಚಾರವನ್ನು ಪ್ರಜಾಕೀಯ ಪಕ್ಷ ಹೊಂದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿ ಸಂಸತ್‌ಗೆ ಪ್ರವೇಶಿಸಿದರೆ, ಸರ್ಕಾರ ರಚನೆ
ಸಂದರ್ಭದಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವುದನ್ನು ಜನರಿಗೆ ಕೇಳಿಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಹೇಶ ಲಂಬಾಣಿ ಮಾತನಾಡಿ, ನಾನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಂಡಾದವನಾಗಿದ್ದು, ವಲಸೆ ಕುಟುಂಬದಿಂದ
ಬಂದಿದ್ದೇನೆ. ಎಂಎ ಮುಗಿದಿದ್ದು, ಪಿಎಚ್.ಡಿ. ಮಾಡುತ್ತಿದ್ದೇನೆ. ನಿರುದ್ಯೋಗಿಗಳ ಪರವಾಗಿ ಸಂಸತ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದರು.
ಮತ ಕೊಡಿ: ತಮ್ಮ ನೆಚ್ಚಿನ ನಟ ಉಪೇಂದ್ರ ಜತೆಗೆ ಸೆಲ್ಫಿ ಪಡೆಯಲು ಅಭಿಮಾನಿಗಳು, ಯುವಕರು ಮುಗಿಬಿದ್ದಿದ್ದರು. ತಾಳ್ಮೆಯಿಂದಲೇ ಎಲ್ಲರಿಗೂ
ಪೋಸು ಕೊಟ್ಟ ಉಪೇಂದ್ರ, ಯುವಕರು ಪೋಟೋ ತೆಗೆಸಿಕೊಂಡರೆ ಸಾಲದು. ಮತ ಕೊಡಬೇಕು. ರಾಜಕೀಯ ಪಕ್ಷಗಳ ಆಮಿಷಕ್ಕೊಳಗಾಗಬಾರದು. ಪ್ರಜಾಕೀಯ ಪಕ್ಷವನ್ನು ಬೆಂಬಲಿಸಿ ಎಂದು ಕರೆಕೊಟ್ಟರು.
ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ
ಸುಮಲತಾ ಅಂಬರೀಷ ದೊಡ್ಡವರು. ನಾವು ಅವರ ಬಗ್ಗೆ ಮಾತನಾಡಲು ಹೋಗಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವೆ. ಲೋಕಸಭೆ ಚುನಾವಣೆಗೆ ಎಲ್ಲವನ್ನೂ ತಯಾರು ಮಾಡಿ, ಅಭ್ಯರ್ಥಿಗಳಿಗಾಗಿ ಓಡಾಟ ನಡೆಸುವ ಕೆಲಸ ಜಾಸ್ತಿ ಇದ್ದಿದ್ದರಿಂದ ಸ್ಪರ್ಧಿಸಲು ಹೋಗಿಲ್ಲ. ಉಪೇಂದ್ರ, ಅಧ್ಯಕ್ಷರು,
ಉತ್ತಮ ಪ್ರಜಾಕೀಯ ಪಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.