ತಾರಕಕ್ಕೇರಿದ ಚುನಾವಣೆ ಕಾವು
ಮೋದಿಗಿಂತ ನೇಪಾಳ ಚೌಕಿದಾರರೇ ಮೇಲು
Team Udayavani, Apr 14, 2019, 10:22 AM IST
ಸೇಡಂ: ವಾಸವಿ ಕಲ್ಯಾಣ ಮಂಟಪ ಎದುರಿನ ಸ್ಥಳದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು.
ಸೇಡಂ: ದೊಡ್ಡ ದೊಡ್ಡ ಭ್ರಷ್ಟರು ದೇಶದಿಂದ ಮಾಯವಾಗುತ್ತಿದ್ದು, ಪ್ರಧಾನಿ ಮೋದಿಯಂತ ಚೌಕಿದಾರರಿಗಿಂತಲೂ ನೇಪಾಳದ ಚೌಕಿದಾರರೇ ಮೇಲು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜರಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದ ಎದುರುಗಡೆಯ ಸ್ಥಳದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿಗೆ ದೇಶದ ರೈತರ ಬಗ್ಗೆ ಚಿಂತೆಯಿಲ್ಲ. ಬದಲಿಗೆ ಅದಾನಿ, ಅಂಬಾನಿಯ 3 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಯ ಪ್ರಣಾಳಿಕೆ ಕೇವಲ ಮೋದಿ ಮುಖ ಸ್ತುತಿಯಾಗಿದೆ. ರೈತರು, ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಬಗ್ಗೆ ಯಾವುದೇ ಕೊಡುಗೆಯಿಲ್ಲ. ತಾವೊಬ್ಬರೇ ದೇಶಭಕ್ತರಂತೆ ವರ್ತಿಸುತ್ತಿದ್ದಾರೆ. ನಾವೇನು ದೇಶದ್ರೋಹಿಗಳಾ? 1947 ರಲ್ಲಿ ಕಾಂಗ್ರೆಸ್ ಹೋರಾಟದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿತು. ಬಿಜೆಪಿಯನ್ನು ಆಡಿಸುತ್ತಿರುವ ಆರ್.ಎಸ್. ಎಸ್. ಸ್ವಾತಂತ್ರ್ಯ ಸಿಕ್ಕು 55 ವರ್ಷಗಳಾದ ನಂತರ ಅಂದರೆ
2002 ರಲ್ಲಿ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿದೆ.
ಇದ್ಯಾವ ದೇಶಪ್ರೇಮ ಎಂದು ಪ್ರಶ್ನಿಸಿದರು.
ಸಂವಿಧಾನ ಇಲ್ಲದೆ ಚಾಯವಾಲಾ ಪ್ರಧಾನಿ ಆಗುತ್ತಿರಲಿಲ್ಲ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬೇರೆ ದೇಶದ ಸ್ಯಾಟಲೈಟ್ ಉರುಳಿಸಿದ ಬಗ್ಗೆ ಬಿಜೆಪಿಯವರು ಸುದ್ದಿಗೋಷ್ಠಿ ಮಾಡ್ತಾರೆ. ಉದ್ಯೋಗ ಖಾತ್ರಿ ಯೋಜನೆಯ 3 ಸಾವಿರ ಕೋಟಿ ರೂ. ರಾಜ್ಯಕ್ಕೆ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಡಾ| ಉಮೇಶ ಜಾಧವ ಸ್ಥಿತಿ ಈಗ ಐಪಿಎಲ್ ಕ್ರಿಕೆಟ್ ಮ್ಯಾಚ್ ನ ಆರ್.ಸಿ.ಬಿ ತಂಡದಂತಾಗಿದೆ. ಸೋತವರೆಲ್ಲರೂ ಸೇರಿ ಜಾಧವ ಅವರನ್ನು ಗೆಲ್ಲಿಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ವ್ಯಂಗವಾಡಿದರು.
ಕುಟುಂಬ ರಾಜಕಾರಣದ ಆರೋಪ ಮಾಡುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಮೊದಲು ತಮ್ಮ ತಟ್ಟೆಯಲ್ಲಿನ ಬಿದ್ದಿರುವುದು ಹೆಗ್ಗಣಗಳ
ಬಗ್ಗೆ ಅರಿತುಕೊಳ್ಳಲಿ. ಬಿಜೆಪಿ ಶಾಸಕ ಅಪ್ಪುಗೌಡ, ಬಿ.ಜಿ. ಪಾಟೀಲ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಲೀಕಯ್ಯ ಗುತ್ತೇದಾರ ಒಳಗೊಂಡ ಅನೇಕರ ಉದಾಹರಣೆ ಮುಂದಿಟ್ಟು, ಈ ಎಲ್ಲರ ಕುಟುಂಬದಲ್ಲಿ
ಯಾರೂ ರಾಜಕಾರಣಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೂರು ಬಾರಿ ಮುಖ್ಯಮಂತ್ರಿ ಪದವಿ
ತಪ್ಪಿದರೂ ಅವರು ಪಕ್ಷ ಬಿಟ್ಟಿಲ್ಲ. ಆದರೆ ಡಾ| ಉಮೇಶ ಜಾಧವ ತಮ್ಮ ಅಸ್ತಿತ್ವ ಮಾರಿಕೊಂಡು ಬಿಜೆಪಿ ಸೇರಿದ್ದಾರೆ. ಪ್ರಧಾನಿ ಮೋದಿ ತಪ್ಪು ನೀತಿಯಿಂದ ತೊಗರಿ ಬೆಳೆಗಾರರಿಗೆ ನಷ್ಟವಾಗಿದೆ. ನಾನು ಗುತ್ತಿಗೆದಾರರಿಂದ ಪರ್ಸಂಟೇಜ್ (ಪ್ರತಿಶತ) ತೆಗೆದುಕೊಂಡಿದ್ದರೆ, ಸೇಡಂ ಇಷ್ಟರ ಮಟ್ಟಿಗೆ
ಅಭಿವೃದ್ಧಿ ಆಗುತ್ತಿರಲಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವದ ಅಳಿವು-ಉಳಿವಿನ ಚುನಾವಣೆಯಾಗಿದೆ. ಈ ಬಾರಿ ಖರ್ಗೆ ಗೆಲುವು ಸಾಧಿಸಿದರೆ ಮುಂದೆ ಪ್ರಧಾನಿಯಾಗುವ ಅವಕಾಶಗಳಿವೆ
ಎಂದರು.
ಮುಖಂಡ ಮುಕ್ರಂಖಾನ್, ಸತೀಶರೆಡ್ಡಿ ಪಾಟೀಲ ರಂಜೋಳ, ಜಿಪಂ ಸದಸ್ಯ ದಾಮೋದರರೆಡ್ಡಿ ಪಾಟೀಲ, ಧೂಳಪ್ಪ ದೊಡ್ಡಮನಿ, ವೆಂಕಟರಾಮರೆಡ್ಡಿ
ಕಡತಾಲ, ಅಮೀನರೆಡ್ಡಿ, ರಾಮಯ್ಯ ಪೂಜಾರಿ, ಕಮಾಲುದ್ದಿನ್ ಚಿಸ್ತಿ, ವೀರಾರೆಡ್ಡಿ ಹೂವಿನಬಾವಿ, ಜೈಭೀಮ ಊಡಗಿ, ಭೀಮರಾವ ಅಳ್ಳೊಳ್ಳಿ, ಬಾಬಾ, ನಾಗೇಶ ಕಾಳಾ, ಅನಂತಯ್ಯ ಮುಸ್ತಾಜರ, ಜಗನ್ನಾಥ
ಚಿಂತಪಳ್ಳಿ, ಮಾರುತಿ ಕೊಡಂಗಲಕ್ ಇನ್ನಿತರರು ವೇದಿಕೆಯಲ್ಲಿದ್ದರು.ಇದೇ ವೇಳೆ ಮಾಜಿ ಪುರಸಭೆ ಸದಸ್ಯ ರಾಜು ಕಾಳಗಿ ಹಾಗೂ ಚೋಟಗಿರಣಿ, ಅರೆಬೊಮ್ನಳ್ಳಿ, ಬಟಗೇರಾ ಸೇರಿದಂತೆ ಅನೇಕ ಗ್ರಾಮಗಳ ಗ್ರಾಮಸ್ಥರು ಬಿಜೆಪಿ
ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ತನ್ನ ಎದೆ ಬಗೆದರೆ ಮಲ್ಲಿಕಾರ್ಜುನ ಖರ್ಗೆ ಕಾಣುತ್ತಾರೆ. ಮಲ್ಲಿಕಾರ್ಜುನ
ಖರ್ಗೆ ಎಂದರೆ ಎರಡನೇ ಅಂಬೇಡ್ಕರ್ ಇದ್ದಂತೆ ಎಂದು ಹೇಳುತ್ತಿದ್ದ ಮಾಜಿ ಸಚಿವ ಬಾಬುರಾವ ಚಿಂಚನಸೂರ ಎದೆಯಲ್ಲಿ ಈಗ ಫೋಟೊ ಚೇಂಜ್ ಆಗಿದೆ. ಈಗ ಎದೆ ಬಗೆದರೆ ಮೋದಿ, ಯಡಿಯೂರಪ್ಪ ಕಾಣಿಸುತ್ತಿದ್ದಾರೆ. ತಮ್ಮ ಸ್ಥಾನ ಗೆಲ್ಲಲಾಗದ ಬಾಬುರಾವ ಚಿಂಚನಸೂರ ಮತ್ತು ಮಾಲೀಕಯ್ಯ ಗುತ್ತೇದಾರ ಈಗ ಉಮೇಶ ಜಾಧವ ಅವರನ್ನು ಗೆಲ್ಲಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ.
ಪ್ರಿಯಾಂಕ್ ಖರ್ಗೆ,
ಜಿಲ್ಲಾ ಉಸ್ತುವಾರಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.