ಯಾರು ಗೆಲ್ತಾರೆ?ಎನ್ನೋದೇ ಚರ್ಚೆ
ಹಿಂದಿನ ಫಲಿತಾಂಶದ ಅವಲೋಕನಈ ಬಾರಿ ನೋಟಾ ಮತ ಚಲಾವಣೆ ಜಾಸ್ತಿ ಸಾಧ್ಯತೆ
Team Udayavani, Apr 15, 2019, 10:12 AM IST
ಕಲಬುರಗಿ: ಸೋಲಿಲ್ಲದ ಸರದಾರ, ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಅದೃಷ್ಟಕ್ಕೆ ಮುಂದಾಗಿರುವ ಡಾ| ಉಮೇಶ ಜಾಧವ ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಕ್ಷೇತ್ರದ ಚುನಾವಣೆ ಹೈವೊಲ್ಟೇಜ್ ಆಗಿದ್ದು, ಎಲ್ಲಿಲ್ಲದ ಕೂತೂಹಲ ಮೂಡಿದೆ. ಅಲ್ಲದೇ ಜಿಲ್ಲೆಯಾದ್ಯಂತ ಎಲ್ಲ ಕಡೆ ಚುನಾವಣೆಯದ್ದೇ ಚರ್ಚೆ ನಡೆದಿದೆ.
ಕೆಂಡದಂತಹ ಬಿಸಿಲಿದ್ದರೂ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ಜನರು ಚುನಾವಣೆ ಚರ್ಚೆಯಲ್ಲಿ ಮಗ್ನವಾಗಿರುವುದು ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದಾಗ ಕಂಡು ಬರುತ್ತಿದೆ. ಕಳೆದ 2014 ಹಾಗೂ ಅದರ ಹಿಂದಿನ 2009ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಗ್ರಾಮದಿಂದ ಇಂತಹ ಪಕ್ಷಕ್ಕೆ ಲೀಡ್ ಆಗಿದೆ. ತಾಲೂಕಿನಿಂದ ಇಷ್ಟು ಆಗಿದೆ ಎನ್ನುವ ಕುರಿತು ನಿಖರವಾಗಿ ಅಂಕಿ ಸಂಖ್ಯೆಗಳನ್ನು ಮುಂದಿಟ್ಟು ಚರ್ಚೆ ಮಾಡುತ್ತಿರುವುದನ್ನು ನೋಡಿದರೆ ಜನರಲ್ಲಿ ಚುನಾವಣೆ ಎಷ್ಟು ಪರಿಣಾಮ ಬೀರಿದೆ ಎನ್ನುವುದು ನಿರೂಪಿಸುತ್ತಿದೆ.
ಈ ಸಲ ಕಳೆದ ಸಲಕ್ಕಿಂತ ಲೀಡ್ ಜಾಸ್ತಿ ಆಗುತ್ತೆ, ಈ ಸಲ ಇವರೇ ಬರ್ತಾರೆ. ಯಾರೇನು ತಿಪ್ಪರಲಾಗ ಹಾಕಿದರೂ ಈ ಸಲ ಏನೂ ಬದಲಾಗಲ್ಲ ಎಂದು ಹೇಳುತ್ತಿರುವುದು ಮತ್ತೊಂದೆಡೆ ಕೇಳಿ ಬರುತ್ತಿದೆ. ಮುಖ್ಯವಾಗಿ ಯಾರು ಎಷ್ಟು ಹಣ ಹಂಚ್ತಾರೆ ಎನ್ನುವ ವಿಷಯವೂ ಹಳ್ಳಿಗರಲ್ಲಿ ಚರ್ಚೆ ಆಗುತ್ತದೆ. ಹಣ ಯಾರೂ ಕೊಡ್ತಾರೋ ಅವರಿಂದ ಪಡೆಯೋಣ. ಓಟ್ ಮಾತ್ರ ನಾವು ಅಂದುಕೊಂಡವರಿಗೆ ಹಾಕೋಣ ಎನ್ನುತ್ತಿರುವುದನ್ನು ನೋಡಿದರೆ
ರಾಜಕೀಯ ಪ್ರಜ್ಞಾವಂತಿಕೆ ಬಂದಿರುವುದು ಕಂಡು ಬರುತ್ತದೆ. ಕೈಯಲ್ಲಿಯೇ ರಾಜಕೀಯ ಆಗು ಹೋಗುಗಳನ್ನು ಅರಿಯುತ್ತಿರುವುದರಿಂದ ರಾಜಕೀಯ ಪ್ರಜ್ಞೆ ಜಾಗೃತಗೊಂಡಿದೆ. ವಾಟ್ಸ ಆ್ಯಪ್, ಇಂಟರನೆಟ್, ಫೆಸ್‌ಬುಕ್ ಹಾಗೂ ಮೊಬೈಲ್‌ದಲ್ಲೇ ಸುದ್ದಿವಾಹಿನಿಗಳ ವೀಕ್ಷಣೆಯು ಎಲ್ಲವನ್ನು ತಿಳಿಸುವಂತೆ ಮಾಡಿದೆ ಎಂದು ವಿಶ್ಲೇಷಿಸಬಹುದಾಗಿದೆ.
ನೋಟಾ ಮತ: ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 9888 ಮತಗಳು ನೋಟಾಗೆ ಚಲಾವಣೆಯಾಗಿದ್ದವು. ಕಣದಲ್ಲಿದ್ದ ಎಂಟು ಅಭ್ಯರ್ಥಿಗಳಲ್ಲಿ ನಾಲ್ವರು ಬಿಟ್ಟರೆ ಐದನೇ ಅಭ್ಯರ್ಥಿಯಾಗಿ ನೋಟಾಗೆ ಹೆಚ್ಚು ಮತ ಚಲಾವಣೆ ಆಗಿರುವುದನ್ನು ನಾವು ಪ್ರಮುಖವಾಗಿ ಅವಲೋಕಿಸಬಹುದಾಗಿದೆ. ಪ್ರಸ್ತುತ 2019ರ ಏ. 23ರಂದು ನಡೆಯುವ ಚುನಾವಣೆಯಲ್ಲಿ ಕಳೆದ ಸಲಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೋಟಾಗೆ ಮತಗಳು ಚಲಾವಣೆಯಾಗಲಿವೆ ಎನ್ನಲಾಗುತ್ತಿದೆ. ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಗಿದೆ ಎನ್ನಲಾದ ಅಸಮಾಧಾನವು ನೋಟಾಗೆ ಮತ ಹೆಚ್ಚಬಹುದು ಎಂದು ಊಹಿಸಲಾಗುತ್ತಿದೆ. ನೋಟಾಗೆ ಹೆಚ್ಚಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದನ್ನು ಚರ್ಚೆ ಜೋರಾಗಿ ನಡೆದಿದೆ.
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.