ಮೋದಿ ಸಾಧನೆ ಪಟ್ಟಿ ಕೊಡಲಿ
ಮಾಲೀಕಯ್ಯ, ಚಿಂಚನಸೂರ, ಜಾಧವ ದ್ರೋಹ ಬಗೆದವರು
Team Udayavani, Apr 18, 2019, 11:04 AM IST
ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ ಪರ ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಕಲಬುರಗಿ: ನಾನು ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ನಡೆಸಿದ್ದೇನೆ, ನನ್ನ ಸರ್ಕಾರದ ಸಾಧನೆ ಪಟ್ಟಿ ಕೊಡುತ್ತೇನೆ. ಅದೇ ರೀತಿ ಪ್ರಧಾನಿಯಾಗಿ ಐದು ವರ್ಷದ ಸಾಧನೆ ಪಟ್ಟಿಯನ್ನು ಮೋದಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದರು.
ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸತತವಾಗಿ 11 ಬಾರಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರಗಿ ಮತದಾರರು ಗೆಲ್ಲಿಸಿದ್ದು ತಮಾಷೆಯಲ್ಲ. ಖರ್ಗೆ ಅವರ ಅಭಿವೃದ್ಧಿ ಕೆಲಸ ನೋಡಿ ಮತ ಹಾಕಿದ್ದಾರೆಯೇ ಹೊರತು ಬಿಜೆಪಿಗರ ಬಣ್ಣದ ಮಾತಿಗಲ್ಲ. ನರೇಂದ್ರ ಮೋದಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಎಂದರೆ ಭಯ.
ಹೀಗಾಗಿ ಅವರನ್ನು ಸೋಲಿಸಲು ದಿಲ್ಲಿಯಿಂದ ಹಳ್ಳಿ ನಾಯಕರ ತನಕ ಸಂಚು ರೂಪಿಸಿದ್ದಾರೆ. ಆದರೆ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದರೆ ಲೋಕಸಭೆಗೆ ಗೌರವ ಇದ್ದಂತೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿದ್ದು ಅ ಧಿಕಾರ ಅನುಭವಿಸಿ
ಉಂಡ ಮನೆಗೆ ದ್ರೋಹ ಬಗೆದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಹಾಗೂ ಉಮೇಶ ಜಾಧವರ ಕೊಡುಗೆ ಕಲಬುರಗಿಗೆ ಏನಿದೆ? ಉಮೇಶ ಜಾಧವ ಗೋಮುಖ ವ್ಯಾಘ್ರ, ತನ್ನನ್ನೇ ತಾನು ಮಾರಿಕೊಂಡವ ಕಲಬುರಗಿ ಬಿಡ್ತಾನಾ? ಹೀಗಾಗಿ ಮಾರಿಕೊಂಡವರಿಗೆ ಮನ್ನಣೆ ಕೊಡುವುದನ್ನು ಬಿಟ್ಟು ಕಣ್ಣಿಗೆ ಕಾಣುವಂತ, ಅಭಿವೃದ್ಧಿ ಕೆಲಸ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ಕೊಡಿ ಎಂದು ಮನವಿ ಮಾಡಿದರು.
ಸಂವಿಧಾನ ಬದಲಾಯಿಸುತ್ತೇವೆ, ಮಿಸಲಾತಿ ತೆಗೆಯುತ್ತೇವೆ ಎನ್ನುವ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ, ಅನಂತ ಕುಮಾರ ಹೆಗಡೆ ಒಬ್ಬ ನಾಲಾಯಕ ಆತ ಗ್ರಾ.ಪಂ ಸದಸ್ಯನಾಗಲು
ನಾಲಾಯಕ್ ಆಗಿದ್ದಾನೆ. ತೇಜಸ್ವಿ ಸೂರ್ಯ ಅಲ್ಲ ಆತ ಅಮಾವಾಸ್ಯೆಯ ಕತ್ತಲು ಇಂತವರಿಗೆ ಮತ ನೀಡಬೇಡಿ ಎಂದು ಗುಡುಗಿದರು.
ಕಲಬುರಗಿಯಲ್ಲಿ ಉಮೇಶ ಜಾಧವ ಠೇವಣಿ ಕಳೆದುಕೊಳ್ಳುವಂತೆ ಕಲಬುರಗಿಯ ಮತದಾರರು ನಿರ್ಣಯ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ದೇಶದ ಸಂಪತ್ತು. ಮೋದಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಜನ ವಿರೋಧಿ ನೀತಿಗಳನ್ನು ಖರ್ಗೆ ಸಮರ್ಥವಾಗಿ ಎದುರಿಸಿದ್ದಾರೆ. ಅಂತವರನ್ನು ಕಲಬುರಗಿ ಜನ ಯಾವತ್ತೂ ಮರೆಯೋದಿಲ್ಲ. ಅವರ ಗೆಲುವು ನಿಶ್ಚಿತವಾಗಿದೆ. ಆದರೆ ಅಫಜಲಪುರ ಮತಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚು ಅಂತರ ನೀಡುವ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಸಚಿವ ಎಂ.ಸಿ. ಮನಗೂಳಿ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅಭಿವೃದ್ಧಿ ಕೆಲಸ ನೋಡಿ ಮತ ನೀಡಿ, ಖರ್ಗೆ ಬಳಿ ರಾಜಕೀಯ ಕಲಿತವರೆ ಅವರ ವಿರುದ್ಧ ಸ್ಪರ್ಧೆ ಮಾಡುತ್ತಾರೆಂದರೆ ಇದಕ್ಕಿಂತ ಹಾಸ್ಯಾಸ್ಪದ ಇನ್ನೊಂದಿಲ್ಲ. ಇದು ಮಲ್ಲಿಕಾರ್ಜುನ ಖರ್ಗೆ ವಿರುದ್ಧದ ಚುನಾವಣೆ ಅನ್ನೊದಕ್ಕಿಂತ ಪ್ರಜಾಪ್ರಭುತ್ವದ ಅಳಿವು, ಉಳಿವಿನ ಚುನಾವಣೆಯಾಗಿದೆ ಎಂದರು.
ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಕಲಬುರಗಿಯನ್ನು ಕರ್ನಾಟಕ ಮಾತ್ರವಲ್ಲ ದೇಶವೇ ಗಮನಿಸುವಂತೆ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ. ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನ ಕಲ್ಯಾಣ ಮಾಡಿದ್ದಾರೆ.
ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ನಿಶ್ಚಿತವಾಗಿದ್ದು, ಅಫಜಲಪುರ ಮತಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚು ಲೀಡ್ ಬರುವುದಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ಚುನಾವಣೆ ಕೇವಲ ನನ್ನನ್ನು ಸೋಲಿಸುವ ಹುನ್ನಾರ ಮಾತ್ರವಲ್ಲ, ಸಂವಿಧಾನ, ಪ್ರಜಾಪ್ರಭುತ್ವದ ಅಳಿವು, ಉಳಿವಿನ ಚುನಾವಣೆಯಾಗಿದೆ. ದಿಲ್ಲಿಯಿಂದ ಗಲ್ಲಿ ತನಕ ಪ್ರಜಾಪ್ರಭುತ್ವ ವಿರೋಧಿಗಳೆಲ್ಲ ಒಂದಾಗಿದ್ದಾರೆ. ಅವರಿಂದ ದೇಶಕ್ಕೆ ಗಂಡಾಂತರ ಇದೆ. ಹೀಗಾಗಿ ಪ್ರಜಾಪ್ರಭುತ್ವ ವಿರೋಧಿಗಳಿಗೆ ಮತದಾರ ಪ್ರಭುಗಳು ಬುದ್ಧಿ ಕಲಿಸಬೇಕು. ಕಲಬುರಗಿ ಮತದಾರರ ಆಶೀರ್ವಾದ ಇರುವ ತನಕ ಮೋದಿ ಮತ್ತವರ ಸಂಗಡಿಗರಿಂದ ಹಾಗೂ ಇಲ್ಲಿನ ಕೆಲ ನಾಯಕರಿಂದ ನನ್ನನ್ನು ಸೋಲಿಸಲು ಆಗುವುದಿಲ್ಲ. ಹೀಗಾಗಿ ದಯಮಾಡಿ ಕೋಮುವಾದಿ ಪಕ್ಷದವರಿಗೆ ಈ ಚುನಾವಣೆಯಲ್ಲಿ ಮತದಾರರು ಬುದ್ಧಿ ಕಲಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ತಾಲೂಕು ಅಧ್ಯಕ್ಷ ಮಹಾಂತೇಶ ಪಾಟೀಲ, ಶರಣಪ್ಪ ಮಟ್ಟೂರ, ಮುಖಂಡರಾದ ರಾಜೇಂದ್ರಕುಮಾರ ಪಾಟೀಲ, ಚಂದ್ರಕಾಂತ ಪಾಟೀಲ, ರಮೇಶ
ನಾಟಿಕಾರ, ದಿಲೀಪ ಪಾಟೀಲ, ಮಕ್ಬೂಲ್ ಪಟೇಲ್, ಮತೀನ್ ಪಟೇಲ್, ಶಾಮರಾವ ಪ್ಯಾಟಿ, ಪಪ್ಪು ಪಟೇಲ್, ಅರುಣ ಪಾಟೀಲ,
ಸಂಜು ಪಾಟೀಲ, ಚಂದು ದೇಸಾಯಿ, ಮತೀನ್ ಪಟೇಲ್, ಸಿದ್ಧಾರ್ಥ ಬಸರಿಗಿಡ, ದೇವೇಂದ್ರಪ್ಪ ಮಟ್ಟೂರ, ರವಿ ಶೆಟ್ಟಿ, ಶರಣು ಕುಂಬಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.