ಕಲಬುರಗಿ ಉತ್ತರದತ್ತ ಕೈ-ಕಮಲ ಚಿತ್ತ
ಖಮರುಲ್ ಇಲ್ಲದ ನೆನಪಿನಲ್ಲಿ ಕ್ಷೇತ್ರದ ಮತದಾರಅತಿ ಹೆಚ್ಚು ಮತದಾರರು ಇರುವ ಕ್ಷೇತ್ರ ಬಂದಿಲ್ಲ
Team Udayavani, Apr 19, 2019, 10:32 AM IST
ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರಿರುವ ಹಾಗೂ ಅಲ್ಪಸಂಖ್ಯಾತರೆ ಹೆಚ್ಚಿರುವ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಈ ಸಲ ಮತದಾನ ಯಾವ ರೀತಿ ಇರುತ್ತದೆಯೋ ಎನ್ನುವುದರತ್ತ ಗಮನ ಸೆಳೆದಿದೆ.
ಕಲಬುರಗಿ ಉತ್ತರ ಮತ ಕ್ಷೇತ್ರದಲ್ಲಿ 273549 ಮತದಾರರಿದ್ದಾರೆ.
ಕಳೆದ 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತಿ
ಹೆಚ್ಚಿನ 27503 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರಿಂದ
ಜತೆಗೆ ಅದರ ಹಿಂದಿನ 2009ರ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ
8792 ಮತಗಳು ಬಂದಿದ್ದರಿಂದ ಈ ಸಲ ಕಾಂಗ್ರೆಸ್‌ಗೆ ಎಷ್ಟು
ಹೆಚ್ಚು ಮತಗಳು ಬರುತ್ತದೆಯೋ ಎನ್ನುವುದನ್ನು ಕಾಂಗ್ರೆಸ್ ಪಕ್ಷವಲ್ಲದೇ ಬಿಜೆಪಿಯಲ್ಲೂ ಚರ್ಚೆ ನಡೆಯುತ್ತಿರುವುದನ್ನು ನೋಡಿದರೆ ಕಲಬುರಗಿ ಉತ್ತರಕ್ಕೆ ಎಲ್ಲರ ಕಾತರ ಎನ್ನುವಂತಾಗಿದೆ.
ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಕ್ಷೇತ್ರದ ಮೇಲೆ ಹೆಚ್ಚಿನ ಹಿಡಿತ ಹೊಂದಿದ್ದರು. ಖಮರುಲ್ ನೆನಪು ಮತದಾರರ ಮನದಾಳದಲ್ಲಿ ಬೇರೂರಿದ್ದು, ಅವರಿಲ್ಲದಿರುವ ನೋವು ಮತದಾರರಲ್ಲಿ ಕಾಣಿಸುತ್ತಿದೆ. ಖಮರುಲ್ ಇಸ್ಲಾಂ ನಿಧನದ ನಂತರ
ಅವರ ಪತ್ನಿ ಖನೀಜಾ ಫಾತೀಮಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಖಮರುಲ್ ರಂತೆ ಹೆಚ್ಚಿನ ಸಂಘಟನಾತ್ಮಕ ಹಿಡಿತ ಹೊಂದದಿರುವುದು ಹಾಗೂ ಕ್ಷೇತ್ರದಲ್ಲಿನ ಮುಖಂಡರ ಅಸಮಾನತೆ ಯಾವ ರೀತಿ ಪರಿಣಾಮ
ಬೀರುತ್ತದೆ ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.
ಖಮರುಲ್ ಇಸ್ಲಾಂ ಅವರನ್ನು ಸಚಿವ ಸ್ಥಾನದಿಂದ ಇಳಿಸಿದ್ದರ
ಕುರಿತಾಗಿ ಕ್ಷೇತ್ರದಲ್ಲಿ ಸ್ವಲ್ಪ ಅಸಮಾಧಾನವಿತ್ತು. ಇದೇ ಕಾರಣಕ್ಕೆ ಹಾಗೂ ಪಕ್ಷದ ಮುಖಂಡರೆಲ್ಲರನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತಿಲ್ಲ ಎನ್ನುವ ಅಸಮಾಧಾನ ಕ್ಷೇತ್ರದಲ್ಲಿ
ಒಂದು ಸುತ್ತು ಹಾಕಿದಾಗ ಕಂಡು ಬಂತು. ಈ ಅಸಮಾಧಾನ ಚುನಾವಣೆಯಲ್ಲಿ ಯಾವ ನಿಟ್ಟಿನಲ್ಲಿ ಪರಿಣಾಮ ಬೀರಬಹುದು ಎನ್ನುವುದನ್ನು ಕಾಯ್ದು ನೋಡಬೇಕಿದೆ.
ಸೋಲಿಲ್ಲದ ಸರದಾರ, ಕಲಬುರಗಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿ ಇಲ್ಲವೇ ಮಡಿ ಎನ್ನುವ ಸ್ಥಿತಿ ಈ ಚುನಾವಣೆಯಲ್ಲಿ ಸೃಷ್ಟಿಯಾಗಿದೆ. ಹೊಸ ಸವಾಲಿನೊಂದಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ| ಉಮೇಶ ಜಾಧವ ಸಹ ಕ್ಷೇತ್ರದ ಕೆಲ ಮತದಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವೆಲ್ಲ ಕಾರಣಕ್ಕೆ ಕ್ಷೇತ್ರದ ಚುನಾವಣೆ ಹೈ ವೋಲ್ಟೇಜ್ ಆಗಿದೆ. ಒಟ್ಟಾರೆ ಕಾಂಗ್ರೆಸ್ ಪಕ್ಷ ಹೆಚ್ಚು ನೆಚ್ಚಿಕೊಂಡಿರುವುದೇ ಕಲಬುರಗಿ ಉತ್ತರ ಕ್ಷೇತ್ರ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಲಬುರಗಿ ಉತ್ತರ ಮತಕ್ಷೇತ್ರದ ಮತದಾರರು ಇಡೀ ಕಲಬುರಗಿ ಲೋಕಸಭಾ ಕ್ಷೇತ್ರದ ನಿರ್ಣಾಯಕ ಮತದಾರರು ಎಂದರೂ ತಪ್ಪಾಗಲಿಕ್ಕಿಲ್ಲ.
ಕಲಬುರಗಿ ಕ್ಷೇತ್ರದಲ್ಲಿ ಮಹಾನಗರದಲ್ಲಿನ ಇತರ ಬಡಾವಣೆಗಳಲ್ಲಿರುವಂತೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಕೆಲ ಬಡಾವಣೆಗಳಲ್ಲಿ ಸಮಸ್ಯೆಯಿದೆ. ಒಳಚರಂಡಿ ಸಮಸ್ಯೆ
ವಿಪರೀತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ| ಉಮೇಶ ಜಾಧವ ಇಬ್ಬರೂ ಕ್ಷೇತ್ರದಲ್ಲಿ
ಸಂಚರಿಸಿ ಮತಯಾಚಿಸಿದ್ದಾರೆ. ಅಲ್ಪಸಂಖ್ಯಾತರ ಮುಖಂಡರೂ
ಕ್ಷೇತ್ರಕ್ಕೆ ಬಂದು ಮತಯಾಚಿಸಿದ್ದಾರೆ. ಒಟ್ಟಾರೆ ಕಲಬುರಗಿ ಉತ್ತರ
ಮತಕ್ಷೇತ್ರದತ್ತ ಎಲ್ಲರ ಚಿತ್ತ ಹರಿದಿದೆ.
2014ರ ಲೋಕಸಭೆ ಚುನಾವಣೆಯಲ್ಲಿ 27503 ಮತಗಳು ಕಾಂಗ್ರೆಸ್‌ಗೆ ಲೀಡ್ ಬಂದಿದ್ದವು. ಈ ಸಲ ಮತದಾರರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಜತೆಗೆ ಮತಗಳ ವಿಭಜನೆ ಸಾಧ್ಯತೆ ಕಡಿಮೆ ಇರುವುದರಿಂದ ಈ ಸಲವೂ 25 ಸಾವಿರದಿಂದ 30 ಸಾವಿರ ಮತ ಲೀಡ್ ಕಾಂಗ್ರೆಸ್‌ಗೆ ದೊರಕುವ ಸಾಧ್ಯತೆಗಳಿವೆ ಹೆಚ್ಚಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖನೀಜಾ ಫಾತೀಮಾ ಅವರು 5940 ಹೆಚ್ಚುವರಿ ಮತಗಳಿಂದ ಚುನಾಯಿತರಾಗಿದ್ದರೆ, ಜೆಡಿಎಸ್‌ನ 14422 ಮತಗಳು ಹಾಗೂ ಇತರ ಮತಗಳನ್ನು ಕ್ರೋಢಿಕರಿಸಿದರೆ ಕಳೆದ ಸಲದಷ್ಟೇ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಲ್ಲಿ ಯಾವುದೇ ಅನುಮಾನಗಳಿಲ್ಲ.
ಭೀಮರೆಡ್ಡಿ ಪಾಟೀಲ ಕುರಕುಂದಾ,
ಮಾಜಿ ಮೇಯರ್
ಕಳೆದ ಸಲ ಹಿಂದೂಗಳ ಮತಗಳು ವಿಭಜನೆಯಾಗಿದ್ದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ದೊರಕಿತ್ತು. ಆದರೆ ಈ ಸಲ ಮತ ವಿಭಜನೆಯಾಗುವುದು ಕಡಿಮೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಹವಾ ಇರುವುದರಿಂದ ಪಕ್ಷಕ್ಕೆ ಲಾಭವಾಗುವುದು. ಹೀಗಾಗಿ ಅಚ್ಚರಿ ಎನ್ನುವಂತೆ ಬಿಜೆಪಿಗೆ ಲೀಡ್ ಬರಲಿದೆ. ಕಾಂಗ್ರೆಸ್ ಪಕ್ಷದ ಮತಬ್ಯಾಂಕ್‌ಗೆ ಈ ಸಲ ಹೊಡೆತ ಬೀಳುವುದು ನಿಶ್ಚಿತ.
ಶಿವಾನಂದ ಪಾಟೀಲ ಅಷ್ಟಗಿ,
ಪಾಲಿಕೆ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.