ಎಸ್‌ಸಿಯಿಂದ ಬಂಜಾರಾ ಸಮಾಜ ತೆಗೆಯಲು ಸಾಧ್ಯವಿಲ್ಲ
Team Udayavani, Apr 19, 2019, 4:05 PM IST
ಕಲಬುರಗಿ: ಏಷ್ಯನ್ ಮಾಲ್ ಹತ್ತಿರ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಂಜಾರಾ ಸಮುದಾಯ ಸಮಾವೇಶವನ್ನು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ನಾನು ಗೆದ್ದರೆ ಬಂಜಾರಾ ಸಮುದಾಯವನ್ನು ಪರಿಶಿಷ್ಟ ಜಾತಿಯಿಂದ ತೆಗೆಸುತ್ತೇನೆ ಎನ್ನುವುದು ಸುಳ್ಳು. ನಾನಲ್ಲ, ನಮ್ಮಪ್ಪ ಬಂದರೂ ಪರಿಶಿಷ್ಟ ಜಾತಿಯಿಂದ ಬಂಜಾರಾ ಸಮುದಾಯ ತೆಗೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ
ಸ್ಪಪ್ಟಪಡಿಸಿದರು.
ನಗರದ ಏಷ್ಯನ್ ಮಾಲ್ ಹತ್ತಿರದ ಮೈದಾನದಲ್ಲಿ
ಗುರುವಾರ ಹಮ್ಮಿಕೊಂಡಿದ್ದ ಬಂಜಾರಾ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಬಂಜಾರಾ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ನಾನೇ ಸಹಕಾರ ನೀಡಿದ್ದೇನೆ. ಆದರೀಗ ಪರಿಶಿಷ್ಟ ಜಾತಿಯಿಂದ ಬಂಜಾರಾ ಸಮುದಾಯವನ್ನು ತೆಗೆಸುತ್ತೇನೆ ಎಂದು ನನ್ನ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಬಂಜಾರಾ ಸಮುದಾಯ ಸೊಪ್ಪು ಹಾಕಬಾರದು ಎಂದರು.
70ರ ದಶಕದಲ್ಲಿ ಹಳೆ ಮೈಸೂರು ಭಾಗದಲ್ಲಿ ಮಾತ್ರ ಭೋವಿ ಮತ್ತು ಬಂಜಾರಾ ಸಮುದಾಯ ಪರಿಶಿಷ್ಟ ಜಾತಿಗೆ ಒಳಪಟ್ಟಿತ್ತು. ನಂತರದಲ್ಲಿ ದೇವರಾಜು ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೈಕ ಭಾಗದ ಬಂಜಾರಾ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಯಿತು. ಆಗ ನಾನು ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಬಂಜಾರಾ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸುವಾಗಲೇ ನಾನು ವಿರೋಧಿಸಿಲ್ಲ. ಈಗೇಕೆ ಬಂಜಾರಾ ಸಮುದಾಯವನ್ನು ತೆಗೆದು ಹಾಕಿಸಲಿ ಎಂದು ಪ್ರಶ್ನಿಸಿದರು.
ನಮ್ಮ ಮಧ್ಯೆಯೇ ಇದ್ದು, ನಮ್ಮನ್ನು ಶೋಷಣೆಗೆ ಗೊಳಪಡಿಸುವವರು ಇದ್ದಾರೆ. ಮೀಸಲಾತಿ ಸಮರ್ಪಕವಾಗಿ ಸದುಪಯೋಗ ಪಡೆಯುತ್ತಿರುವ ಸಮುದಾಯವೆಂದರೆ ಅದು ಬಂಜಾರ ಸಮುದಾಯ ಮಾತ್ರ. ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲಿ ಬಂಜಾರಾ ಸಮುದಾಯ ಮೀಸಲಾತಿ ಪಡೆಯುತ್ತಿದೆ ಎಂದು ಹೇಳಿದರು.
ತಾಂಡಾಗಳಿಗೆ ಸರ್ಕಾರಿ ಜಮೀನು, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇನೆ. ಕಳ್ಳತನ, ದರೋಡೆಯಂತಹ ಸುಳ್ಳು ಪ್ರಕರಣಗಳಿಂದ ಬಂಜಾರಾ ಸಮುದಾಯದವರನ್ನು ರಕ್ಷಿಸಿದ್ದೇನೆ. ಬಡವರ ಪ್ರತಿನಿಧಿಯಾಗಿ ಬಂಜಾರಾ ಸಮುದಾಯಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದರು.
ನನ್ನ ರಾಜಕೀಯ ಜೀವನ ಆರಂಭವಾಗಿದ್ದೂ ಬಂಜಾರಾ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಗುರುಮಠಕಲ್ ನಿಂದ. ಕಂದಾಯ ಸಚಿವನಾಗಿದ್ದಾಗ ಅನೇಕ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ್ದೇನೆ. ಬಂಜಾರಾ ಸಮುದಾಯದ ಗುರು ರಾಮರಾವ ಮಹಾರಾಜರ ಮನವಿ ಮೇರೆಗೆ ಪೌರಾದೇವಿ ದೇವಸ್ಥಾನದ ಹತ್ತಿರ ರೈಲ್ವೆ ನಿಲ್ದಾಣ ನಿರ್ಮಿಸಿ, ರೈಲುಗಳು ನಿಲ್ಲುವಂತೆ ಮಾಡಿದ್ದೇನೆ ಎಂದು ವಿವರಿಸಿದರು. ಮಾಜಿ ಸಚಿವ, ಜೆಡಿಎಸ್ ಮುಖಂಡ ರೇವೂ ನಾಯಕ ಬೆಳಮಗಿ ಮಾತನಾಡಿ, ಬಂಜಾರಾ ಸಮುದಾಯದ್ದು ದ್ರೋಹ ಮಾಡುವ ರಕ್ತವಲ್ಲ. ಬಿಜೆಪಿಯವರು ರೇವೂ ನಾಯಕ ಕುತ್ತಿಗೆ ಕೊಯ್ದಾಗ ಉಮೇಶ ಜಾಧವ ಸುಮ್ಮನಿದ್ದರು.
ಈಗ ಬಂಜಾರಾ ಜಾತಿ ಕಾಣಲಿಲ್ಲವೇ? ನಮ್ಮ ಮೇಲೆ ಹಲ್ಲೆ ಮಾಡಿದವರು ಕ್ಷಮೆ ಕೋರಿದ್ದಾರೆ. ಅವರನ್ನು ನಾವು ಕ್ಷಮಿಸಿದ್ದೇವೆ. ಹಲ್ಲೆ ಮಾಡಿದವರು ಸ್ವಯಂ ಪ್ರೇರಿತರಾಗಿ ಹಲ್ಲೆ ಮಾಡಿಲ್ಲ. ಅದಕ್ಕೆ ಜಾಧವ ಕಾರಣವಾಗಿದ್ದು, ಸಮುದಾಯಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ ಎಂದರು.
ಮುಖಂಡ ಸುಭಾಷ ರಾಠೊಡ ಮಾತನಾಡಿ, ಉಮೇಶ ಜಾಧವಗೆ ಸೇವಾಲಾಲ್ ಇತಿಹಾಸ ಗೊತ್ತಿಲ್ಲ. ಬಂಜಾರಾ ಆಚಾರ, ವಿಚಾರಗಳು ಗೊತ್ತಿಲ್ಲ. ಬಿಜೆಪಿಯವರು ಅತ್ಯಂತ ಕೆಳಮಟ್ಟದ ಚುನಾವಣೆ ಮಾಡುತ್ತಿದ್ದಾರೆ ಎಂದು ದೂರಿದರು. ಸಮಾವೇಶದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಮೇಯರ್ ಮಲ್ಲಮ್ಮ ವಳಕೇರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೊಡ, ಮುಖಂಡರಾದ ಬಾಬು ಹೊನ್ನಾನಾಯಕ,
ರವಿ ರಾಠೊಡ, ಕಿಶನ್ ರಾಠೊಡ, ರೇಣುಕಾ ಚವ್ಹಾಣ ಮುಂತಾವದರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.