ದಕ್ಷಿಣ ಕ್ಷೇತ್ರದ ಮತಗಳು ಯಾರ ಪಾಲು?
ಬಿಜೆಪಿ ಶಾಸಕರಿದ್ದರೂ ಲೋಕಸಭೆಯಲ್ಲಿ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಖರ್ಗೆಗೆ ಬೆಂಬಲ ವದಂತಿ ಸುಳ್ಳು: ರೇವೂರ್
Team Udayavani, Apr 20, 2019, 9:53 AM IST
ಕಲಬುರಗಿ: ಮಹಾನಗರದ 25 ವಾರ್ಡ್‌ಗಳು ಹಾಗೂ ತಾಲೂಕಿನ 28 ಹಳ್ಳಿಗಳು ಜತೆಗೆ ಒಂಭತ್ತು ತಾಂಡಾಗಳನ್ನು ಒಳಗೊಂಡಿರುವ
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದತ್ತ ಪ್ರಸ್ತುತ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿತ್ತ ಹರಿದಿದೆ.
ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಈ ಸಲವಾದರೂ ಬಿಜೆಪಿಗೆ ಹೆಚ್ಚಿನ ಮತಗಳು ಬೀಳಬೇಕೆಂದು ಕಸರತ್ತು ನಡೆದಿದ್ದರೇ,
ಉತ್ತರದಂತೆ ದಕ್ಷಿಣದಲ್ಲಿಯೂ ಲೀಡ್ ಪಡೆಯಬೇಕೆಂದು ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಕಸರತ್ತು ನಡೆಸಿದೆ.
ಕಳೆದ 2009ರಲ್ಲಿ ಬಿಜೆಪಿಗೆ 8621 ಮತಗಳು ಹಾಗೂ 2014ರಲ್ಲಿ 269 ಮತಗಳು ಕಾಂಗ್ರೆಸ್‌ಗೆ ಲೀಡ್ ಆಗಿದ್ದವು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಕ್ಕಿರಲಿಲ್ಲ. ಬೇರೆ ಕ್ಷೇತ್ರದಲ್ಲಿ ವಿಧಾನಸಭೆಗಿಂತ ಲೋಕಸಭೆಯಲ್ಲಿಯೇ ಬಿಜೆಪಿಗೆ ಹೆಚ್ಚು ಮತ
ಬರುತ್ತಿರುವ ವಿಷಯವೇ ಪ್ರಮುಖವಾಗಿ ಈ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಳೆದ ವಿಧಾನಸಭಾ ಚುನಾವಣೆಯಲ್ಲಿ 5431 ಮತಗಳ ಅಂತರದಿಂದ
ಚುನಾಯಿತರಾಗಿದ್ದಾರೆ.
ಇವರು ಈ ಸಲ ಹೆಚ್ಚಿಗೆ ಲೀಡ್ ಕೊಡುವುದಾಗಿ
ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ಕಳೆದ
ಸಲಕ್ಕಿಂತ ಹೆಚ್ಚಿಗೆ ಲೀಡ್ ತರಬೇಕು
ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆಸಿದೆ.
ತೀವ್ರ ಚರ್ಚೆ: ಫೆಸ್‌ಬುಕ್‌ನಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಕೆಲವರು ಪೋಸ್ಟ್
ಮಾಡಿರುವುದು ಕ್ಷೇತ್ರದಲ್ಲಿ ತೀವ್ರ ಚರ್ಚೆ ಆಗುತ್ತಿದೆ. ಕಳೆದ ಸಲ ಪರೋಕ್ಷವಾಗಿ ಬೆಂಬಲ ನೀಡಿದ ಪರಿಣಾಮವೇ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್‌ಗೆ ಸ್ವಲ್ಪ ಹೆಚ್ಚಿಗೆ ಮತಗಳು ಬಂದಿವೆ ಎಂಬುದಾಗಿಯೂ ಕೆಲವರು ಉಲ್ಲೇಖೀಸುತ್ತಿದ್ದಾರೆ.
ಖರ್ಗೆ ಅವರಿಗೆ ಬೆಂಬಲಿಸಲಾಗುತ್ತಿದೆ ಎಂದು ಕೆಲವು ಕಿಡಿಗೇಡಿಗಳು ಅದರಲ್ಲೂ ಕಾಂಗ್ರೆಸ್ ನವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಇದನ್ನೇ ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ. ಮತದಾರರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ.
ನೀರಿನ ಸಮಸ್ಯೆ: ಕ್ಷೇತ್ರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ. ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಸ್ವಲ್ಪ ಜಾಸ್ತಿಯೇ ಇದೆ.
ರಸ್ತೆಗಳ ಪರಿಸ್ಥಿತಿಯಂತೂ ಹದಗೆಟ್ಟು ಹೋಗಿದೆ. ಕ್ಷೇತ್ರದ
ವ್ಯಾಪ್ತಿಯಲ್ಲಿ ಆರು ವರ್ಷಗಳ ಹಿಂದೆಯೇ ಕೈಗೆತ್ತಿಕೊಂಡಿರುವ
ರೈಲ್ವೆ ಕಾಮಗಾರಿಗಳು ಇನ್ನೂವರೆಗೂ ಮುಗಿಯುತ್ತಿಲ್ಲ. ಒಂದೂವರೆ ದಶಕದಿಂದ ಕಣ್ಣಿ ತರಕಾರಿ ಮಾರುಕಟ್ಟೆ ಸಮಸ್ಯೆಗೆ
ಪರಿಹಾರ ಸಿಗದೇ ಹಾಗೆ ಮುಂದುವರಿದು ಬರುತ್ತಿರುವುದು ದುರಂತವೇ ಎನ್ನಬಹುದು. ಅಲ್ಲದೇ ಒಳಚರಂಡಿ ಸಮಸ್ಯೆಯೂ
ಕ್ಷೇತ್ರದಲ್ಲಿದೆ.
ಬಿಜೆಪಿ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣೆ ಘೋಷಣೆ ಮುಂಚೆಯೇ ಕಳೆದ ಮಾರ್ಚ್ 6ರಂದು ಆಗಮಿಸಿ ಚುನಾವಣಾ ಪ್ರಚಾರ ನಡೆಸಿ ಹೋಗಿದ್ದಾರೆ. ಇನ್ನುಳಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರ ನಾಯಕರು ಮತಯಾಚಿಸಿದ್ದಾರೆ.
ಅದೇ ರೀತಿ ಕಾಂಗ್ರೆಸ್‌ದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಗೂ ಇನ್ನಿತರ ಮುಖಂಡರು ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಒಟ್ಟಾರೆ ಈ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಪೈಪೋಟಿ ಎನ್ನುವಂತೆ
ಮತ ಬೇಟೆಗಿಳಿದಿವೆ.
ಕಿಡಿಗೇಡಿಗಳ ಕೃತ್ಯ
ಫೇಸ್‌ಬುಕ್‌ನಲ್ಲಿ ತಾವು ಕಾಂಗ್ರೆಸ್‌ಗೆ ಬೆಂಬಲಿಸುತ್ತಿರುವುದಕ್ಕೆ ಅಭಿನಂದನೆ ಎಂದು ಪ್ರಸ್ತಾಪಿಸಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವಾಗಿದೆ. 2009ರಲ್ಲಿ ಬಿಜೆಪಿಯೇ ಲೀಡ್
ಆಗಿದೆ. ಕಳೆದ ಸಲ ಮಾತ್ರ 269 ಮತಗಳು ಕಾಂಗ್ರೆಸ್
ಗೆ ಲೀಡ್ ಆಗಿದೆ. ಆದರೆ ಈ ಸಲ ಬಿಜೆಪಿ ಲೀಡ್ ಆಗುತ್ತದೆ. ಮತದಾರರೆಲ್ಲರೂ ದೇಶದ ಹಿತದೃಷ್ಟಿಯಿಂದ ಅದರಲ್ಲೂ ಮೋದಿ ಕೈ ಬಲಪಡಿಸಲು ಶಪಥ ಮಾಡಿದ್ದಾರೆ. ವಿರೋಧಿಗಳಿಗೆ ಫಲಿತಾಂಶವೇ ಉತ್ತರ ನೀಡಲಿದೆ.
ದತ್ತಾತ್ರೇಯ ಪಾಟೀಲ
ರೇವೂರ, ಶಾಸಕರು, ಕಲಬುರಗಿ ದಕ್ಷಿಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.