ಮೋದಿ ದೊಡ್ಡ ಕಳ್ಳ-ಕೆಸಿಆರ್‌ ಸಣ್ಣ ಕಳ್ಳ: ವಿಜಯಶಾಂತಿ

ಮಲ್ಲಿಕಾರ್ಜುನ ಖರ್ಗೆ ಪರ ಮತ ಯಾಚನೆ

Team Udayavani, Apr 20, 2019, 12:24 PM IST

20-April-11

ಸೇಡಂ: ಮುಧೋಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ನಟಿ ವಿಜಯಶಾಂತಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೃಹತ್‌ ಮಾಲೆ ಹಾಕಿ ಸನ್ಮಾನಿಸಲಾಯಿತು.

ಸೇಡಂ: ಪ್ರಧಾನಿ ನರೇಂದ್ರ ಮೋದಿಯೊಬ್ಬ ಕ್ರಿಮಿನಲ್‌, ಮಾಯದ ಮಾತಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್‌ ಮತ್ತು ಮೋದಿ ಒಂದೇ ನಾಣ್ಯದ ಎರಡು ಮುಖಗಳು. ಪ್ರಧಾನಿ ಮೋದಿ ದೊಡ್ಡ ಕಳ್ಳ, ಕೆಸಿಆರ್‌ ಸಣ್ಣ ಕಳ್ಳ ಎಂದು ತೆಲುಗಿನ ಖ್ಯಾತ ನಟಿ, ಕಾಂಗ್ರೆಸ್‌ ನಾಯಕಿ ವಿಜಯಶಾಂತಿ ಟೀಕಿಸಿದರು.

ತಾಲೂಕಿನ ಮುಧೋಳ ಗ್ರಾಮದಲ್ಲಿ ಕಾಂಗ್ರೆಸ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಪರ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಮೋದಿ ಬಂಡವಾಳಶಾಹಿ ಅದಾನಿ ಮತ್ತು ಅಂಬಾನಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಆಪಾದಿಸಿದರು. ಅಚ್ಛೇ ದಿನ್‌ ಹೆಸರಲ್ಲಿ ರೈತರು, ಕಾರ್ಮಿಕರು, ಬಡವರನ್ನು ವಂಚಿಸಲಾಗುತ್ತಿದೆ.
ಕೇವಲ ನೀರವ ಮೋದಿ, ಲಲಿತ ಮೋದಿ, ಮೆಹುಲ್‌ ಚೌಕ್ತಿ ಅಂತವರು ದೇಶವನ್ನು ಲೂಟಿ ಮಾಡುತ್ತಿದ್ದರೂ ಮೋದಿ ಸುಮ್ಮನಿದ್ದಾರೆ.

ಜಿಎಸ್ಟಿಯಿಂದ ತಾತ, ಮುತ್ತಾತನ ಕಾಲದಲ್ಲಿನ ಚಿನ್ನಾಭರಣಕ್ಕೂ ಲೆಕ್ಕ ತೋರಿಸುವ ಪರಿಸ್ಥಿತಿ ಬಂದಿದೆ. ಮುಂದೊಂದು ದಿನ ತಿನ್ನುವ ಅನ್ನಕ್ಕೂ ಲೆಕ್ಕ ಕೇಳಬಹುದು ಎಂದರು.

ಜನರ ದಾರಿ ತಪ್ಪಿಸುತ್ತಿರುವ ಮಾಧ್ಯಮ: ಪ್ರಧಾನಿ ಮೋದಿ ಕೈಯಲ್ಲಿರುವ ದೇಶದ ಕೆಲವು ಮಾಧ್ಯಮಗಳು ಜನರ ದಾರಿ ತಪ್ಪಿಸುತ್ತಿವೆ. ಸತ್ಯ ಮರೆಮಾಚಲಾಗುತ್ತಿದೆ. ಯಾವೊಂದು ಚಾನಲ್‌
ಗಳು ಮೋದಿ ವಿರುದ್ಧ ಮಾತನಾಡಿದರೆ, ಚಾನಲ್‌ನ ಪರವಾನಗಿಯನ್ನೇ ರದ್ದು ಮಾಡುವಷ್ಟು ಶಕ್ತಿಯನ್ನು ಮೋದಿ ಹೊಂದಿದ್ದಾರೆ.

ಈಗ ಸೋಷಿಯಲ್‌ ಮೀಡಿಯಾಗಳು ಸತ್ಯವನ್ನು ತೋರಿಸುತ್ತಿವೆ ಎಂದರು. ಡಾ| ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ವಿಧಾನಪರಿಷತ್‌ ಸದಸ್ಯ ಕೆ.ಬಿ. ಶಾಣಪ್ಪ, ಮುಕ್ರಂಖಾನ್‌, ಮಹಾಂತಪ್ಪ ಸಂಗಾವಿ, ಪ್ರತಿಭಾ ಪಾಟೀಲ, ಸುನೀತಾ ತಳವಾರ, ಧೂಳಪ್ಪ, ವೆಂಕಟರೆಡ್ಡಿ, ಜಗನ್ನಾಥ ಗೋಟೂರ, ರವಿ, ಹಾಜಿ ನಾಡೇಪಲ್ಲಿ, ದಾಮೋದರರೆಡ್ಡಿ, ಕುಸುಮಾ, ತೆಲಂಗಾಣ ಕಾಂಗ್ರೆಸ್‌ ನಾಯಕಿ ಶಾರದಾ ಇದ್ದರು.

ಕಾಲೇಜೇ ಜೂಜು ಅಡ್ಡೆ
ಗುಂಡೇಪಲ್ಲಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪದವಿ ಕಾಲೇಜು
ಸ್ಥಳದಲ್ಲಿ ಶಾಸಕ ರಾಜಕುಮಾರ ಪಾಟೀಲ ಜೂಜು ಅಡ್ಡೆ ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದಾರೆ. ಅಣ್ಣ-ತಮ್ಮ ಸೇರಿ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಪರ್ಸಂಟೇಜ್‌ ಪಡೆಯುತ್ತಿದ್ದಾರೆ.
ಡಾ| ಶರಣಪ್ರಕಾಶ ಪಾಟೀಲ,
ಮಾಜಿ ಸಚಿವ

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

2-kalburgi

Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.