ಪ್ರಹಸನಕ್ಕೆ ತೆರೆ: ಈಗ ಫಲಿತಾಂಶದತ್ತ ನೋಟ
ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆ ಡೈರಿ
Team Udayavani, Apr 24, 2019, 10:38 AM IST
ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಚಲನ ಮೂಡಿಸಿ, ಬಿಜೆಪಿ ಅಭ್ಯರ್ಥಿಯಾಗಿ ಡಾ| ಉಮೇಶ ಜಾಧವ ಸ್ಪರ್ಧಿಸಿದ್ದರಿಂದ ಹೈವೊಲೆrೕಜ್ ಕ್ಷೇತ್ರವಾಗಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ವರೆಗೂ ಅನೇಕ ನಾಯಕರು ಕಲಬುರಗಿಗೆ ಆಗಮಿಸಿ ಪ್ರಚಾರ ನಡೆಸಿದರು.
ಮಾರ್ಚ್ 10ರಂದು ಲೋಕಸಭೆ ಚುನಾವಣೆ ಘೋಷಣೆಯಾಗುವ ಮೂರು ದಿನಗಳ ಮುಂಚೆ ಮಾರ್ಚ್ 6ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಶಿವರಾತ್ರಿ ಅಮಾವಾಸ್ಯೆಯಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಆಗಮಿಸಿ ಚುನಾವಣೆ ರಣಕಹಳೆ ಮೊಳಗಿಸಿದ್ದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ| ಉಮೇಶ ಜಾಧವ ಪ್ರಧಾನಿ ಕಾರ್ಯಕ್ರಮದ ವೇದಿಕೆ ಮೇಲೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
ತದನಂತರ ಮಾರ್ಚ್ 18ರಂದು ಅಖೀಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರಗಿಗೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಮತಯಾಚಿಸಿದರು. ಇದೇ ವೇದಿಕೆ ಮೇಲೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ ಪ್ರಧಾನಿ ಮೋದಿ ‘ನಾಮರ್ಧ’ ಎನ್ನುವ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದರು. ಇದಕ್ಕೂ ಮುನ್ನ ಮಾರ್ಚ್ 16ರಂದು ಮಾಜಿ ಸಚಿವ ಕೆ.ಬಿ. ಶಾಣಪ್ಪ ಕಾಂಗ್ರೆಸ್ ತ್ಯಜಿಸುವ ನಿರ್ಧಾರ ಪ್ರಕಟಿಸಿ, ಏಪ್ರಿಲ್ 1ರಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಅದೇ ರೀತಿ ಮಾರ್ಚ್ 21ರಂದು ಹಿರಿಯ ನಾಯಕ ಡಾ| ಎ.ಬಿ. ಮಲಕರೆಡ್ಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರಲ್ಲದೇ ಮರುದಿನ ಬಿಜೆಪಿಗೆ ಸೇರ್ಪಡೆಯಾದರು.
ಏ. 1ರಂದು ಡಾ| ಉಮೇಶ ಜಾಧವ ಶಾಸಕತ್ವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ರಮೇಶಕುಮಾರ ಅಂಗೀಕರಿಸಿದರು. ಏ.3ರಂದು ಬಿಜೆಪಿ ಅಭ್ಯರ್ಥಿಯಾಗಿ ಡಾ| ಉಮೇಶ ಜಾಧವ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಏ.4ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ| ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದರು.
ಚುನಾವಣೆ ಕಾವು ಏರುತ್ತಿದ್ದಂತೆ ತಂತ್ರ-ಪ್ರತಿತಂತ್ರಗಳು ಶುರುವಾದವು. ಈ ನಿಟ್ಟಿನಲ್ಲಿ ಸಮುದಾಯಗಳ ಸಮಾವೇಶ ಶುರುವಾದವು. ಏ. 12ರಂದು ವೀರಶೈವ ಕಲ್ಯಾಣ ಮಂಪಟದ ಎದುರಿನ ಜಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ವೀರಶೈವ ಲಿಂಗಾಯತ ಸಮಾವೇಶ ನಡೆಯಿತು. ಇದಕ್ಕೆ ಪರ್ಯಾಯವಾಗಿ ಏ. 16ರಂದು ನೂತನ ವಿದ್ಯಾಲಯ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ವೀರಶೈವ-ಲಿಂಗಾಯತ ಸಮಾವೇಶ ನಡೆಯಿತು. ಇದರ ನಡುವೆ ಏ. 13ರಂದು ಬಿಜೆಪಿ ವತಿಯಿಂದ ಹಿಂದುಳಿದ ವರ್ಗಗಳ ಸಮಾವೇಶ ನಡೆಯಿತು. ತದನಂತರ ಸ್ಪರ್ಧೆ ಎನ್ನುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಂದ ಮಾದಿಗರ, ಆರ್ಯ ಈಡಿಗರ, ಕೋಲಿ ಸಮಾಜ ಸೇರಿದಂತೆ ಇತರ ಸಮುದಾಯಗಳ ಸಮಾವೇಶಗಳು ಒಂದರ ಮೇಲೆ ಒಂದು ಎನ್ನುವಂತೆ ನಿರಂತರವಾಗಿ ನಡೆದವು.
ಏ. 16ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುರುಮಿಠಕಲ್ ಕ್ಷೇತ್ರ ಹಾಗೂ ಚಿತ್ತಾಪುರದಲ್ಲಿ ಏ. 17ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುಮಿಠಕಲ್ ಕ್ಷೇತ್ರ. ಅಫಜಲಪುರ, ಜೇವರ್ಗಿ ಹಾಗೂ ಕಲಬುರಗಿ ನಗರದಲ್ಲಿ ಚುನಾವಣೆ ಪ್ರಚಾರ ಸಭೆಗಳನ್ನು ನಡೆಸಿದರು.
ಚುನಾವಣೆ ಪ್ರಚಾರದ ಬಹಿರಂಗ ಪ್ರಚಾರದ ಕೊನೆ ದಿನವಾದ ಏ. 21ರಂದು ಕಾಂಗ್ರೆಸ್‌ನಿಂದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಕಲಬುರಗಿ ಉತ್ತರ, ಶಹಾಬಾದ ಹಾಗೂ ಕಲಬುರಗಿ ನಗರದಲ್ಲಿ ಚುನಾವಣೆ ಪ್ರಚಾರಸಭೆ ನಡೆಸಿದರು. ಅದೇ ರೀತಿ ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ಬಿಜೆಪಿ ಹಿರಿಯ ನಾಯಕ ಮುರಳೀಧರರಾವ್ ಪ್ರಚಾರ ಸಭೆ ನಡೆಸಿದರಲ್ಲದೇ ಅಭ್ಯರ್ಥಿ ಜತೆ ರೋಡ್ ಶೋ ನಡೆಸಿದರು. ಏ. 23ರಂದು ಈ ಎಲ್ಲ ಪ್ರಚಾರ ಸಭೆಗಳಿಗೆ ಹಾಗೂ ಶೋಗಳಿಗೆ ಉತ್ತರವಾಗಿ ಚುನಾವಣೆ ನಡೆಯಿತು. ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.
ಪ್ರತಿಶತ ಫಲಿತಾಂಶ ಹೆಚ್ಚಳ: ಜಾಧವ್‌ಗೆ ಅನುಕೂಲವೇ?
ಕಲಬುರಗಿ: ಕಳೆದ ಸಲಕ್ಕಿಂತ ಶೇ. 2ರಷ್ಟು ಮತದಾನ ಹೆಚ್ಚಳವಾಗಿರುವುದು ಅದರಲ್ಲೂ ಗ್ರಾಮೀಣ ಭಾಗದ ಮತದಾರರಲ್ಲಿ ಕಂಡು ಬಂದಿರುವ ಉತ್ಸಾಹ ಅವಲೋಕಿಸಿದರೆ ಯಾರಿಗೆ ಅನುಕೂಲವಾಗಬಹುದೆಂಬ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಹೆಚ್ಚಿನ ಶೇಕಡಾವಾರು ಮತದಾನ ಬಿಜೆಪಿ ಅಭ್ಯರ್ಥಿ ಪರ ಅನುಕೂಲವಾಗಬಹುದೇ? ಎನ್ನುವ ನಿಟ್ಟಿನಲ್ಲಿ ಅಂದಾಜಿಸಲಾಗುತ್ತಿದೆ. ವಲಸೆ ಹೋಗಿದ್ದ ಮತದಾರರು ವಾಪಸ್ಸು ಬಂದಿರುವುದು ಜಾಧವ ಪರ ಚಲಾಯಿಸಿರುವುದಾಗಿ ತಿಳಿಸಿದ್ದಾರೆ. ಮುಖ್ಯವಾಗಿ 2014ರಲ್ಲಿ 10 ಲಕ್ಷ ಮತದಾನವಾಗಿತ್ತು. ಈ ಸಲ 19.45 ಲಕ್ಷ ಮತದಾರರಲ್ಲಿ 11 ಲಕ್ಷ 55 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೊಸ ಮತದಾರರ ಒಲವು ಬಿಜೆಪಿ ಕಡೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಧವಗೆ ಸಹಾಯವಾಗುವುದೆಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.