ಮಾತಿನ ಮೋಡಿಗೆ ಮರುಳಾಗದಿರಿ: ಶಾಸಕ ಪಾಟೀಲ
50 ವರ್ಷ ಕಾಂಗ್ರೆಸ್‌ಗೆ ಅಧಿಕಾರ ನೀಡಲು ಜನ ದಡ್ಡರಲ್ಲ
Team Udayavani, Apr 21, 2019, 12:51 PM IST
ಅಫಜಲಪುರ: ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಕೋಲಿ ಸಮಾಜ ಬಾಂಧವರ ಸಭೆ ನಡೆಯಿತು.
ಅಫಜಲಪುರ: ಕಲಬುರಗಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಅಭಿವೃದ್ಧಿ ಹರಿಕಾರ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ
ನೀಡಿ, ಬಿಜೆಪಿಗರ ಮಾತಿನ ಮೋಡಿಗೆ ಮರುಳಾಗದಿರಿ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ನಡೆದ ಕ್ಷೇತ್ರ ವ್ಯಾಪ್ತಿಯ ಕೋಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ನಾಯಕರಾಗಿದ್ದಾರೆ. ಇವರು 48 ವರ್ಷ
ಕಾಲ ಸುದೀರ್ಘ ಸೇವೆ ಮಾಡಿದ್ದಾರೆ. ಅಫಜಲಪುರ ಮತಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಅವರ ಋಣ
ತೀರಿಸುವ ಕಾಲ ಬಂದಿದೆ. ಬೆನ್ನಿಗೆ ಚೂರಿ ಹಾಕಿರುವ ಜಾಧವಗೆ ಸೋಲಿನ ರುಚಿ ತೋರಿಸಬೇಕಿದೆ ಎಂದರು.
ಅಕ್ಕಲಕೋಟ ಶಾಸಕ ಸಿದ್ಧರಾಮ ಮೇತ್ರೆ ಮಾತನಾಡಿ, ಬಿಜೆಪಿಗರು ಕೇವಲ ಜುಮ್ಲಾಬಾಜಿಗಳು.
ಕಿವಿಗೆ ಇಂಪೆನಿಸುವ ಘೋಷಣೆ ಹೇಳುತ್ತಾರೆಯೇ ವಿನಃ ಮಾಡಿ ತೋರಿಸುವುದಿಲ್ಲ. 50ಕ್ಕೂ ಹೆಚ್ಚು
ವರ್ಷ ದೇಶದ ಜನ ಕಾಂಗ್ರೆಸ್ ಕೈಗೆ ಅಧಿಕಾರ ಕೊಡಲು ದಡ್ಡರಲ್ಲ ಎಂದು ಹೇಳಿದರು.
ಸಿಂದಗಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಮಾಜಿ ಕಾಂಗ್ರೆಸ್ ನಾಯಕರೀಗ ಕೈಕೈ ಮಸಿಯುತ್ತಿದ್ದಾರೆ. ಇವರಿಗೆಲ್ಲ ತಪ್ಪಿನ ಅರಿವಾಗಿದೆ. ಬಾಬುರಾವ ಚಿಂಚನಸೂರ ಚಮಚಾ ರಾಜಕಾರಣಿ,
ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಸಿಂದಗಿ ಕ್ಷೇತ್ರಕ್ಕೆ ಬಂದು ಬಿಜೆಪಿ ಅಭ್ಯರ್ಥಿಗೆ ನೀಡಿ ನನ್ನನ್ನು ಸೋಲಿಸುವ ಕೆಲಸ ಮಾಡಿದ್ದಾನೆ. ಇಂತಹವರ ಮಾತಿಗೆ ಮಣೆಹಾಕಬೇಡಿ ಎಂದು ಮನವಿ ಮಾಡಿದರು.
ನೇತೃತ್ವ ವಹಿಸಿದ್ದ ಶಿವಕುಮಾರ ನಾಟೀಕಾರ ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಕೋಲಿ ಸಮಾಜದ ಚಿಂಚನಸೂರ ಅವರನ್ನು ಮುಂದಿಟ್ಟುಕೊಂಡು ಆಟ ಆಡುತ್ತಿದ್ದಾರೆ. ಇವರ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ,
ರಾಜಗೋಪಾಲ ರೆಡ್ಡಿ, ಶರಣಪ್ಪ ಮಾನೆಗಾರ, ಪ್ರಕಾಶ ಜಮಾದಾರ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ, ಹಾಸಿಂಪೀರ್ ವಾಲಿಕಾರ,
ಚಿತ್ರನಟ ಮದನ್ ಪಟೇಲ್, ಮಕ್ಬೂಲ್ ಪಟೇಲ್, ಪಪ್ಪು ಪಟೇಲ್, ದಯಾನಂದ ದೊಡ್ಮನಿ, ರಮೇಶ
ನಾಟೀಕಾರ, ಮತೀನ್ ಪಟೇಲ್, ವಿಠ್ಠಲ ನಾಟಿಕಾರ, ನಾಗೇಶ ಕೊಳ್ಳಿ, ರಾಜು ಉಕ್ಕಲಿ, ಸೈಬಣ್ಣ, ಶಿವಶರಣ ಕೋಬಾಳ, ಲಕ್ಷ್ಮಣ ಹೇರೂರ, ರಾಜೇಂದ್ರ ಸರದಾರ
ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.