ಕಾರ್ಖಾನೆಗಳನ್ನು ಬಂದ್ ಮಾಡಿದ್ದಕ್ಕೆ ಖರ್ಗೆಗೆ ಬೆಂಬಲಿಸಬೇಕೆ?
Team Udayavani, Apr 21, 2019, 4:39 PM IST
ಕಲಬುರಗಿ: ಕಳೆದ ಐದು ದಶಕಗಳಿಂದ ಅಧಿಕಾರದಲ್ಲಿದ್ದರೂ ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡದಿರುವ ಹಾಗೂ ಇರುವ ಕಾರ್ಖಾನೆಗಳನ್ನು ಮುಚ್ಚಿಸಿದ ಸಲುವಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ಹಾಕಬೇಕೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭಾ ಕ್ಷೇತ್ರದ ಉಸ್ತುವಾರಿ ಎನ್. ರವಿಕುಮಾರ ಪ್ರಶ್ನಿಸಿದರು.
ಎಂಎಸ್‌ಕೆ ಮಿಲ್, ಕುರುಕುಂಟಾ ಸಿಮೆಂಟ್ ಕಾರ್ಖಾನೆಗಳು ಬಂದ್ ಆದವು. ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದರು. ಹೊಸ ಕಾರ್ಖಾನೆ ಸ್ಥಾಪನೆ ಮಾಡದಿರುವ ಕುರಿತು ಒತ್ತಟ್ಟಿಗಿರಲಿ. ಇದ್ದ ಕಾರ್ಖಾನೆಗಳನ್ನು ಉಳಿಸಿಕೊಳ್ಳಲಿಕ್ಕಾಗಲಿಲ್ಲ. ಇದೇನಾ? ಖರ್ಗೆ ಅಭಿವೃದ್ಧಿ. ಹಿರಿಯ ನಾಯಕರನ್ನು ಹೊರಗಿಟ್ಟು ಮಗನನ್ನು ಮಂತ್ರಿ ಮಾಡಿದ್ದಕ್ಕೆ, ಕಾರ್ಖಾನೆಗಳು ಬಂದ್ ಆಗಿದ್ದಕ್ಕೆ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ಖರ್ಗೆ ಅವರನ್ನು ಬೆಂಬಲಿಸಬೇಕೆ? ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಮಾಡಲಾಗಿದೆ ಎಂದು ಪ್ರಚಾರಸಭೆಗಳಲ್ಲಿ ಕಾಂಗ್ರೆಸ್ ಹೇಳುತ್ತಾ ಬರುತ್ತಿದೆ. ಒಂದು ವೇಳೆ ಈ ಭಾಗದ ಬಗ್ಗೆ ಕಳಕಳಿ ಹೊಂದಿ ಅಭಿವೃದ್ಧಿ ಮಾಡಿದ್ದೇ ಆದರೆ ಏಕೆ? ಈ ಭಾಗ ಹಿಂದುಳಿಯಿತು. ಇದೆಲ್ಲ ಮತದಾರರಿಗೆ ಮನವರಿಕೆ ಆಗಿದ್ದರಿಂದ ಒಂದೊಂದು ಸಮುದಾಯ ದೂರಾಗಿ ಮತಬ್ಯಾಂಕ್‌ಗೆ ಹೊಡೆತ ಬಿದ್ದಿದ್ದರಿಂದ ನಿದ್ರೆಯಿಲ್ಲದೇ ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ. ಮಠ ಮಂದಿರಗಳಿಗೆ ಸುತ್ತು ಹಾಕುತ್ತಿದ್ದಾರೆ. ಸಮುದಾಯಗಳ ಸಮಾವೇಶ ನಡೆಸುತ್ತಿದ್ದಾರೆ. ಖರ್ಗೆ ಜೀವನದಲ್ಲಿ ಇಷ್ಟೊಂದು ಗಂಭೀರವಾಗಿ ಒಮ್ಮೆಯೂ ಚುನಾವಣೆ ಎದುರಿಸಿಲ್ಲ ಎಂದರು.
ವೀರಶೈವ ಲಿಂಗಾಯತ ಸಮುದಾಯ ಬಗ್ಗೆ ಒಮ್ಮೆಯೂ ತಲೆಕೆಡಿಸಿಕೊಂಡಿಲ್ಲ. ಧರ್ಮದ ಹೋರಾಟ ನಡೆದಾಗ ಒಂದು ವಾಕ್ಯದ ಹೇಳಿಕೆ ನೀಡಿಲ್ಲ. ಚುನಾವಣೆ ಬಂದಾಗ ಸಮಾವೇಶದ ನೆನಪಾಗುತ್ತದೆಯೇ? ಅದೇ ರೀತಿ ಇತರ ಸಮುದಾಯಗಳ ಸಭೆ ನಡೆಸಿದ್ದಾರೆ. ಇದನ್ನೆಲ್ಲ ಮತದಾರರು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು,
ತಕ್ಕಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದು, 23ರಂದು ಸೂಕ್ತ ನಿರ್ಧಾರ ಕೈಗೊಂಡು ಸೋಲಿನ ರುಚಿ ತೋರಿಸುತ್ತಾರೆ ಎಂದರು.
ಕೋಲಿ ಸಮಾಜದ ಎಸ್‌ಟಿಗೆ ಸೇರಿಸಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. 10 ವರ್ಷಗಳ ಕಾಲ ಇದ್ದ ಯುಪಿಎ ಸರ್ಕಾರದಲ್ಲೇಕೆ ಕೋಲಿ ಸಮಾಜ ಎಸ್‌ಟಿಗೆ
ಸೇರಿಸಲಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್
ಸರ್ಕಾರ ಇತ್ತು. ಆವಾಗ ಮಲ್ಲಿಕಾರ್ಜುನ ಖರ್ಗೆ ಮಲಗಿಕೊಂಡಿದ್ದರೇ? ಈಗ ಎಸ್‌ಟಿಗೆ ಸೇರಿಸಲು
ಪ್ರಯತ್ನಿಸಲಾಗುವುದು ಎಂದು ಹೇಳುತ್ತಿದ್ದಾರೆ. ಕೋಲಿ ಸಮಾಜದ ಚಿಂಚನಸೂರ ಹೊರಗಡೆ ಹಾಕುವಾಗ ಸಮಾಜ ನೆನಪಿಗೆ ಬರಲಿಲ್ಲವೇ? ಸೋಲಿನ ಭಯದಿಂದ ವಿವಿಧ ಸಮುದಾಯ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಸೋಲಿನ ಭಯದಿಂದ ಎಧ್ದೋ ಬಿಧ್ದೋ ಓಡಾಡುತ್ತಿದ್ದಾರೆ. ಇದಕ್ಕೆಲ್ಲ ಮತದಾರ ತಕ್ಕ ಉತ್ತರ ನೀಡುತ್ತಾನೆ.
ಎನ್. ರವಿಕುಮಾರ,
ಬಿಜೆಪಿ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.