ಅವಾಂತರ ಸೃಷ್ಟಿಸಿದ ಗಾಳಿ-ಮಳೆ
•ನೆಲಕ್ಕುರುಳಿದ ವಿದ್ಯುತ್ ಕಂಬ-ಮರಗಳು•ಬಡಾವಣೆಗಳಲ್ಲಿ ನೀರು ನಿಂತು ತೊಂದರೆ
Team Udayavani, Jun 3, 2019, 9:57 AM IST
ಕಲಬುರಗಿ: ಸರ್ದಾರ ವಲ್ಲಭ ಭಾಯಿ ವೃತ್ತದಿಂದ ಜಗತ್ ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಬಾಗಿರುವ ವಿದ್ಯುತ್ ಕಂಬದ ದುರಸ್ತಿ ಕಾರ್ಯಾಚರಣೆಯಲ್ಲಿ ಜೆಸ್ಕಾಂ ಸಿಬ್ಬಂದಿ ತೊಡಗಿದ್ದರು.
ಕಲಬುರಗಿ: ನಗರದಲ್ಲಿ ಎರಡನೇ ದಿನ ಸುರಿದ ಮಳೆ ಅವಾಂತರ ಸೃಷ್ಟಿಸಿತ್ತು. ರವಿವಾರ ಮಧ್ಯಾಹ್ನದ ವೇಳೆ ಮಳೆ ಆರಂಭಕ್ಕೂ ಮುನ್ನ ಜೋರಾದ ಗಾಳಿ ಬೀಸಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಎರಡು ಮರಗಳು, ಕಂಬಗಳು ನೆಲಕ್ಕುರುಳಿದವು.
ಶನಿವಾರ ತಡರಾತ್ರಿ ಅಲ್ಲಿಲ್ಲಿ ತುಂತುರು ಮಳೆಯಾಗಿತ್ತು. ರವಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಗರಾದ್ಯಂತ ಅರ್ಧ ಗಂಟೆ ಕಾಲ ತುರುಸಿನ ಮಳೆ ಸುರಿಯಿತು. ಇದರಿಂದ ಡಾ| ಎಸ್.ಎಂ. ಪಂಡಿತ ರಂಗಮಂದಿರದ ಆವರಣದಲ್ಲಿ ಎರಡು ಮರಗಳು ಧರೆಗುರುಳಿದವು. ಮರಗಳ ಕೆಳಗೆ ಕೆಲ ಬೈಕ್‌ಗಳನ್ನು ನಿಲ್ಲಿಸಲಾಗಿತ್ತು. ಹರಸಾಹಸ ಪಟ್ಟು ಮಾಲೀಕರು ತಮ್ಮ ಬೈಕ್‌ಗಳನ್ನು ಹೊರ ತೆಗೆದುಕೊಂಡರು.
ಸರ್ದಾರ ವಲ್ಲಭಭಾಯಿ ವೃತ್ತದಿಂದ ಜಗತ್ ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ವಿದ್ಯುತ್ ಕಂಬವೊಂದು ಬಾಗಿದ್ದರಿಂದ ಕೆಲ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು. ತಕ್ಷಣವೇ ಸ್ಥಳಕ್ಕೆ ಬಂದ ಜೆಸ್ಕಾಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಂಬವನ್ನು ಮೇಲೆತ್ತುವ ಕೆಲಸ ಮಾಡಿದರು.
ಅಪ್ಪನ ಕೆರೆ ರಸ್ತೆಯ ಮಹಾನಗರ ಪಾಲಿಕೆ ಕಚೇರಿ ಸಮೀಪವೂ ಮರ ಹಾಗೂ ವಿದ್ಯುತ್ ಕಂಬವೊಂದು ಅರ್ಧಕ್ಕೆ ಮುರಿದು ರಸ್ತೆಗೆ ಬಾಗಿದ್ದವು. ಹೀಗಾಗಿ ಇಲ್ಲಿಯೂ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ನಂತರದಲ್ಲಿ ಜೆಸ್ಕಾಂ ಅಧಿಕಾರಿಗಳು ಕಂಬ ಹಾಗೂ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಸರ್ದಾರ ವಲ್ಲಭ ಭಾಯಿ ವೃತ್ತದ ಬಳಿ ಭಾರಿ ಗಾಳಿಗೆ ಬ್ಯಾರಿಕೇಡ್‌ಗಳ ರಸ್ತೆ ಉರುಳಿ ಬಿದ್ದವು. ಸಾರ್ವಜನಿಕರ ಸಹಾಯದೊಂದಿಗೆ ಸಂಚಾರಿ ಪೊಲೀಸರು ಬ್ಯಾರಿಕೇಡ್‌ಗಳ ಮೇಲೆತ್ತಿಟ್ಟರು.
ಮಕ್ಕಳ ಸಂಭ್ರಮ: ಮಳೆಗೂ ಮುನ್ನ ಎಂದಿನಂತೆ ರವಿವಾರವೂ 41.1 ಡಿಗ್ರಿ ತಾಪಮಾನ ದಾಖಲಾಗಿ, ಬಿಸಿಲಿನ ಝಳ ನಾಗರಿಕರನ್ನು ಹೈರಾಣಾಗಿಸಿತ್ತು. ಮಧ್ಯಾಹ್ನ ಏಕಾಏಕಿ ಬಿರುಗಾಳಿ ಬೀಸತೊಡಗಿತ್ತು. ಬಳಿಕ ಗುಡುಗು ಸಹಿತ ಮಳೆ ಜೋರಾದ ಮಳೆ ಸುರಿಯಿತು. ಇದರಿಂದಾಗಿ ಹಲವು ಬಡಾವಣೆಗಳ ರಸ್ತೆಯಲ್ಲಿ ನೀರು ಹರಿದವು. ರಸ್ತೆಯಲ್ಲಿ ಹರಿದು ನಿಂತ ನೀರಿನಲ್ಲಿ ಮಕ್ಕಳು ಆಟವಾಡಿ ಸಂಭ್ರಮಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.