ಪ್ಲಾಸ್ಟಿಕ್ ಮುಕ್ತ ಜಿಲ್ಲೆಗೆ ಕೈ ಜೋಡಿಸಿ
ಸಾವಿರ ಸಸಿ ನೆಡುವ ಸಂಕಲ್ಪಕ್ಕೆ ಚಾಲನೆ •ಜಲ ಸಂರಕ್ಷಣೆ ಜಾಗೃತಿ ಮೂಡಿಸಲು ಮುಂದಾಗಿ
Team Udayavani, Jul 31, 2019, 9:59 AM IST
ಕಲಬುರಗಿ: ಗೋಲ್ಡ್ ಹಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿ-99 ಸಮಾಜಮುಖೀ ಚಿಂತನಾಕೂಟ ಹಾಗೂ ಆರನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಉದ್ಘಾಟಿಸಿದರು.
ಕಲಬುರಗಿ: ರಾಷ್ಟ್ರೀಯ ಹಸಿರು ಪೀಠ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಎನ್‌ಜಿಟಿಯವರು ಸಭೆ ನಡೆಸಿದ್ದರು. ಆದ್ದರಿಂದ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ಸಂಪೂರ್ಣ ಪ್ಲಾಸ್ಟಿಕ್‌ಮುಕ್ತ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಕರೆ ನೀಡಿದರು.
ನಗರದ ಗೋಲ್ಡ್ ಹಬ್ ಸಭಾಂಗಣದಲ್ಲಿ ಸಂಜೆ ಹಮ್ಮಿಕೊಂಡಿದ್ದ ಜಿ-99 ಸಮಾಜಮುಖೀ ಚಿಂತನಾಕೂಟ ಹಾಗೂ 6ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ, ಶಿಕ್ಷಣ ಇನ್ನಿತರ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಜಿ-99 ತಂಡದ ಸದಸ್ಯರು ಮುಂದಿನ ದಿನಗಳಲ್ಲಿ ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಲ್ಲಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಲಿ ಎಂದು ಹೇಳಿದರು.
ತುರ್ತು ಹೊತ್ತಿನಲ್ಲಿ ರಕ್ತದಾನ, ಸಂಕಷ್ಟದಲ್ಲಿರುವವರಿಗೆ ನೆರವು, ಆರೋಗ್ಯ ಶಿಬಿರ ಹೀಗೆ ಹಲವು ಕೆಲಸಗಳನ್ನು ಈ ಸದಸ್ಯರು ಮಾಡಿಕೊಂಡು ಬರುತ್ತಿರುವುದು ಮಾದರಿಯಾಗಿದೆ. ಈ ಕೆಲಸ ಇನ್ನಿತರರಿಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.
ಸೊನ್ನದ ತ್ರಿವಿಧ ದಾಸೋಹ ಮಠದ ಪೂಜ್ಯ ಡಾ| ಶಿವಾನಂದ ಸ್ವಾಮೀಜಿ, ಮುಗುಳನಾಗಾಂವ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿ, ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಜಿ-99 ಕುಟುಂಬದ ಸದಸ್ಯರ ಕಾರ್ಯ ಅಮೋಘವಾಗಿದೆ ಎಂದು ಶ್ಲಾಘಿಸಿದರು.
ಸಾವಿರ ಸಸಿ ನೆಡುವ ಸಂಕಲ್ಪಕ್ಕೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ ಚಾಲನೆ ನೀಡಿ, ಜಿ-99 ಚಿಂತನಾ ಕೂಟದ ಸದಸ್ಯರಿಗೆ ಹಾಗೂ ಅತಿಥಿಗಳಿಗೆ ಸಸಿಗಳನು ವಿತರಿಸಿದರು. ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮಾತನಾಡಿದರು. .
ಡಾ| ಪಿ.ಎಂ. ಬಿರಾದಾರ, ಡಾ| ಮಹಾದೇವಿ ಮಾಲಕರೆಡ್ಡಿ, ಡಾ| ಬಾಬುರಾವ್ ಹುಡಗಿಕರ್, ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ| ಎಸ್.ಬಿ. ಕಾಮರೆಡ್ಡಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸಿ.ಎಚ್. ಕಮಕೇರಿ, ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿ ರಾಘವೇಂದ್ರ ಮೈಲಾಪುರ, ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಪತ್ರಕರ್ತ ದೇವಯ್ಯ ಗುತ್ತೇದಾರ ಮುಖ್ಯಅತಿಥಿಗಳಾಗಿದ್ದರು.
ಸಮಾಜಮುಖೀ ಚಿಂತನಾಕೂಟದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತ ಡಾ| ಅಭಿಷೇಕ ಅನಿಲಕುಮಾರ ರಟಕಲ್, ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ| ಅರುಣಕುಮಾರ ಪಾಟೀಲ, ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ವೈದ್ಯರಾದ ಡಾ| ಜಗನ್ನಾಥ ಬಿಜಾಪುರೆ, ಡಾ| ವಿರೇಶ ಪಾಟೀಲ, ಡಾ| ಕೈಲಾಶ ಗಾಲೆ, ಬೈಕ್ ಮೇಲೆ ವಿಶ್ವ ಸುತ್ತಿದ ಮಂಜುನಾಥ ಚಿಕ್ಕಯ್ಯ, ಕಿಂಗ್ ರಿಚರ್ಡ್, ಹೋಮಿಯೋಪತಿಕ್ ತಜ್ಞೆ ಡಾ| ವಿಜಯಲಕ್ಷಿ ್ಮೕ ಬಿ.ಎಂ, ಎಎಸ್‌ಐ ಯಶೋಧಾ ಕಟಕೆ ಹಾಗೂ ವಿಶೇಷ ಆಹ್ವಾನಿತರಾಗಿದ್ದ ವಿಜಯಪುರದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಎಂ.ಸುಂದರ ಅವರನ್ನು ಸನ್ಮಾನಿಸಿಸಲಾಯಿತು.
ಜಿ-99 ಮುಖಂಡ ಹಾಗೂ ಎಚ್ಕೆಸಿಸಿ ಉಪಾಧ್ಯಕ್ಷ ಶರಣು ಪಪ್ಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತೀಕ್ಷಾ ಬಿ. ಯಡ್ರಾಮಿ ಪ್ರಾರ್ಥನಾ ನೃತ್ಯ ಮಾಡಿದರು. ರಮೇಶ ಕಡಾಳೆ ಸ್ವಾಗತಿಸಿದರು. ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸನ್ಮಾನಿತರನ್ನು ಪರಿಚಯಿಸಿದರು. ಸಂಗೀತಾ ಕಂತಿ ನಿರೂಪಿಸಿದರು.
ಸಂತೋಷ ಪಾಟೀಲ, ಶಿವರಾಜ ಸೂಗೂರ, ಶರಣು ಮತ್ತಿಮಡು, ಶಂಭುಲಿಂಗಯ್ಯ ರುದ್ರಸ್ವಾಮಿ ಮಠ, ಅರುಣಕುಮಾರ ನಾವದಗಿ, ಶಿವರಾಜ ಖೂಬಾ, ರಮೇಶ ಸ್ವಾಮಿ, ಸಿದ್ಧರಾಮೇಶ್ವರ ಪಾಟೀಲ, ಚನ್ನು ಖಂಡೇರಾವ್, ರಾಜು ನಾಗೂರ, ಶರಣಸಪ್ಪ ಹಿರೇಗೌಡರ, ಪಾವಲಿಂಗಯ್ಯ ಸ್ವಾಮಿ, ಅಮರನಾಥ ಪಪ್ಪಾ, ಶರಣು ಭಾಗೋಡಿ,ಸವರಾಜ ಹೆಬ್ಟಾಳ, ನಾಗರಾಜ ಸರಸಂಬಿ, ಸವರಾಜ ಘತ್ತರಗಿ, ವೀರೇಶ ಪುಣ್ಯಶೆಟ್ಟಿ, ವಿನೋಧ ದುಂಪಾಕರ್, ಶರಣಸಪ್ಪ ಹಳಿಜೋಳ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.