ಸ್ವಚ್ಛತೆಗಾಗಿ ಅಧಿಕಾರ ಚಲಾಯಿಸಿ
ತೊಂದರೆ ಕೊಟ್ಟವರ ವಿರುದ್ಧ ಕೇಸ್ ಹಾಕಿ•ಸ್ವಚ್ಛತೆಯಲ್ಲಿ ಮೈಸೂರು ಹಿಂದಿಕ್ಕಿದ ಇಂದೋರ್
Team Udayavani, Sep 13, 2019, 10:57 AM IST
ಕಲಬುರಗಿ: ಮಹಾನಗರ ಪಾಲಿಕೆ ಟೌನ್‌ಹಾಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಸ್ವಚ್ಛ ಸರ್ವೇಕ್ಷಣ-2020' ಕಾರ್ಯಕ್ರಮದ ವಿಭಾಗೀಯ ಮಟ್ಟದ ಕಾರ್ಯಾಗಾರದಲ್ಲಿ ನ್ಯಾ| ಸುಭಾಷ ಅಡಿ ಮಾತನಾಡಿದರು.
ಕಲಬುರಗಿ: ಸರ್ಕಾರಿ ಅಧಿಕಾರಿಗಳು ಸಮಾಜ ಸೇವಕರು. ಸಮಾಜ ಸೇವೆಯಲ್ಲಿದ್ದಾಗ ಯಾರಿಗೂ ಹೆದರಬೇಕಾದ ಅವಶ್ಯಕತೆ ಇಲ್ಲ. ಅದರಲ್ಲೂ ಪರಿಸರ ಸ್ವಚ್ಛತೆ ವಿಷಯದಲ್ಲಿ ಯಾರಿಗೂ ಮಣಿಯಬೇಕಾಗಿಲ್ಲ. ಕಾನೂನುದತ್ತವಾಗಿ ಬಂದಿರುವ ಅಧಿಕಾರವನ್ನು ಯಾವುದೇ ಹಿಂಜರಿಕೆ ಇಲ್ಲದೇ ಚಲಾಯಿಸಿ.
ಇದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ರಾಜ್ಯಾಧ್ಯಕ್ಷ ನ್ಯಾ. ಸುಭಾಷ ಅಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಪರಿ.
ಮಹಾನಗರ ಪಾಲಿಕೆಯ ಟೌನ್‌ಹಾಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸ್ವಚ್ಛ ಸರ್ವೇಕ್ಷಣ-2020’ ಕಾರ್ಯಕ್ರಮ ಕುರಿತ ಕಲಬುರಗಿ ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ ಸ್ವಚ್ಛ ಸರ್ವೇಕ್ಷಣ ಕಾರ್ಯ 2020ರ ಮಾರ್ಚ್ ವರೆಗೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ತಡೆಗಟ್ಟುವಲ್ಲಿ, ಘನತ್ಯಾಜ್ಯ ಮತ್ತು ಜೈವಿಕ ತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಕೈಗೊಂಡ ಕೆಲಸ-ಕಾರ್ಯಗಳ ಆಧಾರದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರ್‍ಯಾಂಕಿಂಗ್ ನೀಡಲಿದೆ. ಈ ಹಿಂದೆ ಮೈಸೂರು ಪ್ರಥಮ ಸ್ಥಾನದಲ್ಲಿತ್ತು. ಪ್ರಸ್ತುತ ಇಂದೋರ್ ದೇಶದಲ್ಲೇ ಸ್ವಚ್ಛ ನಗರವಾಗಿದೆ ಎಂದರು.
ಕೇವಲ ರ್‍ಯಾಂಕಿಂಗ್ ಪಡೆಯಲು ನಗರ ಸ್ವಚ್ಛತೆ ಕಾರ್ಯ ಮಾಡುವುದು ಬೇಡ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಅನಧಿಕೃತ ಬಡಾವಣೆಯಲ್ಲಿ ಉತ್ಪತ್ತಿಯಾಗುವ ಕಸಕ್ಕೆ ದಂಡ ವಿಧಿಸಿ. ಮಾಂಸದಂಗಡಿಗಳು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದೇ ಇದ್ದರೆ ಅವರಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಸಿ. ಪ್ಲಾಸ್ಟಿಕ್ ಬಳಕೆಗೆ ಯಾರಿಗೂ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ. ಪ್ಲಾಸ್ಟಿಕ್ ಕಂಡರೆ ನಿರಂತರವಾಗಿ ದಂಡ ಹಾಕಿ. ಕನಿಷ್ಠ ಎರಡು ಬಾರಿ ದಂಡ ಹಾಕಿದರೆ, ಮೂರನೇ ಬಾರಿ ಬಳಕೆ ನಿಲ್ಲುತ್ತದೆ. ಯಾವುದೇ ಅಂಗಡಿಗಳಲ್ಲಿ ಪ್ಯಾಸ್ಟಿಕ್ ಮಾರಾಟ ಮಾಡುತ್ತಿದ್ದರೆ, ಅಂಗಡಿ ಪರವಾನಗಿ ರದ್ದು ಮಾಡುವ ನೋಟಿಸ್ ಕೊಡಿ ಎಂದು ಸೂಚಿಸಿದರು. ಸ್ವಚ್ಛ ಕಾರ್ಯದ ಅನುಷ್ಠಾನ ಬಗ್ಗೆ ಏನೇ ಅಡೆ-ತಡೆಗಳು ಇದ್ದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ. ಅಲ್ಲದೇ, ಸ್ಥಳೀಯ ಸಂಸ್ಥೆಗಳು ತನ್ನ ವ್ಯಾಪ್ತಿಯ ಸರ್ಕಾರಗಳು ಇದ್ದಂತೆ. ಬೈಲಾಗಳನ್ನು ತಿದ್ದುಪಡಿ ಮಾಡಿಕೊಂಡು ಸರಿಯಾಗಿ ಅನುಷ್ಠಾನ ಮಾಡಿಕೊಳ್ಳುವ ಅವಕಾಶವೂ ಇದೆ ಎಂದು ನ್ಯಾ.ಸುಭಾಷ ಅಡಿ ಅಧಿಕಾರಿಗಳಿಗೆ ಹೇಳಿದರು. ಈ ಸಮಯದಲ್ಲಿ ಕೆಲ ಹಂತದಲ್ಲಿ ಸಮಸ್ಯೆಗಳು ಇದ್ದರೆ ನಮ್ಮ ಗಮನಕ್ಕೂ ತನ್ನಿ. ನಾವು ನಿಮ್ಮೊಂದಿಗೆ ಇರುತ್ತವೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ಭರವಸೆ ನೀಡಿದರು.
ಪೌರ ಕಾರ್ಮಿಕರ ಸಮಸ್ಯೆ: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆ ಇದೆ ಮತ್ತು ಅನಧಿಕೃತ ಕಟ್ಟಡ ತಡೆಯಲು ಹೋದಾಗ ಒತ್ತಡಗಳು ಬರುತ್ತಿವೆ ಎಂದು ಬಹುತೇಕ ಪಾಲಿಕೆಗಳ ಮುಖ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಜಿಪಂ ಸಿಇಒ ಡಾ| ಪಿ.ರಾಜಾ, ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತ ರಾಹುಲ್ ಪಾಂಡ್ವೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸೋಮಪ್ಪ ಕಡಕೋಳ, ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮುಖ್ಯ ಅಭಿಯಂತ ದಿನೇಶರಾವ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.