ಶಿಕ್ಷಕರ ಬಡ್ತಿ: ಅಧಿಕಾರಿಗಳ ಎಡವಟ್ಟು
Team Udayavani, Oct 4, 2019, 11:10 AM IST
ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಆಯುಕ್ತಾಲಯ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆ ಬಡ್ತಿ ವಿಷಯದಲ್ಲಿ ಅಧಿಕಾರಿಗಳ ಎಡವಟ್ಟು ಬಯಲಾಗಿದೆ.
ಸಿಇಟಿ ರ್‍ಯಾಂಕಿಂಗ್‌ನಲ್ಲಿ ಪಡೆದಿದ್ದಕ್ಕಿಂತ ಹೆಚ್ಚಿನ ಅಂಕವನ್ನು ಅಧಿಕಾರಿಗಳೇ ನೀಡಿದ್ದಾರೆ. ಕಲಬುರಗಿ, ರಾಯಚೂರು, ಬೀದರ, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಒಟ್ಟು 357 ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಹುದ್ದೆಗಳಿಗೆ ಮುಂಬಡ್ತಿಗೆ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆ ಗುರುವಾರ ನಡೆಯಿತು. ಆದರೆ, ಮೆರಿಟ್ ಅಂಕಗಳಲ್ಲಿ ಲೋಪ-ದೋಷಗಳಾಗಿವೆ. ಕಡಿಮೆ ಮೆರಿಟ್ ಹೊಂದಿದವರಿಗೆ ಹೆಚ್ಚಿನ ಅಂಕ ತೋರಿಸಿ ಮುಂಬಡ್ತಿ ನೀಡಲಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕೆಲ ಶಿಕ್ಷಕರು ಕೌನ್ಸೆಲಿಂಗ್ ಪ್ರಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮುಂಬಡ್ತಿ ಪಟ್ಟಿಯಲ್ಲಿರುವ ಒಂಭತ್ತು ಜನ ಶಿಕ್ಷಕರ 2003-04ರ ಸಿಇಟಿ ರ್‍ಯಾಂಕಿಂಗ್ ಅಂಕಕ್ಕೂ ಮತ್ತು ಬಡ್ತಿ ಮೆರಿಟ್‌ಗೂ ತಾಳೆ ಆಗುತ್ತಿಲ್ಲ. ಸಿಇಟಿ ರ್‍ಯಾಂಕಿಂಗ್‌ನಲ್ಲಿ 57.79ರಷ್ಟು ಅಂಕ ಪಡೆದಿದ್ದರೆ, ಮೆರಿಟ್ ಪಟ್ಟಿಯಲ್ಲಿ ಶೇ.80 ಎಂದು ತೋರಿಸಲಾಗಿದೆ.
ಅದೇ ರೀತಿ ಉಳಿದ ಶಿಕ್ಷಕರ ರ್‍ಯಾಂಕಿಂಗ್ ಅಂಕಗಳು ತಪ್ಪಾಗಿವೆ. ಇದರಿಂದ ನೈಜವಾಗಿ ಬಡ್ತಿಗೆ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಮೋಸವಾಗಿದೆ ಎಂದು ನೊಂದ ಶಿಕ್ಷಕರು ದೂರಿದರು. ಎರಡು ತಿಂಗಳ ಹಿಂದೆಯೇ ಬಡ್ತಿ ಪಟ್ಟಿಯಲ್ಲಿನ ಲೋಪಗಳನ್ನು ಗಮನಿಸಿ ಸರಿ ಪಡಿಸಬೇಕು. ಅರ್ಹ ಶಿಕ್ಷಕರ ಹೆಸರನ್ನು ಪಟ್ಟಿಯಲ್ಲಿ ಸೇರಿಸಬೇಕೆಂದು ಡಿಡಿಪಿಐ ಅವರಿಗೆ ಒತ್ತಾಯಿಸಲಾಗಿತ್ತು.
ಸರಿಪಡಿಸದೆ ಅದೇ ಪಟ್ಟಿ ಮುಂದಿಟ್ಟುಕೊಂಡು ಬಡ್ತಿಗೆ ಕೌನ್ಸೆಲಿಂಗ್ ನಡೆಸುತ್ತಿರುವುದು ಸರಿಯಲ್ಲ. ಇದಕ್ಕೆಲ್ಲ ಸ್ಥಳೀಯ ಡಿಡಿಪಿಐಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಕೆಲ ಶಿಕ್ಷಕರ ಸಿಇಟಿ ರ್‍ಯಾಂಕಿಂಗ್ ಅಂಕಗಳು ನಮಗೆ ಗೊತ್ತಿರುವುದರಿಂದ ಮುಂಬಡ್ತಿಯ ಲೋಪ-ದೋಷಗಳು ಬೆಳಕಿಗೆ ಬಂದಿವೆ ಎಂದು ರಾಯಚೂರಿನ ಶಿಕ್ಷಕರು ತಮ್ಮ ಆಳಲು ತೋಡಿಕೊಂಡರು.
ಹೆಚ್ಚಿನ ಅಂಕ ಕೊಟ್ರಾ!: ಆಶ್ಚರ್ಯವೆಂದರೆ ಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿ ಶಿಕ್ಷಕರೊಬ್ಬರಿಗೆ ಸಿಇಟಿ ರ್‍ಯಾಂಕಿಂಗ್‌ನ ಮೂಲ ಅಂಕಕ್ಕಿಂತ ಹೆಚ್ಚಿನ ಅಂಕ ಕೊಟ್ಟಿರುವುದು ಅಧಿಕಾರಿಗಳ ಎಡವಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ. ಸಿಇಟಿ ರ್‍ಯಾಂಕಿಂಗ್‌ನಲ್ಲಿ 61.39 ಅಂಕಗಳಿವೆ. ಆದರೆ, ಜೇಷ್ಠತಾ ಪಟ್ಟಿಯಲ್ಲಿ 65 ಅಂಕಗಳನ್ನು ತೋರಿಸಲಾಗಿದೆ. ನನಗೆ ಹೆಚ್ಚಿನ ಅಂಕ ಬೇಡ. ನಾನು ಪಡೆದ ಅಂಕ ಕೊಡಿ ಸಾಕು ಎಂದು ಆ ಶಿಕ್ಷಕ ಐದು ತಿಂಗಳ ಹಿಂದೆ ಬಿಇಒಗೆ ಮನವಿ ಸಲ್ಲಿಸಿದ್ದರೂ, ಅದು ಸರಿಯಾಗಿಲ್ಲ. ವಿಷಯವನ್ನು ಗುರುವಾರ ಆಯುಕ್ತರ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳ ಚಮತ್ಕಾರ ಕಂಡು ಆಯುಕ್ತರು ನಕ್ಕು ಸುಮ್ಮನಾದರು. ಅಧಿಕಾರಿಗಳು ಮಾಡಿದ ತಪ್ಪು ನನ್ನ ಕೆಲಸಕ್ಕೆ ತೊಂದರೆಯಾಗಲಿದೆ ಎಂದಾಗ, ಲೋಪ ಸರಿಪಡಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಶಿಕ್ಷಕರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.