1.20 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
•ಕೃಷಿ ಇಲಾಖೆಯಿಂದ ಅಗತ್ಯ ಬೀಜ ದಾಸ್ತಾನು•ಅತಿ ಹೆಚ್ಚು ತೊಗರಿ ಬಿತ್ತನೆ ನಿರೀಕ್ಷೆ
Team Udayavani, Jun 18, 2019, 2:25 PM IST
ಚಿತ್ತಾಪುರ: ಮುಂಗಾರು ಹಂಗಾಮು ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವ ರೈತ.
ಚಿತ್ತಾಪುರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 1.20 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಇಟ್ಟು ಕೊಂಡಿದೆ.
ತೊಗರಿ 89,300 ಹೆಕ್ಟೇರ್, ಹೆಸರು13,000 ಹೆಕ್ಟೇರ್, ಉದ್ದು 7,000 ಹೆಕ್ಟೇರ್, ಹತ್ತಿ 3,000 ಹೆಕ್ಟೇರ್, ಸಜ್ಜೆ 1,900 ಹೆಕ್ಟೇರ್, ಭತ್ತ 85 ಹೆಕ್ಟೇರ್, ಸೂರ್ಯಕಾಂತಿ 1,500 ಹೆಕ್ಟೇರ್, ಔಡಲ 15 ಹೆಕ್ಟೇರ್, ಸೋಯಾಬೀನ್1,800 ಹೆಕ್ಟೇರ್, ಎಳ್ಳು 1,000 ಹೆಕ್ಟೇರ್ ಬಿತ್ತನೆಯಾಗುವ ಸಾಧ್ಯತೆಯಿದೆ.
ಕೃಷಿ ಇಲಾಖೆ ಅಗತ್ಯ ಬೀಜ ದಾಸ್ತಾನು ಮಾಡಿಕೊಂಡಿದೆ. ಬಿತ್ತನೆಗಾಗಿ ರೈತರು ಮಳೆ ನಿರೀಕ್ಷೆಯಲ್ಲಿದ್ದಾರೆ.
ಕಳೆದ ವರ್ಷ ಮಳೆ ಅಭಾವದಿಂದ ಹತ್ತಿ ಬಿತ್ತನೆಯಲ್ಲಿ ಹಿನ್ನಡೆಯಾಗಿತ್ತು. ಕಳೆದ ವರ್ಷ 91 ಸಾವಿರ ಹೆಕ್ಟೇರ್ ಭೂಮಿಯಲ್ಲಿ 85 ಹೆಕ್ಟೇರ್‌ನಷ್ಟು ಭತ್ತ, 1900 ಹೆಕ್ಟೇರ್ ಸಜ್ಜೆ, 13000 ಹೆಕ್ಟೇರ್ ಹೆಸರು, 72800 ಹೆಕ್ಟೇರ್ ತೊಗರಿ, 7000 ಹೆಕ್ಟೇರ್ ಉದ್ದು, 1500 ಹೆಕ್ಟೇರ್ ಸೂರ್ಯಕಾಂತಿ, 30 ಹೆಕ್ಟೇರ್ ನವಣೆ ಹಾಗೂ 15 ಹೆಕ್ಟೇರ್ ಔಡಲ ಬಿತ್ತನೆ ಮಾಡಲಾಗಿತ್ತು. ಆದರೆ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಹೆಸರು, ಉದ್ದು ಬಿತ್ತನೆ ಹೆಚ್ಚಳವಾಗುವ ಸಾಧ್ಯತೆ ಇದೆ.
130 ಕ್ವಿಂಟಲ್ ತೊಗರಿ ಬೀಜ, 04 ತಳಿ ಭತ್ತವನ್ನು ರಾಷ್ಟ್ರೀಯ ಮತ್ತು ರಾಜ್ಯ ಬೀಜ ನಿಗಮದಿಂದ ಸಂಗ್ರಹಿಸಿದೆ. 108 ಕ್ವಿಂಟಲ್ ಟಿಎಸ್3ಆರ್ ತಳಿ ತೊಗರಿ, 30 ಕ್ವಿಂಟಲ್ ಜಿಆರ್‌ಬಿ 811 ತಳಿ ತೊಗರಿ, 80 ಬಿಜಿಎಸ್ ತಳಿ ಹೆಸರು, 20 ಕ್ವಿಂಟಲ್ ಸಜ್ಜೆ, 10 ಕ್ವಿಂಟಲ್ ಸೂರ್ಯಕಾಂತಿ, 200 ಕ್ವೀಂಟಲ್ ಸೋಯಾಬಿನ್, 30 ಕ್ವಿಂಟಲ್ ಉದ್ದು, 30 ಕ್ವಿಂಟಲ್ ಭತ್ತವನ್ನು ಈಗಾಗಲೇ ಆರ್‌ಎಸ್‌ಕೆಗಳಲ್ಲಿ ಸಂಗ್ರಹಿಸಿ ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಚಿತ್ತಾಪುರ, ಮಾಡಬೂಳ, ನಾಲವಾರ, ಶಹಾಬಾದ, ಕಾಳಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ. ಸರ್ಕಾರ ಅನುಮೂದಿಸಿದ ಸಂಸ್ಥೆಗಳಿಂದ ಬೀಜ ಪಡೆದು ರೈತರಿಗೆ ವಿತರಿಸಲಾಗುತ್ತಿದೆ.
ಪ್ರಸಕ್ತ ವರ್ಷ 85 ಹೆಕ್ಟೇರ್‌ನಲ್ಲಿ ಭತ್ತವನ್ನು ನೇರ ಕೂರಿಗೆ ಬಿತ್ತನೆ ಗುರಿ ಹೊಂದಲಾಗಿದೆ. ನೀರಾವರಿಯಾಶ್ರಿತ ಪ್ರದೇಶದಲ್ಲಿ ನೇರ ಕೂರಿಗೆ ಬಿತ್ತನೆಗೆ ಮುಂದಾಗುವುದು ಸೂಕ್ತ. ರೈತರು ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ಮೊರೆ ಹೋಗದೆ ಹಸಿರೆಲೆ ಹಾಗೂ ಸಾವಯುವ ಗೊಬ್ಬರ ಬಳಸಬೇಕು. ಈಗಾಗಲೇ ತೊಗರಿಯಲ್ಲಿ ಅಂತರ ಬೆಳೆಯಾಗಿ ತೃಣಧಾನ್ಯ ಬೆಳೆಯಲು ಜಾಗೃತಿ ಮೂಡಿಸಲಾಗುತ್ತಿದೆ. ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ಹೋಬಳಿ ಮಟ್ಟದಿಂದ ಕೃಷಿ ಅಭಿಯಾನ ಕೈಗೊಂಡು ರೈತರು ತೊಗರಿ ಬಿತ್ತನೆ ಬದಲಿಗೆ ಕಾಳು ಊರಲು ಪ್ರೋತ್ಸಾಹ, ಬಿಟಿ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.