ಹತ್ತು ಗಿಡ ನೆಟ್ಟು ಬೆಳೆಸುವ ವಿದ್ಯಾರ್ಥಿಗಳಿಗೆ ಶೇ.10 ಕೃಪಾಂಕ
Team Udayavani, Oct 17, 2018, 7:01 AM IST
ಕಲಬುರಗಿ: ರಾಜ್ಯಾದ್ಯಂತ ಅರಣ್ಯೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶೇ.10 ಕೃಪಾಂಕ ನೀಡುವ ಯೋಜನೆಯೊಂದನ್ನು ಕಾರ್ಯ ರೂಪಕ್ಕೆ ತರಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಆರ್. ಶಂಕರ್ ತಿಳಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ| ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕಲಬುರಗಿ, ಬಳ್ಳಾರಿ ಅರಣ್ಯ ವೃತ್ತಗಳ ಕೃಷಿ ಅರಣ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 8ನೇ ತರಗತಿ ಇದ್ದಾಗ ಕನಿಷ್ಠ 10 ಗಿಡಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಸಂರಕ್ಷಿಸಿ ಬೆಳೆಸಿದರೆ ಎಸ್‌ಎಸ್ ಎಲ್‌ಸಿಯಲ್ಲಿ ಶೇ.10 ಕೃಪಾಂಕ ಅಂಕ ನೀಡುವ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಪ್ರತಿ ವಿದ್ಯಾರ್ಥಿ 10 ಗಿಡಗಳನ್ನು ಬೆಳೆಸಬೇಕು. ಒಂದು ವೇಳೆ ಒಂದೇ ಗಿಡ ಬೆಳೆಸಿದಲ್ಲಿ ಒಂದೇ ಕೃಪಾಂಕ ನೀಡಲಾಗುವುದು. ಇದನ್ನು ಯಾವ ನಿಟ್ಟಿನಲ್ಲಿ ಕಾರ್ಯಾನುಷ್ಠಾನಕ್ಕೆ ತರಬೇಕೆನ್ನುವುದರ ಕುರಿತು ರೂಪುರೇಷೆ ನಡೆದಿದೆ. ಹೀಗೆ ಪರಿಣಾಮ ಕಾರಿಯಾಗಿ
ಯೋಜನೆಯನ್ನು ಜಾರಿಗೆ ತಂದಲ್ಲಿ ಅರಣ್ಯೀಕರಣ ಹೆಚ್ಚಳವಾಗಲು ಸಾಧ್ಯವಾಗುತ್ತದೆ. ಈಗಾಗಲೇ ಎಕರೆ ಭೂಮಿಯ ಬದುವಿನಲ್ಲಿ ಕನಿಷ್ಠ 20 ಗಿಡಗಳನ್ನಾದರೂ ಬೆಳೆಯ ಬೇಕೆಂಬುದರ ಕುರಿತು ಯೋಜನೆ ರೂಪಿಸಲಾಗಿದ್ದು, ಒಟ್ಟಾರೆ ಅರಣ್ಯೀಕರಣ ಹೆಚ್ಚಳಕ್ಕೆ ಪರಿಣಾಮಕಾರಿ ಯೋಜನೆಗಳು ಕಾರ್ಯಾನುಷ್ಠಾನ ಅಗತ್ಯವಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.