ಕೈಲಾಸ ನಗರದ 112 ಮನೆಗಳು ಸಂಪೂರ್ಣ ಕತ್ತಲಲ್ಲಿ
Team Udayavani, Aug 12, 2018, 2:40 PM IST
ವಾಡಿ: ಇಂಗಳಗಿ ಗ್ರಾಪಂ ವ್ಯಾಪ್ತಿಯಿಂದ ಸ್ಥಳಾಂತರಗೊಂಡು, ವಾಡಿ-ರಾವೂರ ಮಧ್ಯೆ ಕೈಲಾಸ ನಗರವಾಗಿ ನಿರ್ಮಾಣವಾಗಿರುವ ಕ್ವಾರಿ ತಾಂಡಾದ 112 ಮನೆಗಳು ಅಕ್ಷರಶಃ ಕತ್ತಲಲ್ಲಿ ಮುಳುಗಿವೆ. ಗಣಿಗಾರಿಕೆ ನಡೆಸುವ ಸಂಬಂದ ಇಂಗಳಗಿ ಕ್ವಾರಿ ತಾಂಡಾವನ್ನು ಸಂಪೂರ್ಣ ಸ್ಥಳಾಂತರಗೊಳಿಸಿದ ಎಸಿಸಿ ಕಂಪನಿ, 112 ಮನೆಗಳನ್ನು ನಿರ್ಮಿಸಿಕೊಟ್ಟು, ಕಳೆದ ಹತ್ತು ವರ್ಷಗಳಿಂದ ಉಚಿತ ಕುಡಿಯುವ ನೀರು ಹಾಗೂ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಏಕಾಏಕಿ ಈ ಕೈಲಾಸ ನಗರ ಬಡಾವಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಬಡಾವಣೆ ನಿವಾಸಿಗಳು ಗೋಳಾಡುವಂತಾಗಿದೆ.
ಶನಿವಾರ ಸ್ಥಳೀಯ ಎಸಿಸಿ ಆಡಳಿತ ಕಚೇರಿಗೆ ಆಗಮಿಸಿದ ಕೈಲಾಸ ನಗರದ ನೂರಾರು ಜನರು, ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಮೆಂಟ್ ಉತ್ಪಾದನೆಗಾಗಿ ಗಣಿಗಾರಿಕೆ ನಡೆಸಲು ನಮ್ಮ ತಾಂಡಾ ಸ್ಥಳಾಂತರಗೊಳಿಸಿದ ಎಸಿಸಿ ಕಂಪನಿ ಅ ಧಿಕಾರಿಗಳು, 112 ಮನೆಗಳನ್ನು ನಿರ್ಮಿಸಿಕೊಟ್ಟು ವಿದ್ಯುತ್ ಹಾಗೂ ಟ್ಯಾಂಕರ್ ಗಳ ಮೂಲಕ ಕುಡಿಯಲು ನೀರು ಒದಗಿಸುತ್ತಿದ್ದಾರೆ. ಹೊಸ ಬಡಾವಣೆಯಾಗಿ ಹತ್ತು ವರ್ಷ ಕಳೆದರೂ ಪೈಪ್ ಲೈನ್ ಅಳವಡಿಸಿಲ್ಲ. ವೈಯಕ್ತಿಕ ಶೌಚಾಲಯಗಳಿಗೆ ನೀರಿಲ್ಲ. ಬಯಲು ಶೌಚಾಲಯ ಬಳಕೆ ಅನಿವಾರ್ಯವಾಗಿದೆ. ರಸ್ತೆ ಸೌಲಭ್ಯ ಇಲ್ಲ. ಎಸಿಸಿಯವರು ಜೆಸ್ಕಾಂ ಇಲಾಖೆಗೆ ವಿದ್ಯುತ್ ದರ ಪಾವತಿ ಮಾಡದ ಕಾರಣ ಇಡೀ ಕೈಲಾಸ ನಗರದ ವಿದ್ಯುತ್ ಕಡಿತಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಎಸಿಸಿ ಎಚ್‌ಆರ್ ವಿಭಾಗದ ಮುಖ್ಯಸ್ಥ ಪುಷ್ಕರ್ ಚೌಧರಿ ಅವರನ್ನು ಭೇಟಿ ಮಾಡಿ ದೂರು ನೀಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೈಲಾಸ ನಗರದ ಮುಖಂಡರು, ಇಂಗಳಗಿ ಗ್ರಾಪಂ ವ್ಯಾಪ್ತಿಯ ಸಂಪರ್ಕ ಕಡಿತಗೊಂಡಿದೆ. ಕೈಲಾಸ ನಗರವನ್ನು ರಾವೂರ ಗ್ರಾಪಂಗೆ ಅಥವಾ ವಾಡಿ ಪುರಸಭೆಗೆ ಸೇರ್ಪಡೆ ಮಾಡಿದರೆ ಸರಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಳಲು ತೋಡಿಕೊಂಡರು. ಬಡಾವಣೆಯ ಶಂಕರ ಚವ್ಹಾಣ, ಅಶೋಕ ರಾಠೊಡ, ಸುರೇಶ ಚವ್ಹಾಣ, ಪ್ರಕಾಶ ರಾಠೊಡ, ಬಲರಾಮ ರಾಠೊಡ, ಥಾವರೂ ಚವ್ಹಾಣ, ಅಶೋಕ ಎಲ್.ರಾಠೊಡ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.