ಕಾಲೇಜಿಗೆ ತೆರಳಲು 12 ಕಿ.ಮೀ. ಕಾಲ್ನಡಿಗೆ
Team Udayavani, Feb 22, 2022, 10:33 AM IST
ಮಾದನಹಿಪ್ಪರಗಿ: ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯ ಇಲ್ಲದ್ದರಿಂದ ಗ್ರಾಮದಿಂದ ಸುಮಾರು 12 ಕಿ.ಮೀ ಹಾಗೂ ಐದು ಕಿ.ಮೀ ದೂರವಿರುವ ಹಳ್ಳಿಗಳಿಂದ ವಿದ್ಯಾರ್ಥಿಗಳು ಕಾಲ್ನಡಿಗೆಯಿಂದಲೇ ಕಾಲೇಜಿಗೆ ಹೋಗಿ-ಬರುವ ಶೋಚನೀಯ ಸ್ಥಿತಿ ಇಲ್ಲಿದೆ.
ನಿಂಬಾಳದಿಂದ ಮಾದನಹಿಪ್ಪರಗಿ 12 ಕಿ.ಮೀ, ಚಲಗೇರಾ ಐದು ಕಿ.ಮೀ ದೂರವಾಗುತ್ತದೆ. ಈ ಭಾಗದಿಂದ ಕಾಲೇಜಿಗೆ ಬರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಳಗ್ಗೆ 8:30ರ ಸುಮಾರಿಗೆ ಕಾಲ್ನಡಿಗೆಯಲ್ಲೇ ಮಾದನಹಿಪ್ಪರಗಿಗೆ ಹೊರಟರೆ ಸುಮಾರು 10ಗಂಟೆಗೆ ತಲುಪುತ್ತಾರೆ. ಸಂಜೆ ಕಾಲೇಜು ಮುಗಿದ ಮೇಲೆ ನಾಲ್ಕುವರೆ ಗಂಟೆಗೆ ಹೊರಟರೆ ಆರು ಗಂಟೆ ಮೇಲೆ ಮನೆಗೆ ತಲುಪುತ್ತಾರೆ. ಒಟ್ಟಿನಲ್ಲಿ ಓಡಾಟದಲ್ಲೇ ವಿದ್ಯಾರ್ಥಿಗಳು ಸುಸ್ತಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರಿಗೆ ಕಾಲೇಜು ಬಿಡುವಂತೆ ಮನೆಯಲ್ಲಿ ಪಾಲಕರು ಒತ್ತಡ ಹೇರುತ್ತಿದ್ದಾರೆ.
ಕಳೆದ 2 ವರ್ಷದ ಹಿಂದೆ ಕೆಕೆಆರ್‌ಡಿಬಿಯ 4 ಮಿನಿ ಬಸ್‌ಗಳು ಆಳಂದದಿಂದ ಮಾದನಹಿಪ್ಪರಗಿ ಮುಖಾಂತರವಾಗಿ ನಿಂಬಾಳ, ಹಡಲಗಿ, ಯಳಸಂಗಿ, ಮಾಡಿಯಾಳ ವರೆಗೆ ಓಡಾಡುತ್ತಿದ್ದವು. ಈಗ ಈ ನಾಲ್ಕು ಬಸ್ಸುಗಳ ಓಡಾಟ ಸ್ಥಗಿತವಾಗಿವೆ.
ಚಲಗೇರಾ, ನಿಂಬಾಳ, ಹಡಲಗಿ, ಯಳಸಂಗಿ ಮಾಡಿಯಾಳ ಕಡೆಗೆ ಹೆಚ್ಚಾಗಿ ಬಸ್ಸುಗಳು ಸಂಚರಿಸುತ್ತಿಲ್ಲ. ಹೀಗಾಗಿ ಖಾಸಗಿ ವಾಹನಗಳಲ್ಲೇ ಓಡಾಟ ಅನಿವಾರ್ಯವಾಗಿದೆ. ಈ ವಾಹನಗಳು ಕಾಲೇಜಿನ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಈ ಕುರಿತು ಮಾದನಹಿಪ್ಪರಗಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಆಳಂದ ಬಸ್ ಘಟಕದ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಸಾರಿಗೆ ಸಿಬ್ಬಂದಿ ಕೊರತೆಯಿದೆ. ಅಲ್ಲದೇ ಬಹಳಷ್ಟು ಬಸ್‌ಗಳು ಕೆಟ್ಟು ಹೋಗಿವೆ. ಆದ್ದರಿಂದ ನಿಂಬಾಳ, ಚಲಾಗೇರಾಕ್ಕೆ ಬಸ್‌ಗಳನ್ನು ಓಡಿಸಲು ಸಾಧ್ಯವಾಗಿಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. -ಜೆ.ಡಿ. ದೊಡ್ಡಮನಿ, ಡಿಪೋ ಮ್ಯಾನೇಜರ್, ಆಳಂದ
ವಿದ್ಯಾರ್ಥಿನಿಯರು ನಿಂಬಾಳ ಗ್ರಾಮದಿಂದ 12 ಕಿ.ಮೀ ನಡೆದುಕೊಂಡು ಕಾಲೇಜಿಗೆ ಹೋಗುವ ಸ್ಥಿತಿ ಇರುವುದು ನಿಜಕ್ಕೂ ಶೋಚನೀಯ. ಇದರಲ್ಲಿ ಸಾರಿಗೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ದಾರಿಯಲ್ಲಿ ಯಾವುದೇ ರೀತಿಯ ಘಟನೆಗಳು ಸಂಭವಿಸಿದರೆ ಘಟಕದ ವ್ಯವಸ್ಥಾಪಕರೆ ಕಾರಣವಾಗುತ್ತಾರೆ. -ಲಕ್ಷ್ಮಣ ತಳಕೇರಿ, ಗ್ರಾಪಂ ಸದಸ್ಯ, ನಿಂಬಾಳ
ಗ್ರಾ.ಪಂಪ್ರಯಾಣಿಕರು ಇಲ್ಲದ ಕಡೆಗೆ ಸಾರಿಗೆ ಬಸ್ಸುಗಳನ್ನು ಓಡಿಸುತ್ತಾರೆ.
ಶಿಕ್ಷಣ ಪಡೆಯಲು ಹಂಬಲಿಸುವ ವಿದ್ಯಾರ್ಥಿಗಳಿಗಾಗಿ ಒಂದು ಬಸ್‌ನ್ನು ಬಿಡುತ್ತಿಲ್ಲ. ಕೂಡಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಸಮಯಕ್ಕೆ ಅನುಗುಣವಾಗಿ ಬಸ್ ಓಡಿಸಬೇಕು. ಇಲ್ಲವಾದರೇ ಮಾದನಹಿಪ್ಪರಗಿ ಬಸ್ ನಿಲ್ದಾಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹೋರಾಟ ನಡೆಸಲಾಗುವುದು. -ಶಿವಲಿಂಗಪ್ಪ ದೊಡ್ಡಮನಿ, ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ
–ಪರಮೇಶ್ವರ ಭೂಸನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್