16 ಮಹಿಳೆಯರಿಗೆ ಸಿಜೇರಿಯನ್
Team Udayavani, Mar 19, 2017, 3:33 PM IST
ಆಳಂದ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದುವರೆಗೂ ಕೇವಲ ಸಾಮಾನ್ಯ ಹೆರಿಗೆಗಳನ್ನಷ್ಟೇ ಮಾಡುತ್ತಿದ್ದ ವೈದ್ಯರು ಈಗ ಶಸ್ತ್ರ ಚಿಕಿತ್ಸೆ (ಸಿಜೇರಿಯನ್) ಮೂಲಕ ಕೈಗೊಳ್ಳುವ ಹೆರಿಗೆಗಳನ್ನು ಮಾಡುತ್ತಿದ್ದಾರೆ. ಆಸ್ಪತ್ರೆಯ ಡಾ| ರಾಮೇಶ್ವರಿ ಮೈತ್ರಿ ತಾಲೂಕು ಆರೋಗ್ಯಾಧಿಕಾರಿ ಡಾ| ಅಭಯಕುಮಾರ ಮಾರ್ಗದರ್ಶನದಲ್ಲಿ ಕಳೆದ ಡಿಸೆಂಬರ್ ತಿಂಗಳಿಂದ ಮಾ. 15ರ ವರೆಗೆ ಒಟ್ಟು 16 ಮಹಿಳೆಯರಿಗೆಶಸ್ತ್ರ ಚಿಕಿತ್ಸೆ ಮೂಲಕ (ಸಿಜೇರಿಯನ್) ಹೆರಿಗೆ ಮಾಡಿದ್ದಾರೆ.
ಅಫಜಲಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಳಂದ ಆಸ್ಪತ್ರೆಯ ಡಾ| ರಾಮೇಶ್ವರಿ ಅವರ ಸಹೋದರಿ ಭುವನೇಶ್ವರಿ ಪ್ರಥಮ ಬಾರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿ ದಾಖಲೆ ನಿರ್ಮಿಸಿದರೆ, ರಾಮೇಶ್ವರಿ ಅವರು ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ 16 ಮಂದಿ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ.
ಈ ಹಿಂದೆ ಹೆರಿಗೆ ಸಂದರ್ಭದಲ್ಲಿ ಸಮರ್ಪಕವಾಗಿ ಚಿಕಿತ್ಸೆ ದೊರೆಯದೆ ಗರ್ಭೀಣಿಯರು ತೀವ್ರ ತೊಂದರೆ ಅನುಭವಿಸಿದ ಸನ್ನಿವೇಶಗಳು ಇದ್ದವು.ಆದರೀಗ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲೇ ಉತ್ತಮ ಹೆರಿಗೆ ಸೌಲಭ್ಯ ದೊರಕಿದ್ದು, ಜಿಲ್ಲಾಸ್ಪತ್ರೆ ಇಲ್ಲವೇ ಖಾಸಗಿ ಆಸ್ಪತ್ರೆಗೆ ಹೋಗುವುದು ತಪ್ಪಿದಂತಾಗಿದೆ.
ಇದಕ್ಕೂ ಮುನ್ನ ಹೆರಿಗೆ ಸಂದರ್ಭದಲ್ಲಿ ಕೊಂಚ ಏರುಪೇರಾದರೂ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ವೈದ್ಯರು ಹೆಚ್ಚುವರಿ ಜವಾಬ್ದಾರಿ ನಿಭಾಯಿಸಿ ಗ್ರಾಮೀಣ ಮಹಿಳೆಯರಿಗೆ ಅನುಕೂಲ ಒದಗಿಸಿಕೊಟ್ಟಿದ್ದಾರೆ.
ಸೌಲಭ್ಯಗಳ ಕೊರತೆ: ಸಿಜೇರಿಯನ್‌ಗಳಂತ ಹೆರಿಗೆ ಮಾಡಲು ಅರವಳಿಕೆ ವೈದ್ಯರು ಸೇರಿ ಸೌಲಭ್ಯಗಳು ಮತ್ತು ಪರಿಣಿತ ಸಿಬ್ಬಂದಿ ಅಗತ್ಯವಾಗಿರುತ್ತದೆ. ಅದಕ್ಕಾಗಿ ಅಗತ್ಯ ಸಿಬ್ಬಂದಿ ಮತ್ತು ಪರಿಣಿತರನ್ನು ಒದಗಿಸಿದರೆ ಅನುಕೂಲವಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಅಭಯಕುಮಾರ ಮನವಿ ಮಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳೇನೂ ಕಡಿಮೆಯಲ್ಲ: ಪಟ್ಟಣದ ಸರ್ಕಾರಿ ಆಸ್ಪತ್ರೆಗಳಲ್ಲಿ ಇದುವರೆಗೂ ಸಾಮಾನ್ಯ ಹೆರಿಗೆಗಳನ್ನು ಮಾಡಲಾಗುತ್ತಿತ್ತು. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ವರವಾಗಿತ್ತು. ಆದರೀಗ ನಾವೇನೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಸರ್ಕಾರಿ ವೈದ್ಯರು ಶಸ್ತ್ರಚಿಕಿತ್ಸೆಗಳಂತ ಹೆರಿಗೆಗೂ ಮುಂದಾಗಿದ್ದಾರೆ.
*ಮಹಾದೇವ ವಡಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.