ರಾಜ್ಯದಲ್ಲಿ ವಿದ್ಯುತ್ ಅವಘಡಕ್ಕೆ 1828 ಜನರ ಬಲಿ
Team Udayavani, Jul 1, 2017, 4:02 PM IST
ಕಲಬುರಗಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್ ಅವಘಡಗಳಿಂದ ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 1828 ಜನರು ಬಲಿಯಾಗಿದ್ದಾರೆ. ಅಲ್ಲದೆ, 1453 ಜನರಿಗೆ ಗಾಯಗಳಾಗಿವೆ. ಅದರೊಂದಿಗೆ 1904 ಜಾನುವಾರುಗಳು ಸಾವನ್ನಪ್ಪಿವೆ. ಇದು ಸರಕಾರವೇ ವಿಧಾನಸಭೆಯಲ್ಲಿ ಬಿಡಗಡೆ ಮಾಡಿರುವ ಅಂಕಿ ಅಂಶ.
ಈ ಅಂಕಿ ಅಂಶಗಳಿಂದ ರಾಜ್ಯದಲ್ಲಿ ಸಂಭವಿಸುವ ವಿದ್ಯುತ್ ಅವಘಡಗಳ ಸುರಕ್ಷತೆಗೆ ವಿದ್ಯುತ್ ಪ್ರಸರಣ ನಿಗಮ ಮತ್ತು ಸರಬರಾಜು ಕಂಪನಿಗಳು ಎಷ್ಟು ಕ್ರಮ ಕೈಗೊಂಡಿವೆ ಎಂಬುದು ಸ್ಪಷ್ಟವಾಗಿದೆ. ಅದಲ್ಲದೆ, ಇದೇ ವೇಳೆ ಸುರಕ್ಷತೆಗಾಗಿ ಒಟ್ಟು 272.33 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 2013-14ನೇ ಸಾಲಿನಲ್ಲಿ 460 ಜನರು ಸತ್ತಿದ್ದಾರೆ. 381 ಜನರು ಗಾಯಗೊಂಡಿದ್ದು, 467 ಜಾನುವಾರುಗಳು ಸಾವನ್ನಪ್ಪಿವೆ.
2014-15ರಲ್ಲಿ 529 ಜನರು ಸಾವನ್ನಪ್ಪಿದ್ದು, 369 ಜನರು ಗಾಯಗೊಂಡಿದ್ದಾರೆ. 483 ಜಾನುವಾರುಗಳು ಸಾವನ್ನಪ್ಪಿವೆ. 2015-16ನೇ ಸಾಲಿನಲ್ಲಿ 441 ಜನರು ಸಾವನ್ನಪ್ಪಿದ್ದು, 380ಜನ ಗಾಯಗೊಂಡಿದ್ದಾರೆ. 531 ಜಾನುವಾರುಗಳು ಸಾವನ್ನಪ್ಪಿವೆ. ಅದರಂತೆ 2016-17 398 ಜನರು ಸಾವನ್ನಪ್ಪಿದ್ದು, 323 ಜನ ಗಾಯಗೊಂಡಿದ್ದಾರೆ. 423 ಜಾನುವಾರುಗಳು ಸಾವನ್ನಪ್ಪಿವೆ.
ನಿಗಮವಾರು ವಿವರ: ಕಳೆದ ನಾಲ್ಕು ವರ್ಷಗಳಲ್ಲಿ ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 515 ಜನರು ಸಾವನ್ನಪ್ಪಿದ್ದಾರೆ. 398 ಜನ ಗಾಯಗೊಂಡಿದ್ದಾರೆ. 174ಜಾನುವಾರುಗಳು ಸಾವನ್ನಪ್ಪಿವೆ.
ಚಾಮುಂಡೇಶ್ವರಿ ನಿಗಮ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 250 ಜನರು ಸಾವನ್ನಪ್ಪಿದ್ದಾರೆ. 217 ಜನರಿಗೆ ಗಾಯವಾಗಿವೆ. 299 ಜಾನುವಾರುಗಳು ಸಾವನ್ನಪ್ಪಿವೆ.
ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 251 ಜನರು ಸಾವನ್ನಪ್ಪಿದ್ದಾರೆ. 219 ಜನ ಗಾಯಗೊಂಡಿದ್ದಾರೆ. 337 ಜಾನುವಾರುಗಳು ಸಾವನ್ನಪ್ಪಿವೆ. ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಲಗಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ 440 ಜನರು ಸಾವನ್ನಪ್ಪಿದ್ದಾರೆ. 299 ಜನ ಗಾಯಗೊಂಡಿದ್ದಾರೆ.
287 ಜಾನುವಾರು ಸಾವನ್ನಪ್ಪಿವೆ. ಅದರಂತೆ ಜೆಸ್ಕಾಂ ವ್ಯಾಪ್ತಿಯ ಬಳ್ಳಾರಿ, ಕಲಬುರಗಿ, ಯಾದಗಿರಿ, ಬೀದರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 380 ಜನರು ಸಾವನ್ನಪ್ಪಿದ್ದಾರೆ. 320 ಜನರು ಗಾಯಗೊಂಡಿದ್ದಾರೆ ಅಲ್ಲದೆ, 811 ಅತೀ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ಸರಕಾರ ತಿಳಿಸಿದೆ.
ಸುರಕ್ಷೆಗಾಗಿ ಮಾಡಿದ ವೆಚ್ಚ: ಇದೇ ವೇಳೆಯಲ್ಲಿ ರಾಜ್ಯದ ಎಲ್ಲ ಐದು ನಿಗಮಗಳು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಧಿಕಾರಿಗಳು 2013-14ರಲ್ಲಿ 29 ಕೋಟಿ ರೂ., 2014-15ರಲ್ಲಿ 57 ಕೋಟಿ ರೂ., 2015-16ರಲ್ಲಿ 93 ಕೋಟಿ ರೂ. ಹಾಗೂ 2016-17ರ ಜನವರಿ ಅಂತ್ಯಕ್ಕೆ 92 ಕೋಟಿ ರೂ.ಗಳಿಗೆ ಹೆಚ್ಚು ಅಂದರೆ ಒಟ್ಟು 272 ಕೋಟಿ ರೂ.ಗಳನ್ನು ವ್ಯಯ ಮಾಡಲಾಗಿದೆ.
* ಸೂರ್ಯಕಾಂತ ಎಂ. ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ
Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ
ಇಂದು ಜೆಡಿಎಸ್ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು
Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್.ಅಶೋಕ್
Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.