5ದಿನಗಳಲ್ಲಿ 2386 ಮಾನವ ದಿನ ಸೃಷ್ಟಿ
Team Udayavani, Feb 18, 2017, 3:21 PM IST
ಕಲಬುರಗಿ: ಇದೊಂದು ಹೊಸ ನಡೆ, ಬರದ ಅಬ್ಬರ ಕಡಿಮೆ ಮಾಡಲು ಜಿಲ್ಲಾ ಪಂಚಾಯಿತಿ ಪುನಃ ಕೆರೆಗಳಿಗೆ ಹೆಜ್ಜೆ ಇಟ್ಟಿದೆ. ಕೇವಲ ಐದು ದಿನಗಳಲ್ಲಿ 2386 ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ಈ ಮುಖೇನ ಗುಳೆ ಹೋಗುವುದನ್ನು ತಪ್ಪಿಸುವಲ್ಲಿ ಜಿಪಂ ಸಿಇಒ ಅನಿರುದ್ಧ ಅವರ ಉಪಾಯ ಫಲಿಸಿದೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿನ ಕೆರೆ ಹೂಳೆತ್ತುವುದು ಹಾಗೂ ಅರಣ್ಯದ ಬದುಗಳಲ್ಲಿ ಕೆಲಸ ಮಾಡುವ ಮೂಲಕ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸೈಯದ್ ಚಿಂಚೋಳಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕೆರೆಯಲ್ಲಿ ಫೆ. 6 ರಿಂದ ಕೆಲಸ ಆರಂಭಿಸಲಾಗಿದೆ.
ದಿನೇ ದಿನೇ ಜನರು ಕೂಲಿಗಾಗಿ ಹೆಚ್ಚು ಹೆಚ್ಚು ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಅಂತಿಮವಾಗಿ 514 ಜನರು ಕೂಲಿ ಕೆಲಸಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 300 ಹೆಣ್ಣು ಮತ್ತು 200ಕ್ಕೂ ಹೆಚ್ಚು ಗಂಡು ಕೂಲಿಯಾಳುಗಳು ಕೆಲಸ ಮಾಡುತ್ತಿದ್ದಾರೆ. ಕೂಲಿ ಪಾವತಿಯಲ್ಲೂ ಯಾವುದೇ ತೊಂದರೆಯಾಗಿಲ್ಲ.
ಉತ್ತಮವಾಗಿ ಕೆಲಸ ನಡೆಯುತ್ತಿದೆ. ಇದರಿಂದ ನಮಗೆ ಅನುಕೂಲವಾಗಿದೆ ಎಂದು ತಾಜ್‌ಸುಲ್ತಾನಪುರ ಭೀಮವ್ವ ಹಾಗೂ ಮಕಬೂಲ್ “ಉದಯವಾಣಿ”ಗೆ ತಿಳಿಸಿದರು. ಕಳೆದ ವರ್ಷ ಇದೇ ಸೈಯದ್ ಚಿಂಚೋಳಿ ಕೆರೆಯಲ್ಲಿ ಹೂಳೆತ್ತುವ ಕೆಲಸ ಆರಂಭಿಸುವ ಮೂಲಕ ಗುಳೆ ಹೋಗುವುದನ್ನು ತಡೆಯಲಾಗಿತ್ತು.
ಆದರೆ, ಈ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಜಿಪಂ ಸಿಇಒ ಅನಿರುದ್ಧ ಶ್ರವಣ ಕೆಲಸ ಆರಂಭಿಸಿದ್ದಾರೆ. ಇದಕ್ಕೆ ವ್ಯಾಪಕ ಬೆಂಬಲವೂ ಸಿಕ್ಕಿದೆ. ಒಟ್ಟು 514 ಜನ ಶುಕ್ರವಾರ ಕೆಲಸ ಮಾಡಿದರು. ಇದರಿಂದ ಕಳೆದ ಐದು ದಿನಗಳಲ್ಲಿ ಒಟ್ಟು 2386 ಮಾನವ ದಿನಗಳ ಸೃಷ್ಟಿಯಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಂತಾಗಿದೆ.
ಅರಣ್ಯ ಮತ್ತು ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಈಗಾಗಲೇ 100 ದಿನಗಳ ಕೆಲಸವನ್ನು ಸೃಷ್ಟಿ ಮಾಡಲಾಗಿದೆ. ಒಟ್ಟು 150 ದಿನಗಳ ಕೆಲಸದ ವಾಗ್ಧಾನವನ್ನು ಪೂರ್ಣ ಮಾಡಿ ಹೆಚ್ಚುವರಿ ಮಾನವ ದಿನಗಳ ಸೃಷ್ಟಿ ಮಾಡುವ ಮೂಲಕ ಜನರಿಗೆ ಕೆಲಸ ನೀಡಿ ಗುಳೇ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕೆಲಸ ಭಾರಿ ಪ್ರಶಂಸೆಗೆ ಕಾರಣವಾಗಿದೆ.
* ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.