ಪ್ರತಿ ಜಿಪಂ ಕ್ಷೇತ್ರಕ್ಕೆ 25 ಲಕ್ಕ ಅನುದಾನ
Team Udayavani, Feb 25, 2019, 5:35 AM IST
ಚಿತ್ತಾಪುರ: ಜಿಲ್ಲೆಯಲ್ಲಿ 1972ಕ್ಕಿಂತಲೂ ಭೀಕರ ಬರಗಾಲ ಎದುರಾಗಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂದು ಈಗಾಗಲೇ ಪ್ರತಿ ಜಿಪಂಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ತಾಲೂಕಿನ ಅಶೋಕ ನಗರ ಮತ್ತು ಇಂಗನಕಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ನೀರಿನ ಸಮಸ್ಯೆ ಎಲ್ಲಿ ಇದೆ ಎನ್ನುವುದನ್ನು ತಿಳಿದು ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಿಯಾ ಯೋಜನೆ ಸಿದ್ಧಪಡಿಸಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮೋದಿ ಸರ್ಕಾರ ರೈತರ, ಕಾರ್ಮಿಕರ, ನಿರೋದ್ಯೊಗಿಗಳ, ಬಡವರ ಪರ ಇಲ್ಲ. ಈ ಸರ್ಕಾರ ಅಂಬಾನಿ, ಅದಾನಿ ಪರವಾಗಿದೆ. ರಾಜ್ಯದ ರೈತರು ಭೀಕರ ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ರೈತರ ನೆರವಿಗೆ ಬನ್ನಿ ಎಂದರೆ ಬರೋದಿಲ್ಲ. ಆದರೆ ಅಂಬಾನಿ, ಅದಾನಿ ಸಮಸ್ಯೆಯಲ್ಲಿದ್ದಾರೆ ಎಂದರೆ ಕೂಡಲೇ ಸಮಸ್ಯೆ ಬಗೆಹರಿಸಲು ಹೋಗುತ್ತಾರೆ. ಇಂತಹ ಕೆಟ್ಟ ಸರ್ಕಾರ ನಮಗೆ ಬೇಕೇ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡಲು ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ. ಬಿಜೆಪಿಯವರು ಆಪರೇಷನ್ ಕಮಲ ಮೂಲಕ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ನಡೆಸಲು ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿಯವರು ತೊಂದರೆ ನೀಡುತ್ತಿದ್ದಾರೆ. ಇಂಗನಕಲ್-ತೆಂಗಳಿ ರಸ್ತೆ ಕಾಮಗಾರಿ ಕೈಗೊಳ್ಳಲು ಗ್ರಾಮಸ್ಥರ ಬಹಳ ದಿನಗಳ ಕನಸು ಈಗ ನನಸಾಗಿದೆ. ರಾಜ್ಯದಲ್ಲಿ ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಜನರ
ಸಹಕಾರ ಅಗತ್ಯ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್, ಮುಖಂಡ ಪ್ರಭು ಮಂಗಲಗಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ರೋಹಿತ ಗಂಜಗಿರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗಣ್ಣದೇವರೆಡ್ಡಿ ಪಾಟೀಲ, ಎಪಿಎಂಸಿ ಸದಸ್ಯ ಮನ್ಸೂರ್ ಪಟೇಲ್ ತೊಂಚಿ, ಪ್ರಚಾರ ಸಮಿತಿ ಅಧ್ಯಕ್ಷ ಜಯಪ್ರಕಾಶ ಕಮಕನೂರ ಮುಖಂಡರಾದ ಮಾಪಣ್ಣ ಗಂಜಗೇರಿ, ಬಸವರಾಜ ಹೊಸಳ್ಳಿ, ಸುನೀಲ ದೊಡ್ಮನಿ, ಣಮಂತ ಸಂಕನೂರ, ಶರಣು ಡೋಣಗಾಂವ, ನಾಗರಾಜ ಸಜ್ಜನ್, ವಿನ್ನುಕುಮಾರ ಜೆ.ಡಿ, ತಿಮ್ಮು ಬೋವಿ, ರುಕುಮಷಾ ದುಕಾನದಾರ, ಈರಣ್ಣ ದಂಡೋತಿ, ಸಿದ್ದಣ್ಣ ಮಗಿ, ಮಲ್ಲಕಪ್ಪ ತೆಂಗಳಿ, ಭೀಮರಾಯ ಕದ್ದರಗಿ, ಅನಿಲ ಇಂಗನ್ ಹಾಗೂ ಮತ್ತಿತರರು ಇದ್ದರು.
ಮೋದಿ ಭಾಷಣ ಕೇಳಿ ಮರುಳಾಗಬೇಡಿ ಶಿಕ್ಷಣಕ್ಕಾಗಿ ಮೀಸಲಿಟ್ಟ ಶೇ.56ರಷ್ಟು ಹಣವನ್ನು ಮೋದಿ ಜಾಹಿರಾತಿಗೆ ಬಳಸಿದ್ದಾರೆ. ಅವರು ಬಾಯಿ ತೆರೆದರೆ ಸಾಕು ಸುಳ್ಳುಗಳ ಸರಮಾಲೆಯನ್ನೇ ಹೋರಹಾಕುತ್ತಾರೆ. ಕಳೆದ ಐದು ವರ್ಷದಿಂದ ಸುಳ್ಳು ಭಾಷಣಗಳಿಂದ ಜನರನ್ನು ಮೋಡಿ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡಿ ಅಧಿ ಕಾರ ಚಲಾಯಿಸಿದ್ದಾರೆ. ಇದೀಗ ಮತ್ತೆ ಚುನಾವಣೆ ಬರುತ್ತಿದೆ. ಮತ್ತೇ ಸುಳ್ಳಿನ ಪ್ರಚಾರ ಮಾಡಲು ಆಗಮಿಸುತ್ತಾರೆ. ಅವರ ಸುಳ್ಳಿನ ಮಾತಿಗೆ ಮರುಳಾಗದೇ ಜಾಗೃತೆಯಿಂದ ಇರಿ.
ಪ್ರಿಯಾಂಕ್ ಖರ್ಗೆ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.