2ನೇ ವಾರದ ಲಾಕ್‌ಡೌನ್ ಯಶಸ್ವಿ
Team Udayavani, May 31, 2021, 7:14 PM IST
ಕಲಬುರಗಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಎರಡನೇ ಅಲೆಯ ಚೈನ್ ಕತ್ತರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾರಿ ಮಾಡಿದ್ದ ವಾರಾಂತ್ಯದ ಸಂಪೂರ್ಣ ಲಾಕ್‌ಡೌನ್‌ಗೆ ಉತ್ತಮ ಜನ ಸಂ³ದನೆ ಸಿಕ್ಕಿದೆ. ಗುರುವಾರದಿಂದ ಆರಂಭವಾಗಿದ್ದ ಎರಡನೇ ವಾರದ ಲಾಕ್‌ಡೌನ್ ರವಿವಾರಕ್ಕೆ ಕೊನೆಯಾಗಿದ್ದು, ಜಿಲ್ಲಾದ್ಯಂತ ಯಶಸ್ವಿ ಆಗಿದೆ. ಸಂಪೂರ್ಣ ಲಾಕ್‌ಡೌನ್‌ನಲ್ಲಿ ಆಸ್ಪತ್ರೆ ಗಳು, ಮೆಡಿಕಲ್ ಮತ್ತು ತುರ್ತು ಸೇವೆ ಹಾಗೂ ಅಗತ್ಯ ಸೇವೆಗಳು, ಹಾಲು, ಮೊಟ್ಟೆ ಮತ್ತು ಹೋಟೆಲ್‌ಗಳಲ್ಲಿ ಪಾರ್ಸೆಲ್ ಹೊರತು ಪಡಿಸಿ ಎಲ್ಲ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಹೀಗಾಗಿ ನಾಲ್ಕು ದಿನಗಳ ಬಹುತೇಕ ಜನರು ಮನೆಗಳಲ್ಲೇ ಬಂಧಿಯಾಗಿದ್ದರು. ಸೆಮಿ ಲಾಕ್‌ಡೌನ್‌ನಲ್ಲಿದ್ದ ತರಕಾರಿ ಮತ್ತು ದಿನಸಿ ವಸ್ತುಗಳ ಖರೀದಿಗೆ ಬೆಳಗಿನ ನಾಲ್ಕು ಗಂಟೆಗಳ ಅವಕಾಶವೂ ಸಂಪೂರ್ಣ ಲಾಕ್‌ಡೌನ್‌ನಲ್ಲಿ ಇರಲಿಲ್ಲ. ಹೀಗಾಗಿ ಅನವಶ್ಯಕವಾಗಿ ಜನರಿಗೆ ಹೊರ ಬರುವ ಪ್ರಮೇಯವೂ ಉದ್ಭವಿಸಲಿಲ್ಲ. ಒಂದೇ ವೇಳೆ ಬೇಕಾಬಿಟ್ಟಿ ಬಂದರೂ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಸರ್ಪಗಾವಲು ಹಾಕಿರುತ್ತಿದ್ದರು. ಇದರಿಂದಾಗಿ ಶೋಕಿಗೆಂದು ಹೊರ ಬರುತ್ತಿದ್ದ ಯುವಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗಳಿಗೆ ವಾಪಸ್ ಹೋಗುತ್ತಿದ್ದರು.
ಜನ ಸಂಚಾರ, ವಾಹನ ಓಡಾಟ ಎರಡಕ್ಕೂ ಕಡಿವಾಣ ಬಂದಿತ್ತು. ಗುರುವಾರದಿಂದ ರವಿವಾರದವರೆಗೂ ಈ ಪರಿಸ್ಥಿತಿ ಇತ್ತು. ನಗರದ ಗಂಜ್ ಪ್ರದೇಶ, ಕಿರಾಣ ಬಜಾರ, ಸೂಪರ್ ಮಾರ್ಕೆಟ್, ಮುಸ್ಲಿಂ ಚೌಕ್, ದರ್ಗಾ ರಸ್ತೆ, ಜಗತ್ ವೃತ್ತ, ಲಾಲ್‌ಗೇರಿ ಕ್ರಾಸ್, ಸರ್ದಾರ ವಲ್ಲಭಬಾಯಿ ಪಟೇಲ ವೃತ್ತ, ಬಸ್ ನಿಲ್ದಾಣ, ರಾಮ ಮಂದಿರ ವೃತ್ತ ಸೇರಿದಂತೆ ಪ್ರಮುಖ ಪ್ರದೇಶಗಳು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರ ಪೂರ್ತಿ ನಿಂತಿದ್ದರಿಂದ ರೈಲಿನ ಮೂಲಕ ಬಂದಿದ್ದ ಪ್ರಯಾಣಿಕರ ಪರದಾಟ ರವಿವಾರವೂ ಮುಂದುವರೆದಿತ್ತು. ಕೆಲವೆಡೆ ಜನರು ಟಾಂಗಾಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.