ಅಕ್ಷರ ಜಾತ್ರೆಗೆ ಜಿಪಂ 5.75 ಲಕ್ಷ ದೇಣಿಗೆ
Team Udayavani, Jan 21, 2020, 10:52 AM IST
ಕಲಬುರಗಿ: ಜಿಲ್ಲೆಯಲ್ಲಿ ಮೂರು ದಶಕಗಳ ನಡೆಯುತ್ತಿರುವ ನುಡಿ ಜಾತ್ರೆಗೆ ಜಿಪಂ ಹಾಗೂ ಸದಸ್ಯರ ತಮ್ಮ ಗೌರವಧನ ಸೇರಿ 5.75 ಲಕ್ಷ ರೂ. ದೇಣಿಗೆ ನೀಡುವ ನಿರ್ಧಾರವನ್ನು ಸೋಮವಾರ ತೆಗೆದುಕೊಳ್ಳಲಾಗಿದೆ.
ನಗರದ ನೂತನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ 17ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷೆ ಸುವರ್ಣಾ ಹನಮಂತರಾವ ಮಾಲಾಜಿ, ಫೆ.5ರಿಂದ ಮೂರು ದಿನ ಜಿಲ್ಲೆಯಲ್ಲಿ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಪಂ ವತಿಯಿಂದ ಮೂರು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.
ಸ್ಥಳೀಯ ಸರ್ಕಾರದ ಸಂವರ್ಧನೆಗೆ ಸಂಬಂಧಿಸಿದ ಅಖೀಲ ಭಾರತ ಮಟ್ಟದ, ರಾಜ್ಯಮಟ್ಟದ, ಅಂತರ್ ರಾಜ್ಯಮಟ್ಟದ ಸಂಘಗಳಿಗೆ, ಗ್ರಾಪಂ, ತಾಪಂ ಹಾಗೂ ಜಿಪಂ ಚಟುವಟಿಕೆಗಳಿಗೆ ನಡೆಯುವ ವಸ್ತು ಪ್ರದರ್ಶನ ಮತ್ತು ಸಮ್ಮೇಳನಗಳಿಗೆ ವಂತಿಗೆಗಳನ್ನು ನೀಡುವುದಕ್ಕಾಗಿ ಸರ್ಕಾರದ ಸುತ್ತೋಲೆ ಇದೆ ಎಂದರು.
ಅಖೀಲ ಭಾರತ ಮಟ್ಟದ ಸಂಸ್ಥೆಗಳಿಗೆ ಒಂದು ಲಕ್ಷ ರೂ., ರಾಜ್ಯಮಟ್ಟದ ಸಂಸ್ಥೆಗಳಿಗೆ ಐವತ್ತು ಸಾವಿರ ರೂ., ಅಂತರ್ ಜಿಲ್ಲಾಮಟ್ಟದ ಸಂಸ್ಥೆಗಳಿಗೆ ಮೂವತ್ತು ಸಾವಿರ ರೂ., ಜಿಲ್ಲಾಮಟ್ಟದ ಸಂಸ್ಥೆಗಳಿಗೆ ಇಪ್ಪತ್ತು ಸಾವಿರ ರೂ., ಜಿಪಂ ವತಿಯಿಂದ ನೀಡುವುದಕ್ಕಾಗಿ ಸರ್ಕಾರದ ನಿಯಮಗಳಿವೆ. ಈ ಬಾರಿ ವಿಶೇಷವಾಗಿ ಫೆ.5ರಿಂದ ಮೂರು ದಿನ ಜಿಲ್ಲೆಯಲ್ಲಿ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹೀಗಾಗಿ ಮೂರು ಲಕ್ಷ ರೂ. ದೇಣಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ, ಜಿಪಂ ಸಿಇಒ ಡಾ.| ರಾಜಾ.ಪಿ, ಮುಖ್ಯ ಯೋಜನಾ ಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.