ಜಿಲ್ಲೆಯಲ್ಲಿ 64 ಖರೀದಿ ಕೇಂದ್ರ ಸ್ಥಾಪನೆ

ಪ್ರತಿ ಕ್ವಿಂಟಲ್‌ ಹೆಸರಿಗೆ 7196 ರೂ., ಉದ್ದಿಗೆ 6000 ರೂ. ಬೆಂಬಲ ಬೆಲೆ ನಿಗದಿ

Team Udayavani, Sep 21, 2020, 4:56 PM IST

gb-tdy-1

ಸಾಂದರ್ಭಿಕ ಚಿತ್ರ

ಕಲಬುರಗಿ: ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು ಖರೀದಿಗೆ ಮುಂದಾಗಿದ್ದು, ಇದಕ್ಕಾಗಿ 64 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಹಾಗೂ ಇತರ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರಸಕ್ತ 2020-21ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇದರಡಿ ಖರೀದಿಗೆ ಮುಂದಾಗಿದ್ದು, ಹೆಸರು ಕ್ವಿಂಟಲ್‌ಗೆ 7196 ರೂ. ಹಾಗೂ ಉದ್ದು ಕ್ವಿಂಟಲ್‌ಗೆ 6000 ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತಿದೆ.

ಹೆಸರು ಕಾಳು ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್‌ನಂತೆ ಪ್ರತಿ ರೈತನಿಂದ ಗರಿಷ್ಠ ನಾಲ್ಕು ಕ್ವಿಂಟಲ್‌ ಹಾಗೂ ಉದ್ದು ಪ್ರತಿ ಎಕರೆಗೆ ಮೂರು ಕ್ವಿಂಟಲ್‌ ನಂತೆ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಲ್‌ ಖರೀದಿಗೆ ನಿಗದಿ ಮಾಡಲಾಗಿದೆ. ಬೆಂಬಲ ಬೆಲೆಯಲ್ಲಿ ಉದ್ದು ಹಾಗೂ ಹೆಸರು ಮಾಡಲಿಚ್ಚಿಸುವ ರೈತರು ಅವಶ್ಯಕ ದಾಖಲಾತಿಗಳೊಂದಿಗೆ ಇದೇ ಬರುವ ಅಕ್ಟೋಬರ್‌ 15ರೊಳಗೆ ಹೆಸರು ನೋಂದಾಯಿಸಬೇಕು. ಖರೀದಿ ಪ್ರಕ್ರಿಯೆ ನವ್ಹೆಂಬರ್‌ 15ರವರೆಗೆ ನಡೆಯುತ್ತದೆ.

ಹೆಸರು ನೋಂದಣಿ ಹಾಗೂ ಖರೀದಿಗೆಸಂಬಂಧಿಸಿದಂತೆ ಈಗಿನಿಂದಲೇ ಮಾಡಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಸೆ.21ರಂದು ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಕೇಂದ್ರಸರ್ಕಾರದ 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಕಲಬುರಗಿ ಜಿಲ್ಲಾದ್ಯಂತ ಒಟ್ಟು 64 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು  ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಹೆಸರು ಮತ್ತು ಉದ್ದು ಕಾಳು ಬೆಳೆದಿರುವ ರೈತ ಬಾಂಧವರು ಅಗತ್ಯ ಮಾಹಿತಿಗಳೊಂದಿಗೆ ಸಮೀಪದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಕೃಷಿ ಉತ್ಪನ್ನ ಮಾರಾಟ ಮಾಡುವಂತೆ ರೈತರಲ್ಲಿ ಕೋರಿದ್ದಾರೆ.

ಖರೀದಿ ಕೇಂದ್ರಗಳು ಎಲ್ಲಲ್ಲಿ? : ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದಡಿ ಸ್ಥಾಪಿಸಲಾದ ಹೆಸರು ಮತ್ತು ಉದ್ದು ಕಾಳು ಖರೀದಿ ಕೇಂದ್ರಗಳ ವಿವರ ಹೀಗಿದೆ.

ಕಲಬುರಗಿ: ಅವರಾದ್‌(ಬಿ), ಸೊಂತ, ಸಾವಳಗಿ, ಮಹಾಗಾಂವ, ಹರಸೂರ ಹಾಗೂ ಡೊಂಗರಗಾಂವ  ಪ್ರಾಥಮಿಕ ಕೃಷಿ .ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಗ್ರಾಮೀಣ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಕಮಲಾಪುರ ಮತ್ತು ನೇಗಿಲಯೋಗಿ ರೈತ ಉತ್ಪಾದಕ ಸಂಘ ಮೇಳಕುಂದಾ(ಬಿ).

ಆಳಂದ: ಖಜೂರಿ, ಮಾದನಹಿಪ್ಪರಗಾ, ನಿಂಬರ್ಗಾ, ಸರಸಂಬಾ, ಕಮಲಾನಗರ, ಮುನ್ನೊಳ್ಳಿ, ಯಳಸಂಗಿ, ಹಿರೋಳ್ಳಿ, ತಡಕಲ್‌, ಬೊಮ್ಮನಳ್ಳಿ, ಕಡಗಂಚಿ, ನರೋಣಾ ಹಾಗೂ ನಿಂಬಾಳ ಪ್ರಾ. ಕೃ.ಪ.ಸ. ಸಂಘ ನಿಯಮಿತ. ಅಫಜಲಪುರ: ಕರಜಗಿ, ಅತನೂರ್‌ ಹಾಗೂ ಭೈರಾಮಡಗಿ ಪ್ರಾ.ಕೃ.ಪ.ಸ.ಸಂಘ ನಿಯಮಿತ. ಜೇವರ್ಗಿ: ಜೇರಟಗಿ, ಕುಮನಸಿರಸಗಿ ಹಾಗೂ ನರಿಬೋಳ ಪ್ರಾ.ಕೃ.ಪ.ಸ.ಸಂಘ ನಿಯಮಿತ.

ಸೇಡಂ: ಮುಧೋಳ, ಹಾಬಾಳ್‌(ಟಿ), ಅಡಕಿ, ಸಿಂಧನಮಡು, ಕಾನಾಗಡ್ಡಾ, ಕೋಳಕುಂದಾ, ಮೋತಕಪಲ್ಲಿ, ಯಡಗಾ, ಕೋಳಕುಂದಾ ಗ್ರಾಮೀಣ ಪ್ರಾ.ಕೃ.ಪ.ಸ.ಸಂಘ ನಿಯಮಿತ ಹಾಗೂ ಬಲಭೀಮಸೇನಾ ರೈತ ಉತ್ಪಾದಕರ ಸಂಸ್ಥೆ ಬೀದರಚೇಡ್‌ ಮತ್ತು ಕಾಗಿಣಾ ರೈತ ಉತ್ಪಾದಕರ ಸಂಸ್ಥೆ ಸುರವಾರ.

ಚಿತ್ತಾಪುರ: ನಾಲವಾರ, ಕಾಳಗಿ, ರಾವೂರ, ಹಲಕಟ್ಟಾ, ಕೊಡದೂರ್‌, ದಂಡೋತಿ, ಅರಣಕಲ್‌, ಹೆಬ್ಟಾಳ, ಭೀಮನಹಳ್ಳಿ, ಟೆಂಗಳಿ, ಆಲ್ಲೂರ(ಬಿ), ಮಂಗಲಗಿ, ಡೋಣಗಾಂವ್‌, ಪೇಟಶಿರೂರ, ಹೇರೂರ ಹಾಗೂ ಕುಂದಗೋಳ ಪ್ರಾ.ಕೃ.ಪ. ಸ.ಸಂಘ ನಿಯಮಿತ.

ಟಾಪ್ ನ್ಯೂಸ್

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Kasaragod: ಯುವತಿ ನಾಪತ್ತೆ; ದೂರು ದಾಖಲು

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.